ಇಂದು ಲಿಂಗೈಕ್ಯರಾದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರ 113 ನೇ ಜಯಂತಿ. ಪ್ರತಿ ವರ್ಷ ಅವರ ಜಯಂತಿಯನ್ನು ಸಿದ್ದಗಂಗಾ ಮಠದಲ್ಲಿ ಬಹಳ ಅದ್ದೂರಿಯಾಗಿ ಭಕ್ತ ಸಮೂಹದ ಜೊತೆಗೆ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿತ್ತು‌. ಆದರೆ ಈ ಬಾರಿ ಕೊರೊನಾ ಸೋಂಕಿನ ಭೀತಿಯಿಂದಾಗಿ ಆಚರಣೆಯನ್ನು ರದ್ದು ಮಾಡಲಾಗಿದೆ. ಮಠಕ್ಕೆ ಭಕ್ತರ ಪ್ರವೇಶವನ್ನು ಈಗಾಗಲೇ ನಿಷೇಧ ಮಾಡಲಾಗಿದೆಯಾದರೂ ಅನ್ನ ದಾಸೋಹ ಕಾರ್ಯ ಮಾತ್ರ ನಿರಂತರವಾಗಿ ನಡೆಯುತ್ತಿದೆ. ತುಮಕೂರಿನ ಬಡವರು, ನಿರ್ಗತಿಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಮಠದ ಸ್ವಯಂಸೇವಕರು ಆಹಾರವನ್ನು ಪೂರೈಕೆ ಮಾಡುತ್ತಿದ್ದಾರೆ.

ಶ್ರೀಗಳ ಜನ್ಮ ದಿನ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಶುಭಾಶಯನ್ನು ಕೋರಿದ್ದಾರೆ. ಅವರು ತಮ್ಮ ಟ್ವೀಟ್ ನಲ್ಲಿ ” ಪರಮ‌ ಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿ ಅಂಗವಾಗಿ ಅವರಿಗೆ ಗೌರವ ನಮನಗಳು. ಸಮಾಜಕ್ಕೆ ಸ್ವಾಮೀಜಿ ನೀಡಿರುವ ಉತ್ಕೃಷ್ಟ ಕೊಡುಗೆ ಸದಾ ಸ್ಮರಣೀಯ.” ಎಂದು ಶ್ರೀಗಳನ್ನು ಸ್ಮರಿಸಿದ್ದಾರೆ. ಇದರ ಜೊತೆಗೆ ರಾಜ್ಯದ ಮುಖ್ಯಮಂತ್ರಿ ಯವರಾದ ಬಿ.ಎಸ್.ಯಡಿಯೂರಪ್ಪ ಅವರು ಕೂಡಾ ತಮ್ಮ ಟ್ವೀಟ್ ನಲ್ಲಿ ಶ್ರೀಗಳ ಜಯಂತಿಗೆ ಶುಭಾಶಯನ್ನು ಕೋರಿದ್ದಾರೆ.

ಯಡಿಯೂರಪ್ಪ ಅವರು ತಮ್ಮ ಟ್ವೀಟ್ ನಲ್ಲಿ “ಕಾಯಕ ಯೋಗಿ, ಲಕ್ಷಾಂತರ ಮಕ್ಕಳಿಗೆ ತ್ರಿವಿಧ ದಾಸೋಹದ ಮೂಲಕ ಬದುಕು ಕೊಟ್ಟ ಮಹಾ ಪುರುಷ ಸಿದ್ದಗಂಗೆಯ ಸಿದ್ಧಿಪುರುಷ, ಲಿಂಗೈಕ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಜಯಂತಿಯಂದು ಅವರ ಚರಣಗಳಿಗೆ ಕೋಟಿ ನಮನಗಳು.” ಎಂದು ಶುಭಾಶಯನ್ನು ಕೋರಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here