ಪ್ರಧಾನಿ ನರೇಂದ್ರ ಮೋದಿ ಕೂಡ ‘ದೀಪಾಸ್ತ್ರ’ವನ್ನು ಕೈಗೆತ್ತಿಕೊಂಡಿದ್ದಾರೆ. ಏಪ್ರಿಲ್ 5 ರಂದು ಮನೆಯ ಎಲ್ಲ ದೀಪಗಳನ್ನು ಆರಿಸಿ, 9 ನಿಮಿಷಗಳ ಕಾಲ ತಮ್ಮ ಕೈಯಲ್ಲಿ ಮೇಣದ ದೀಪ, ಟಾರ್ಚ್ ಹಾಗೂ ಮೊಬೈಲ್ ಟಾರ್ಚ್ ಅನ್ನು ಹಿಡಿದು ತಮ್ಮ ತಮ್ಮ ಮನೆ ಬಾಗಿಲಲ್ಲಿ ಅಥವಾ ಬಾಲ್ಕನಿಯಲ್ಲಿ ನಿಲ್ಲಲು ಪ್ರಧಾನಿ ಮೋದಿ ದೇಶದ ನಾಗರಿಕರಲ್ಲಿ ಮನವಿ ಮಾಡಿದ್ದು, ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸಲು ಮಹಾಶಕ್ತಿಯ ಪರಿಚಯ ನೀಡಲು ಮನವಿ ಮಾಡಿದ್ದಾರೆ.ಹಾಗಾದರೆ ದೀಪ ಹಚ್ಚುವ ಉದ್ದೇಶ ಏನು ಎಂದು ತಿಳಿಯೋಣ ಬನ್ನಿ…ಸನಾತನ ಧರ್ಮದಲ್ಲಿ ದೀಪ ಅಥವಾ ಬೆಳಕಿಗೆ ತನ್ನದೇ ಆದ ಮಹತ್ವವಿದೆ. ಇದು ತನ್ನ ತೀಕ್ಷ ಪ್ರಕಾಶದಿಂದ ಜೀವನದಲ್ಲಿ ಚೈತನ್ಯ ತುಂಬುತ್ತದೆ. ಸನಾತನ ಧರ್ಮದಲ್ಲಿ ದೀಪ ಬೆಳಗುವುದನ್ನು ಸಕಾರಾತ್ಮಕ ರೂಪದಲ್ಲಿ ನೋಡಲಾಗುತ್ತದೆ. ನಮ್ಮ ಜೀವನದಲ್ಲಿನ ಅಂಧಕಾರವನ್ನು ತೊಲಗಿಸಿ, ಬೆಳಕು ಮೂಡಿಸುವುದು ಎಂದೂ ಕೂಡ ಇದರ ಅರ್ಥವಾಗುತ್ತದೆ. ವಿಪತ್ತಿನಿಂದ ಮುಕ್ತಿ ಹಾಗೂ ಕಷ್ಟಗಳ ನಿವಾರಣೆಯ ದ್ಯೋತಕವಾಗಿ ದೀಪ ಬೆಳಗಲಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ತುಪ್ಪದ ದೀಪ ಬೆಳಗುವುದರಿಂದ ಮನೆಯಲ್ಲಿ ಸುಖ,

ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಬೆಳಕನ್ನು ರಕ್ಷಾ ಕವಚ ಎಂದೂ ಕೂಡ ಕರೆಯಲಾಗುತ್ತದೆ. ದೀಪ ಬೆಳಗುವುದರಿಂದ ಸಕಾರಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ. ದೇವಾಧಿ ದೇವ ಈಶ್ವರ ನಮ್ಮ ಜೊತೆ ಬೆಳಕಿನ ರೂಪದಲ್ಲಿ ಇರುತ್ತಾನೆ ಎಂದು ಭಾರತೀಯ ಪರಂಪರೆಯಲ್ಲಿ ಉಲ್ಲೇಖಿಸಲಾಗಿದೆ. ಪುರಾಣಗಳಲ್ಲಿ ಶ್ರೀರಾಮಚಂದ್ರ 