ಇಂದು ಬೆಂಗಳೂರಿಗೆ ಆಗಮಿಸಿ ಚುನಾವಣೆ ಪ್ರಚಾರದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು.ಭಾಷಣದುದ್ದಕ್ಕೂ ಭಾರತೀಯ ಜನತಾ ಪಾರ್ಟಿಯ ಕಾರ್ಯಗಳು ಮತ್ತು ಎನ್ ಡಿ ಎ ಸರ್ಕಾರದ ಅಭಿವೃದ್ಧಿಯ ಬಗ್ಗೆ ಮಾತಾಡಿದ ಮೋದಿಯವರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರು ನರೇಂದ್ರ ಮೋದಿ. ಆದರೆ ಎಲ್ಲರೂ ಇಂದಿನ ನರೇಂದ್ರ ಮೋದಿಯವರ ಭಾಷಣದಲ್ಲಿ ಕರ್ನಾಟಕ ರಾಜ್ಯದ ಇತ್ತೀಚಿನ ಪ್ರಮುಖ ಸಮಸ್ಯೆಗಳಲ್ಲಿ ಒಂದಾದ ಮಹದಾಯಿ ಬಗ್ಗೆ ಅಪ್ಪಿತಪ್ಪಿಯೂ ತುಟಿ ಬಿಚ್ಚಲಿಲ್ಲ.

ಇದರಿಂದ ಮಹದಾಯಿ ಬಗ್ಗೆ ಪ್ರಧಾನಿ ಇಂದು ಮಾತನಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಕನ್ನಡಪರ ಹೋರಾಟಗಾರರಿಗೆ ಮತ್ತು ಉತ್ತರ ಕರ್ನಾಟಕ ರೈತರಿಗೆ ಬಹಳ ಬೇಸರವಾಗಿದೆ.ಈ ಬಗ್ಗೆ ಮಾತನಾಡಿದ ವಾಟಾಳ್ ನಾಗರಾಜ್ ನರೇಂದ್ರ ಮೋದಿಯವರಿಗೆ ಕನ್ನಡಿಗರ ಬಗ್ಗೆ ಕಾಳಜಿ ಇಲ್ಲ.ಅವರು ಬಂದಿರುವುದು ಕೇವಲ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಮಾತ್ರ ವಿನಹಃ ಕನ್ನಡಿಗರಿಗೆ ನರೇಂದ್ರ ಮೋದಿಯವರಿಂದ ಯಾವುದೇ ಸಹಾಯ ಇಲ್ಲ ಎಂದು ಕಿಡಿಕಾರಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here