ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಮುಗಿಸಿಬಿಡಬೇಕಂತೆ. ಹೌದು ಹೀಗೆ ಹೇಳಿದ್ದು ಬೇರಾರು ಅಲ್ಲ.ರಾಜ್ಯದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು‌. ಕರ್ನಾಟಕದ ಜನರಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಅವರು ಮೋದಿಯವರನ್ನು ಮುಗಿಸಿಬಿಡಿ ಎಂದು ಕರೆ ಕೊಟ್ಟಿದ್ದಾರೆ.

ಕನ್ನಡದ ಖ್ಯಾತ ನ್ಯೂಸ್ ಚಾನಲ್  ಪಬ್ಲಿಕ್ ಟಿವಿ ಜೊತೆ ಮಾತಾನಾಡಿದ ದೊರೆಸ್ವಾಮಿ ಅವರು, ಕರ್ನಾಟಕದಲ್ಲಿ ಮೋದಿ ಪಕ್ಷಕ್ಕೆ ಮತವನ್ನು ಕೊಡಬೇಡಿ, ಸರ್ವಾಧಿಕಾರಿ ಧೋರಣೆ, ನೀಚತನದ ಮಾತನ್ನಾಡುವ ಮೋದಿಯನ್ನು ಮುಗಿಸಿ, ಸೋಲುನುಣಿಸಬೇಕು. ಆತ ಮಾಡೋದೆಲ್ಲ ತಪ್ಪು ಕೆಲ್ಸ ಅಂತಾ ಏಕವಚನದಲ್ಲಿಯೇ ಅಂತಾ ಕಿಡಿಕಾರಿದ್ರು.

ಕರ್ನಾಟಕ ಬಿಜೆಪಿಯಲ್ಲಿ ಲೀಡರ್‍ಗಳೇ ಇಲ್ಲ. ಕರ್ನಾಟಕ ವರ್ಸಸ್ ಮೋದಿ ಅನ್ನುವಂತಾಗಿದೆ. ಯಡಿಯೂರಪ್ಪ ಒಬ್ಬ ಡಮ್ಮಿ ಕ್ಯಾಂಡಿಡೇಟ್ ಅಂತಾ ಲೇವಡಿ ಮಾಡಿದ್ದಾರೆ.ಅತಂತ್ರ ಸರ್ಕಾರ ನಿರ್ಮಾಣವಾದ್ರೇ, ಜೆಡಿಎಸ್ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಕೈಜೋಡಿಸಬಾರದು ಅಂತಾ ಈಗಾಗಲೇ ದೇವೇಗೌಡರಿಗೆ ಹೇಳಿದ್ದೇನೆ. ಮೂವತ್ತು ನಲವತ್ತು ಇಟ್ಕೊಂಡು ವ್ಯವಹಾರ ಮಾಡಬೇಡಿ.

ಪದೇ ಪದೇ ನಿಮ್ಮ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆಂದು ಕುಡಿಕೆ ಗಂಜಿ ಆಸೆಗೆ ಬಿದ್ದು ಆತ್ಮ ಮಾರಿಕೊಳ್ಳಬೇಡಿ ಅಂತಾ ಹೇಳಿದ್ದೇನೆ. ಅವರು ನನ್ನ ಮಾತು ಕೇಳ್ತಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ರು.ದೇಶದ ಒಳಿತಿಗಾಗಿ ಜೆಡಿಎಸ್ ಕಾಂಗ್ರೆಸ್ ಜೊತೆಗಿನ ಭಿನ್ನಾಬಿಪ್ರಾಯ ಮರೆತು ಕೈಜೋಡಿಸಬೇಕು. ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿಯಾಗಬೇಕು ಅಂದ್ರು. ಈ ವೀಡಿಯೋ ನೋಡಿ

ಮಾಹಿತಿ ಮತ್ತು ವೀಡಿಯೋ :- ಪಬ್ಲಿಕ್ ಟಿವಿ.ಪಬ್ಲಿಕ್ ಯೂಟ್ಯೂಬ್ ಚಾನಲ್ .

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here