14 ವರ್ಷಗಳ ವನವಾಸದಿಂದ ಅಯೋಧ್ಯೆಗೆ ಮರಳಿದಾಗ ದೀಪ ಪ್ರಜ್ವಲಿಸಲಾಗಿತ್ತು ಎಂದು ಉಲ್ಲೇಖಿಸಲಾಗಿದೆ. ಕಾರ್ತಿಕ ಅಮಾವಾಸೆಯಂದು ತನ್ನ 14 ವರ್ಷಗಳ ವನವಾಸ ಪೂರ್ಣಗೊಳಿಸಿ ಶ್ರೀರಾಮ ಅಯೋಧ್ಯೆಗೆ ಮರಳಿದಾಗ, ಅಯೋಧ್ಯೆಯ ನಿವಾಸಿಗಳು ದೀಪ ಪ್ರಜ್ವಲಿಸಿ ಸಂತಸ ವ್ಯಕ್ತಪಡಿಸಿದ್ದರು ಎಂದು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ಇಡೀ ಅಯೋಧ್ಯಾ ನಗರಿಯನ್ನು ಬಣ್ಣ-ಬಣ್ಣಗಳಿಂದ ಅಲಂಕರಿಸಿ ದೀಪ ಪ್ರಜ್ವಲಿಸಲಾಗಿತ್ತು ಎನ್ನಲಾಗಿದೆ. ಜನರ ಕಷ್ಟ ಕಾರ್ಪಣ್ಯಗಳಿಗೆ ಇದು ಅಂತ್ಯಹಾಡಲಿದೆ ಎಂಬ ಅಭಿಪ್ರಾಯವಿದೆ. ಅಂದು ಶ್ರೀರಾಮನ ವಿರಹ ಪೀಡೆಯಿಂದ ಮನರಿಗೆ ಮುಕ್ತಿ ಸಿಕ್ಕಿತ್ತು ಹಾಗೂ ಅವರ ಆಗಮನದಿಂದ ಜನರ ಬಾಳಿನಲ್ಲಿ ಹೊಸ ಚೈತನ್ಯ ಮನೆ ಮಾಡಿತ್ತು .

ದೀಪ ಬೆಳಗುವ ಮೂಲಕ ಅಂದು ಜನರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದರು.ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರಿಗೆ ಸಂದೇಶವನ್ನು ಸಾರಿರುವ ಪ್ರಧಾನಿ ನರೇಂದ್ರ ಮೋದಿ, “ನಾಲ್ಕು ದಿಕ್ಕುಗಳಲ್ಲಿ ಪ್ರತಿಯೊಬ್ಬ ಮನುಷ್ಯ ಬೆಳಗುವ ಒಂದೊಂದು ದೀಪದಿಂದ ಮಹಾಶಕ್ತಿಯ ಅನುಭೂತಿಯಾಗಲಿದೆ, ಇದರಿಂದ ನಾವೆಲ್ಲರೂ ಒಂದೇ ಗುರಿಯತ್ತ ಸಾಗುತ್ತಿದ್ದೇವೆ ಎಂಬುದು ಸಿದ್ಧವಾಗುತ್ತದೆ. ಅಂಧಕಾರದಿಂದ ಕೂಡಿರುವ ಕೊರೊನಾ ಸಂಕಷ್ಟವನ್ನು ಸೋಲಿಸಲು ಬೆಳಕಿನ ತೀಕ್ಷತೆಯನ್ನು ನಾಲ್ಕೂ ದಿಕ್ಕುಗಳಲ್ಲಿ ಪಸರಿಸುವ ಅವಶ್ಯಕತೆ ಇದೆ. ಹೀಗಾಗಿ ಏಪ್ರಿಲ್ 5 ರಂದು ರಾತ್ರಿ 9ಗಂಟೆಗೆ 130 ಕೋಟಿ ದೇಶದ ನಾಗರಿಕರ ಮಹಾಶಕ್ತಿಯನ್ನು ಬದಿದೇಬ್ಬಿಸುವ ಅಗತ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here