ಪುಲ್ವಾಮಾದಲ್ಲಿ ಹೇಡಿ ಕೃತ್ಯ ನಡೆಸಿದ ಪಾಪಿ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಖಡಕ್​​​ ಎಚ್ಚರಿಕೆ ನೀಡಿದ್ದಾರೆ. ಇಂದು ನಡೆದ ವಂದೇ ಭಾರತ್​ ಎಕ್ಸ್​ಪ್ರೆಸ್​ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂಸ್ತಾನ ಈ ರೀತಿಯ ಕೃತ್ಯಕ್ಕೆ ಉತ್ತರ ಕೊಟ್ಟೇ ಕೊಡುತ್ತೆ ಅಂತ ಹೇಳಿದ್ರು. ಸೇನೆಗೆ ಎಲ್ಲಾ ರೀತಿಯ ಸ್ವಾತಂತ್ಯವಿದೆ. ಯೋಧರ ಕೆಚ್ಚೆದೆಯ ಬಗ್ಗೆ ನಮಗೆ ಸಂಪೂರ್ಣ ನಂಬಿಕೆ ಇದೆ. ಈ ಕೃತ್ಯದ ಹಿಂದಿರುವವರು ದೊಡ್ಡ ತಪ್ಪು ಮಾಡಿದ್ದಾರೆ. ಈ ಕೃತ್ಯಕ್ಕೆ ಅವರು ಭಾರೀ ದಂಡ ತೆರಬೇಕಾಗುತ್ತದೆ ಎಂದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿ ನಿಂತಿರೋ ನೆರೆ ದೇಶ, ತನ್ನ ಕೃತ್ಯದಿಂದ ಭಾರತದಲ್ಲಿ ಅಸ್ಥಿರತೆ ಸೃಷ್ಟಿಸಬೇಕು ಅಂದುಕೊಂಡಿದ್ದರೆ ಅದು ದೊಡ್ಡ ತಪ್ಪು.ಈ ಘಟನೆಯಿಂದ ಭಾರತೀಯರ ರಕ್ತ ಕುದಿಯುತ್ತಿದೆ

ಅವರ ಈ ಆಸೆ ಯಾವತ್ತೂ ಈಡೇರುವುದಿಲ್ಲ ಎಂದು ಹೇಳಿದ್ರು.  ಇಂದು ಇಡೀ ದೇಶದ ಜನರ ರಕ್ತ ಕುದಿಯುತ್ತಿದೆ. ದೇಶ ಒಂದಾಗಿದೆ, ಇಡೀ ದೇಶಾದ್ಯಂತ ಒಂದೇ ಮಾತು. ನಾನಾ ದೇಶಗಳು ಈ ಭಯೋತ್ಪಾದಕ ಕೃತ್ಯವನ್ನ ಕಟುವಾಗಿ ಖಂಡಿಸಿವೆ. ಭಾರತದ ಜೊತೆ ನಿಂತಿವೆ. ಆ ಎಲ್ಲಾ ದೇಶಗಳಿಗೆ ನಾನು ಆಭಾರಿಯಾಗಿದ್ದೇನೆ. ಎಲ್ಲಾ ಮಾನವತಾವಾದಿ ಶಕ್ತಿಗಳು ಒಂದಾಗಿ ಹೋರಾಡಬೇಕು, ಭಯೋತ್ಪಾದನೆಯನ್ನ ಹಿಮ್ಮೆಟ್ಟಬೇಕು.

ಎಲ್ಲಾ ದೇಶಗಳು ಒಂದೇ ಧ್ವನಿಯೊಂದಿಗೆ ಒಂದು ದಾರಿಯಲ್ಲಿ ನಡೆದರೆ ಭಯೋತ್ಪಾದನೆ ಅರೆಗಳಿಗೆಯೂ ಉಳಿಯಲ್ಲ ಎಂದರು.  ದೇಶಕ್ಕಾಗಿ ಮಡಿದ ನಮ್ಮ ಯೋಧರಿಗೆ ನಮನ ಸಲ್ಲಿಸುತ್ತಾ ಅವರಿಗೆ ಭರವಸೆ ನೀಡುತ್ತೇನೆ. ಯಾವ ಕನಸಿನೊಂದಿಗೆ ಅವರು ಮಡಿದರೋ ಆ ಕನಸನ್ನು ನನಸು ಮಾಡಲು ಇಡೀ ಜೀವನ ಸವೆಸುತ್ತೇವೆ. ನಮ್ಮ ವೀರಯೋಧರ ಆತ್ಮಕ್ಕೆ ನಮಿಸಿ ಮುಂದೆ ಸಾಗೋಣ ಎಂದು ಮೋದಿ ಹೇಳಿದ್ರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here