ಜೊತೆ ಜೊತೆಯಲಿ ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡಿ, ಜನ ಮನ್ನಣೆ ಪಡೆದು ಮುನ್ನುಗ್ಗುತ್ತಿರುವ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಕಥಾಹಂದರವನ್ನು ಹೊಂದಿರುವ ಧಾರಾವಾಹಿ. ಕನ್ನಡ ಕಿರುತೆರೆಯಲ್ಲಿ ಹೊಸ ಇತಿಹಾಸ, ಟಿ.ಆರ್.ಪಿ.ಯಲ್ಲಿ ಹೊಸ ದಾಖಲೆ ಬರೆದಿರುವ ಈ ಧಾರಾವಾಹಿಯ ಪ್ರತಿ ವಿಷಯವೂ ಕೂಡಾ ಈಗ ಜನರ ಗಮನವನ್ನು ಸೆಳೆಯುತ್ತಿದೆ. ಜೊತೆ ಜೊತೆಯಲಿ ಧಾರಾವಾಹಿಯ ನಟ, ನಟಿ ಹೀಗೆ ಎಲ್ಲ ವಿಷಯಗಳನ್ನು ತಿಳಿಯ ಬಯಸಿದ್ದಾರೆ ವೀಕ್ಷಕರು. ಆರಂಭದಿಂದಲೂ ಧಾರಾವಾಹಿ ಅಪಾರ ಜನಾದರಣೆಯನ್ನು ಪಡೆದಿದೆ.ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಪ್ರಮುಖ ಆಕರ್ಷಣೆಯಂತೆ ಕಂಡಿದ್ದಾರೆ ನಟ‌ ಅನಿರುದ್ ಅವರು.

ಅವರ ಪ್ರಬುದ್ಧ ನಟನೆ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಮೊದಲ ಬಾರಿಗೆ ಕಿರುತೆರೆಗೆ ಪ್ರವೇಶ ಮಾಡಿರುವ ಅನಿರುದ್ ಅವರು ಜೊತೆ ಜೊತೆಯಲಿ ಧಾರಾವಾಹಿಯ ಪ್ರಮುಖ ಪಾತ್ರವಾದ ಆರ್ಯವರ್ಧನ್ ಪಾತ್ರದಲ್ಲಿ ನಟಿಸಿದ್ದು, ಅವರ ಜೊತೆಯಾಗಿ ನಟಿಯಾಗಿ ಕಿರುತೆರೆಗೆ ಪರಿಚಯವಾಗಿದ್ದಾರೆ ಮೇಘಾ ಶೆಟ್ಟಿ ಅವರು. ಮೊದಲ ಧಾರಾವಾಹಿಯ ಮೂಲಕವೇ ಮೇಘಾ ಅವರು ಮನಸ್ಸಲ್ಲಿ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಜೊತೆ ಜೊತೆಯಲಿ ಧಾರವಾಹಿ ತಂಡದ ಭರ್ಜರಿ ಯಶಸ್ಸಿನ ಹಿಂದೆ zee kannada ವಾಹಿನಿ ಸೇರಿದಂತೆ ಇಡೀ ಜೊತೆ ಜೊತೆಯಲಿ ಟೆಕ್ನಿಕಲ್ ಟೀಮ್ ಪಡುತ್ತಿರುವ ಶ್ರಮ ಮೆಚ್ಚಲೇ ಬೇಕು. ನೆನ್ನೆ ಜೊತೆ ಜೊತೆಯಲಿ ಧಾರವಾಹಿ ತಂಡ ಬೆಂಗಳೂರಿನ ರಾಜಾಜಿನಗರದಲ್ಲಿ ಚಿತ್ರೀಕರಣ ಮುಗಿಸಿ ಬಸವನಗುಡಿ ಕಡೆಗೆ ಸಾಮಾನ್ಯ ಜನರಂತೆ ನಮ್ಮ ಮೆಟ್ರೋ ದಲ್ಲಿ ಪ್ರಯಾಣ ಮಾಡಿದೆ. ಈ ವೇಳೆ ಜನಸಾಮಾನ್ಯರು ನೆಚ್ಚಿನ ಅನಿರುದ್ ಮತ್ತು ಮೇಘ ಶೆಟ್ಟಿ ಸೇರಿ ಜೊತೆ ಜೊತೆಯಲಿ ತಂಡದ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಈ ಫೋಟೋಗಳು ವೈರಲ್ ಆಗುತ್ತಿವೆ.

https://m.facebook.com/story.php?story_fbid=156154195784821&id=107502077316700

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here