ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಪ್ರಸಾರ ಆಗೋ ಕನ್ನಡ ಕೋಗಿಲೇ ಸಿಂಗಿಂಗ್ ಶೋ ಎಂದರೆ ಕೂಡಲೇ ನೆನಪಾಗೋದು ಕೊಪ್ಪಳದ ಅರ್ಜುನ್ ಇಟಗಿ. ತನ್ನದೇ ಸ್ಟೈಲ್ ನಿಂದ ಈಗಾಗಲೇ ರಾಜ್ಯದೆಲ್ಲೆಡೆ ಹೆಸರು ಮಾಡಿರುವ ಇತ್ತೀಚಿಗೆ ಇದೇ ಕಾರ್ಯಕ್ರಮದಲ್ಲಿ ಹಾಡಿದ ಒಂದು ಹಾಡು ಎಲ್ಲೆಡೆ ಹವಾ ಸೃಷ್ಟಿ ಮಾಡಿದೆ. ಅರ್ಜುನ್ ಇಟಗಿ ಹಾಡಿದ ನನ್ನ ಗೆಳತಿ, ನನ್ನ ಗೆಳತಿ ಹಾಡು ಈಗ ಹಲವರಿಗೆ ಬಹಳ ಪ್ರಿಯ ಎನಿಸಿದೆ‌. ಎಲ್ಲೆಲ್ಲೂ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿರುವ ಈ ಹಾಡು, ಬಹಳಷ್ಟು ಜನಪ್ರಿಯ ಆಗಿರೋದಂತೂ ನಿಜ. ಆದರೆ ಈಗ ಇದೇ ಹಾಡಿನ ಬಗ್ಗೆ ಒಂದು ಆರೋಪ ಕೂಡಾ ಕೇಳಿ ಬಂದಿದ್ದು, ಹಾಡಿನ ಬಗ್ಗೆ ಆರೋಪ ಆದ್ರೂ ಏನು ಅನ್ನೋದಕ್ಕೆ ಉತ್ತರ ಇಲ್ಲಿದೆ.

ಈ ಹಾಡಿನ ಬಗ್ಗೆ ಈಗ ಮಾಡಿರೋ ಆರೋಪ ಏನಂದ್ರೆ ಸಾಹಿತಿಯ ಅನುಮತಿ ಇಲ್ದೇನೆ, ಹಾಡನ್ನು ಕದ್ದು ರ್ಯಾಪರ್ ಸಾಂಗ್ ಮಾಡಿದ್ದಾರೆ ಅನ್ನೋದು. ಈ ಆರೋಪ ಮಾಡಿರೋದು ಧಾರವಾಡ ಜಿಲ್ಲೆಯ ತಾರಿಹಾಳ ಗ್ರಾಮದ ನಿವಾಸಿಯಾದ ಕಲಾವಿದ ಮಂಜುನಾಥ್ ಸಂಗಳ ಅವರು. ಅವರು ಆರೋಪ ಮಾಡಿರೋದಕ್ಕೆ ಕಾರಣ, ಈಗ ರ್ಯಾಪರ್ ಸಾಂಗ್ ಆಗಿ ಜನಪ್ರಿಯ ಆಗಿರೋ ಈ ಹಾಡನ್ನು ಬರೆದಿರೋದು ಇದೇ ಮಂಜುನಾಥ ಸಂಗಳ ಅವರು. ಅವರ ಹಾಡನ್ನು ಬೆಂಗಳೂರು ಮೂಲದ ಸಂಗೀತಗಾರರೊಬ್ಬರು ಸಾಹಿತಿಯ ಅನುಮತಿಯನ್ನೇ ಪಡ್ಕೊಳ್ಳದೆ ಅದನ್ನು ರ್ಯಾಪರ್ ಸಾಂಗ್ ಮಾಡಿದ್ದಾರೆ ಅನ್ನೋದೆ ಈಗಿನ ಸಮಸ್ಯೆ ಆಗಿದೆ.

ನಾನು ಸಂಯೋಜನೆ ಮಾಡಿರುವಂತಹ ಹಾಡನ್ನು ನನ್ನ ಅನುಮತಿ ಇಲ್ದೇ ಹೇಗೆ ಅವರು ಬಳಸಿಕೊಂಡಿದ್ದಾರೆ ಅನ್ನೋದು ಈಗ ಮಂಜುನಾಥ ಸಂಗಳ ಅವರ ಪ್ರಶ್ನೆ‌. ಹಾಡೇನೋ ಸೂಪರ್ ಹಿಟ್ ಕೂಡಾ ಆಗಿದೆ. ಆದ್ರೆ ವಿಷಾದ ಏನಂದ್ರೆ ಆ ಹಾಡನ್ನು ಬರೆದೆ ಅಂತ ಹೇಳ್ತಾ ಇರೋ ನಿಜವಾದ ರಚನೆಕಾರನ ಹೆಸರೇ ಇದುವರೆಗೂ ಎಲ್ಲೂ ಕೇಳಿ ಬಂದಿಲ್ಲ. ಅಲ್ಲದೆ ತನ್ನ ಹಾಡು ಅಷ್ಟ್ ಫೇಮಸ್ ಆದ್ರೂ ನನಗೆ ಮಾತ್ರ ಅದ್ರಿಂದ ಏನ್ ಪ್ರಯೋಜನ ಆಗ್ಲಿಲ್ಲ ಅನ್ನೋದೆ ಈಗ ಮಂಜುನಾಥ್ ಅವರಿಗೆ ಬಹಳಷ್ಟು ಬೇಸರವನ್ನು ತಂದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here