2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಸ್ಪಷ್ಟ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೇರಲಿದ್ದಾರೆ ಎಂದು ಚುನಾವಣಾಪೂರ್ವ ಸಮೀಕ್ಷೆಗಳು ಭವಿಷ್ಯ ನುಡಿದಿವೆ.ಭಾನುವಾರ ಪ್ರಕಟವಾದ ನಾಲ್ಕು ಚುನಾವಣಾ ಪೂರ್ವ ಸಮೀಕ್ಷೆಗಳು ಮೋದಿಯೇ ಅಧಿಕಾರ ಮುಂದುವರಿಸಲಿದ್ದಾರೆ ಎಂದಿವೆ.

ಟೈಮ್ಸ್ ನೌ – ವಿಎಂಆರ್ ಸಮೀಕ್ಷೆ ಪ್ರಕಾರ 542 ಸೀಟುಗಳಲ್ಲಿ ಎನ್‌ಡಿಎ 300 ಸೀಟು ಗಳಿಸಲಿದೆ. ರಿಪಬ್ಲಿಕ್ ಟಿವಿ – ಸಿವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿ ನೇತತ್ವದ ಪಕ್ಷಗಳು 287 ಸೀಟುಗಳನ್ನು ಗೆಲ್ಲಲಿವೆ. ಅದೇ ವೇಳೆ ರಿಪಬ್ಲಿಕ್ -ಜನ್ ಕೀ ಬಾತ್ ಸಮೀಕ್ಷೆ ಪ್ರಕಾರ ಎನ್‌ಡಿಎ 305 ಸೀಟು ಮತ್ತು ನ್ಯೂಸ್ ನೇಷನ್ ಸಮೀಕ್ಷೆ ಪ್ರಕಾರ ಎನ್‌ಡಿಎ 282- 290 ಸೀಟುಗಳನ್ನು ಗಳಿಸಲಿದೆ.ಕೇಂದ್ರದಲ್ಲಿ ಸರ್ಕಾರ ರಚಿಸಲು ಯಾವುದೇ ಪಕ್ಷ ಅಥವಾ ಮೈತ್ರಿಕೂಟಕ್ಕೆ 272 ಸೀಟುಗಳು ಬೇಕು.

2014ರಲ್ಲಿ ಎನ್‌ಡಿಎ 336 ಸೀಟುಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೇರಿತ್ತು. ಮೋದಿ ನೇತೃತ್ವದ ಬಿಜೆಪಿ 282 ಸೀಟುಗಳನ್ನು ಗಳಿಸಿತ್ತು. ಏತನ್ಮಧ್ಯೆ, ಮೂರು ಚುನಾವಣಾ ಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ನೇತೃತ್ವದ ಯುಪಿಎಗೆ 124- 128 ಸೀಟುಗಳು ಲಭಿಸಲಿವೆ ಎಂದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here