ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ಇದೇ ತಿಂಗಳ 28 ರಂದು ಪ್ರಸಾರ ಆಗಲಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಟ್ವೀಟ್ ಒಂದನ್ನು ಮಾಡಿದ್ದು, ಜನರು ತಮ್ಮ ಐಡಿಯಾಗಳನ್ನು ನೀಡಬಹುದು ಎಂದು ಅವರು ತಿಳಿಸಿದ್ದಾರೆ. ಮನ್ ಕೀ ಬಾತ್ ಪ್ರಸಾರವಾಗಲು ಇನ್ನೂ ಸಮಯ ಇರುವುದರಿಂದ ಈ ವೇಳೆಯಲ್ಲಿ ಜನರು ಕೊರೊನಾ ನಿಯಂತ್ರಣಕ್ಕೆ ತಮ್ಮ ಉಪಾಯಗಳನ್ನು ಹಂಚಿಕೊಳ್ಳುವ ಮೂಲಕ ಅವರಿಗೆ ಮುಂದಿನ ಕಾರ್ಯಕ್ರಮದಲ್ಲಿ ಅದರ ಬಗ್ಗೆ ಮಾತನಾಡಲು, ಇನ್ನೂ ಹೆಚ್ಚು ಜನರನ್ನು ಅದರ ಮೂಲಕ ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಜನರು ಈಗಾಗಲೇ ಕೊರೊನಾ ನಿಯಂತ್ರಣದ ಬಗ್ಗೆ ತಮ್ಮದೇ ಆದ ಕೆಲವು ಆಲೋಚನೆಗಳನ್ನು ಮಾಡಿರುತ್ತಾರೆ. ಅಂತಹವರಿಗೆ ಅದನ್ನು ಹೇಳಿ ಕೊಳ್ಳುವ ಅವಕಾಶಬೇಕಿದ್ದು, ಅದಕ್ಕಾಗಿ ಈ ಅವಕಾಶವನ್ನು ನೀಡಲಾಗಿದೆ ಎನ್ನಬಹುದು. ಮೋದಿಯವರು ತಮ್ಮ ಹಿಂದಿನ ಮನ್ ಕೀ ಬಾತ್ ಕಾರ್ಯಕ್ರಮಗಳಲ್ಲಿ ಕೊರೊನಾ ವಾರಿಯರ್ಸ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು ಹಾಗೂ ಕೊರೊನಾ ಗೆದ್ದವರ ಬಗ್ಗೆ ಕೂಡಾ ಅವರು ವಿಚಾರಗಳನ್ನು ಹಂಚಿಕೊಂಡಿದ್ದರು.

ಮೇ ತಿಂಗಳಲ್ಲಿ ಲಾಕ್ ಡೌನ್ ಅನ್ನು ಹಂತ ಹಂತವಾಗಿ ಸಡಿಲ ಗೊಳಿಸಿದ ಹಿನ್ನೆಲೆಯಲ್ಲಿ ಮಾತನಾಡಿದ್ದ ಅವರು ಜನರಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಹಾಗೆ ಮನವಿಯನ್ನು ಮಾಡಿದ್ದರು ಹಾಗೂ ಕೈ ತೊಳೆಯುವ ಬಗ್ಗೆ, ಸ್ವಚ್ಚತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಕೂಡಾ ಜನರಿಗೆ ತಿಳಿಸಿದ್ದರು. ಈಗ ಅವರು ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜನರ ಐಡಿಯಾಗಳು ಏನು ಎಂಬುದನ್ನು ತಿಳಿಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here