ಕೇರಳ ಎಂದರೆ ಮಳೆಯ ತೀವ್ರತೆ ಎಂಬಂತೆ ಆಗಿದ್ದು, ದೇವರ ನಾಡು ಎಂದು , ಪ್ರವಾಸಿಗರ ಸ್ವರ್ಗ ಎಂದೆಲ್ಲಾ ಕರೆಯಲ್ಪಡುವ ಕೇರಳ ಹಿಂದೆಂದೂ ಕಾಣದಂತಹ ಪ್ರಮಾಣದಲ್ಲಿ ಮಳೆಯ ಹೊಡೆತಕ್ಕೆ ತತ್ತರಿಸಿದ್ದು, ಜಲ ಪ್ರಳಯವೇ ಅಲ್ಲಿ ಸಂಭವಿಸಿದೆ. ಅತಿವೃಷ್ಡಿ ಒಂದೆಡೆ, ಮತ್ತೊಂದೆಡೆ ಭೂಕುಸಿತದಿಂದ ಕಂಗಲಾಗಿರುವ ಜನ ಜೀವನ ನರಕ ಸದೃಶವಾಗಿದ್ದು, ಕೇರಳದ ನೆರವಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು 500 ಕೋಟಿ ರೂಗಳ ನೆರವನ್ನು ಘೋಷಿಸಿರುವುದು ಮಾತ್ರವಲ್ಲದೆ, ಕೇರಳದ ಪ್ರವಾಹ ಪರಿಸ್ಥಿತಿಯ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ತಾವು ವೈಮಾನಿಕ ಸಮೀಕ್ಷೆಗೆ ತೆರಳುವ ಮುನ್ನ ಕೇರಳದ ಬಗ್ಗೆ ವರದಿ ಪಡೆದ ಅವರು ಪರಿಹಾರವನ್ನು ಘೋಷಣೆ ಮಾಡಿದ್ದಾರೆ.

ಕೇರಳದ ಸಂದಿಗ್ಧ ಪರಿಸ್ಥಿತಿಯನ್ನು ಸಮೀಕ್ಷೆ ನಡೆಸಲು ,‌ನಿನ್ನೆ ರಾತ್ರಿಯೇ ಕೇರಳ ರಾಜಧಾನಿ ತಲುಪಿದ್ದ ಮೋದಿಯವರನ್ನು, ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಸತ್ಯ ಶಿವನ್, ಹಾಗೂ ಆಲ್ಫೋನ್ಸ್ (ಕೇಂದ್ರ ಸಚಿವರು)
ಬರಮಾಡಿಕೊಂಡು, ಅವರಿಗೆ ಪರಿಸ್ಥಿತಿಯನ್ನು ಕುರಿತಾಗಿ ತಿಳಿಸಿಕೊಟ್ಟಿದ್ದಾರೆ. ತ್ರಿವೇಂಡ್ರಂ ನಿಂದ ಕೊಚ್ಚಿಗೆ ಮೋದಿಯವರು ವೈಮಾನಿಕ ಸಮೀಕ್ಷೆಗೆ ತೆರಳಿದ್ದಾರೆ. ಸಮೀಕ್ಷೆಯ ನಂತರ ಉನ್ನತ ಮಟ್ಟದ ಸಭೆಯನ್ನು ಕರೆದು ಅಲ್ಲಿ ಜಲ ಪ್ರಳಯದಿಂದಾದ ಅನಾಹುತಗಳ ಬಗ್ಗೆ ಪರಾಮರ್ಶೆ ನಡೆಸಿದ್ದಾರೆ. ಆಗಲೂ ಕೂಡಾ ಮುಖ್ಯಮಂತ್ರಿ, ರಾಜ್ಯಪಾಲ ಹಾಗೂ ಕೇಂದ್ರ ಸಚಿವರು ಉಪಸ್ಥಿತರಿದ್ದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಖುದ್ದು ವೈಮಾನಿಕ ಸಮೀಕ್ಷೆ ನಡೆಸಿದ್ದ ಪ್ರಧಾನಿ 500 ಕೋಟಿ ರೂಗಳ ತುರ್ತು ಮದ್ಯಂತರ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಕೇರಳದಲ್ಲಿ ನಿರಂತರವಾಗಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ರಾಜ್ಯದ ಎಲ್ಲಾ ನದಿಗಳು ತುಂಬಿ, ಅಪಾಯದ ಮಟ್ಟ ಮೀರಿ ಹರಿದಿರುವುದರಿಂದ ರಾಜ್ಯದ 14 ಜಿಲ್ಲೆಗಳಲ್ಲಿ ಪ್ರವಾಹ ಹರಿದಿದೆ, ಇದಲ್ಲದೆ ಎಲ್ಲಾ‌ ಡ್ಯಾಂಗಳು ಸಹಾ ತುಂಬಿದ್ದು ಹೊರಬಿಟ್ಟ ನೀರಿನಿಂದಾಗಿ ಮತ್ತಷ್ಟು ಸಮಸ್ಯೆಗಳು ಉಲ್ಬಣವಾಗಿವೆ. ಅಪಾಯದಲ್ಲಿ ಸಿಲುಕಿದ್ದ ಸುಮಾರು 80,000 ಜನರನ್ನು ಈಗಾಗಲೇ ರಕ್ಷಿಸಲಾಗಿದೆ. ಒಟ್ಟಾರೆ ಕೇರಳದ ಪರಿಸ್ಥಿತಿ ಚಿಂತಾಜನಕವಾಗಿದ್ದು ಸಹಾಯ ಎಲ್ಲೆಡೆಯಿಂದ ಬರುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here