ಕೊರೊನಾ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಅನ್ನು ಅಳವಡಿಸಲಾಗಿದೆ. ಲಾಕ್ ಡೌನ್ ಆದೇಶದ ಹಿನ್ನೆಲೆಯಲ್ಲಿ ಜನ ಜೀವನಕ್ಕೆ ತೊಂದರೆಯಾಗಿದೆ. ಈ ವಿಷಯಕ್ಕಾಗಿ ತಾನು ಜನರ ಕ್ಷಮೆಯನ್ನು ಕೋರುತ್ತಿರುವುದಾಗಿ ಪ್ರಧಾನಿ ಮೋದಿಯವರು ಜನರನ್ನು ಉದ್ದೇಶಿಸಿ ಹೇಳಿದ್ದಾರೆ.‌ ಇಂದಿನ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಆರೋಗ್ಯ ಭಾಗ್ಯವು ಎಲ್ಲದಕ್ಕಿಂತ ದೊಡ್ಡದು, ಅದಕ್ಕಾಗಿ ಲಕ್ಷ್ಮಣ ರೇಖೆಯನ್ನು ಪಾಲಿಸಲೇ ಬೇಕಾದ ಅನಿವಾರ್ಯತೆ ಇದೆ ಎಂದು ಅವರು ತಮ್ಮ ಮಾತಿನಲ್ಲಿ ಹೇಳಿದ್ದಾರೆ.

ದೇಶದಲ್ಲಿ ಜನರು ಉದ್ದೇಶಪೂರ್ವಕವಾಗಿ ಲಾಕ್ ಡೌನ್ ಉಲ್ಲಂಘನೆ ಮಾಡುತ್ತಿಲ್ಲವೆಂದು ತಿಳಿದಿದೆ. ಆದರೆ ಕೆಲವರು ಹಾಗೆ ಮಾಡುತ್ತಿದ್ದಾರೆ. ಅಂತಹವರಿಗೆ ನಾನು ಹೇಳುವುದು ಏನೆಂದರೆ ನೀವು ಲಾಕ್ ಡೌನ್ ಪಾಲನೆ ಮಾಡದಿದ್ರೆ ಕೊರೊನಾ ವೈರಸ್ ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಕಠಿಣವಾಗಲಿದೆ ಎಂದು ಅವರು ಹೇಳಿದ್ದಾರೆ. ಜೀವದ ಜೊತೆ ಆಟ ಆಡುವವರು ಲಾಕ್ ಡೌನ್ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಕೆಲವರು ಮನೆಯೊಳಗೆ ಅಲ್ಲ, ಹೊರಗೆ ಇದ್ದು ಕೊರೊನಾ ವಿರುದ್ಧ ಹೋರಾಟವನ್ನು ನಡೆಸುತ್ತಿದ್ದಾರೆ.‌

ವೈದ್ಯರು, ನರ್ಸ್ ಗಳು, ಪ್ಯಾರಾ ಮೆಡಿಕಲ್ ಫೋರ್ಸ್, ಇವರೆಲ್ಲಾ ಹರಲಿರುಳು ಸೈನಿಕರಂತೆ ನಿಂತು ಹೋರಾಡುತ್ತಿದ್ದು, ಅವರಿಗೆಲ್ಲಾ ಕೃತಜ್ಞತೆಯನ್ನು ತಿಳಿಸಿದ್ದಾರೆ. ಇದಾದ ನಂತರ ಕೊರೊನಾ ದಿಂದ ಗುಣಮುಖರಾದ ಟೆಕ್ಕಿಯೊಬ್ಬರೊಡನೆ ಮಾತನಾಡಿದ ಮೋದಿಯವರು, ಅವರಿಗೆ ತಮ್ಮ ಅನುಭವವನ್ನು ಆಡಿಯೋ ಮೂಲಕ ಹಂಚಿಕೊಂಡು, ಎಲ್ಲರಿಗೂ ಅದು ತಲುಪುವಂತೆ ವೈರಲ್ ಮಾಡಿ ಎಂದು ಕೂಡಾ ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here