ದೇಶದ ಅತ್ಯಂತ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನೋ ವೈರಸ್ ಬಗ್ಗೆ ಜನತೆಗೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶೇಷ ಮನವಿಯ ಜೊತೆಗೆ ಸಂದೇಶವನ್ನು ನೀಡಿದ್ದಾರೆ.ಇಂದು ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವದಾದ್ಯಂತ ಕೊರೋನೋ ವೈರಸ್ ದಿನೇದಿನೇ ಹೆಚ್ಚಾಗಿ ಹರಡುತ್ತಿದ್ದು ಇದಕ್ಕೆ ಯಾವುದೇ ರೀತಿಯ ಲಸಿಕೆ ಕಂಡು ಹಿಡಿದಿಲ್ಲ,  ದೇಶದ ಜನರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಎಂದು ತಿಳಿಸಿದ್ದಾರೆ. ಕೊರೊನ ವೈರಸ್ ತಡೆಯಲು ಭಾರತವು ಶಕ್ತಿಮೀರಿ ಶ್ರಮಿಸುತ್ತಿದೆ ಆದರೆ ಅದನ್ನು ತಡೆಯುವುದು ಜನಗಳಿಂದ ಮಾತ್ರ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಕೊರೊನ ಜಾಗೃತಿಗಾಗಿ ಇದೇ ಭಾನುವಾರ “ಜನತಾ ಕರ್ಫ್ಯೂ” ಹಮ್ಮಿಕೊಳ್ಳಲು ರಾಷ್ಟ್ರದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಚಿಸಿದ್ದಾರೆ. “ಜನತಾ ಕರ್ಫ್ಯೂ” ಎಂದರೆ ಭಾನುವಾರ ಬೆಳಿಗ್ಗೆ 7ಗಂಟೆಯಿಂದ 9:00 ಗಂಟೆ ತನಕ ಯಾರೂ ಸಹ ಮನೆಗಳಿಂದ ಹೊರಗಡೆ ಬರದೇ ಮನೆಯಲ್ಲಿದ್ದುಕೊಂಡೇ ತಮ್ಮ ಕೆಲಸಗಳನ್ನು ಮಾಡಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಮನವಿ ಮಾಡಿದ್ದಾರೆ. ಇನ್ನು ಆದಷ್ಟು ಮನೆಯಲ್ಲಿದ್ದುಕೊಂಡೇ ಎಲ್ಲರೂ ಇನ್ನೂ ಎರಡು-ಮೂರು ವಾರಗಳ ಕಾಲ ಕೆಲಸವನ್ನು ಮಾಡಿಕೊಳ್ಳುವುದು ಉತ್ತಮ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಇದೇ ವೇಳೆ ಭಾನುವಾರ ಸಂಜೆ 5 ಗಂಟೆಗೆ ಎಲ್ಲರೂ ನಿಮ್ಮ ಮನೆಗಳಿಂದ ನಿಮ್ಮ ಮನೆಯ ಕಿಟಕಿಗಳಿಂದ ಚಪ್ಪಾಳೆ ತಟ್ಟುವ ಮೂಲಕ ಕೊರೊನ ವಿರುದ್ಧ ಹೋರಾಡುತ್ತಿರುವ ಎಲ್ಲಾ ವೈದ್ಯಕೀಯ ಸಿಬ್ಬಂದಿ ಹಾಗೂ ಎಲ್ಲಾ ರೀತಿಯ ಜನತೆಗೆ ಅಭಿನಂದನೆಗಳನ್ನು ತಿಳಿಸಬೇಕು ಎಂದು ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ. ಇನ್ನು ಇದೇ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಜನರು ಆದಷ್ಟು ಎಚ್ಚರಿಕೆಯಿಂದ ಮತ್ತು ಸ್ವಚ್ಛತೆಯಿಂದ ಇರಬೇಕು ಸಣ್ಣಪುಟ್ಟದಕ್ಕೆ ಆಸ್ಪತ್ರೆಗೆ ತೆರಳಿ ಬೇಡಿ ಇದರಿಂದ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ

ತೊಂದರೆಯಾಗಲಿದೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕಷ್ಟವಾಗುವ ಸಂಭವವಿದೆ ಎಂದು ತಿಳಿಸಿದ್ದಾರೆ. ಇನ್ನೂ ಕೆಲವುದಿನ ಯಾರು ಒಬ್ಬರನ್ನೊಬ್ಬರು ಮುಟ್ಟಿ ಮಾತನಾಡಿಸುವುದು ಮಾತನಾಡಿಸದೆ ಆದಷ್ಟು ಅಂತರ ಕಾಯ್ದುಕೊಳ್ಳುವುದು ಜನತೆಯ ಹಿತದೃಷ್ಟಿಯಲ್ಲಿ ಉತ್ತಮ ಎಂದು ಮೋದಿ ಹೇಳಿದ್ದಾರೆ.ಕೊರೊನ ವೈರಸ್ ವಿರುದ್ಧ ಹೋರಾಡಲು ಭಾರತ ಸಜ್ಜಾಗಿದೆ ಸಂಯಮ ಮತ್ತು ಸಂಕಲ್ಪ ಕೊರೊನ ಇಂದ ದೂರ ಉಳಿಯಲು ಇರುವ ಉತ್ತಮ ಮಾರ್ಗವೆಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here