ಕೊರೊನಾ ತನ್ನ ಅಟ್ಟಹಾಸವನ್ನು ಮೆರೆಯುತ್ತಿರುವ ಈ ಸಮಯದಲ್ಲಿ ಅನುಮಾನ ಅಥವಾ ಸೋಂಕಿನ ಲಕ್ಷಣ ಇರುವವರನ್ನು ಕೂಡಲೇ ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್ ನಲ್ಲಿ ಇಡಲಾಗುತ್ತಿದೆ. ಇದು ರೋಗ ನಿಯಂತ್ರಣದ ದೃಷ್ಟಿಯಿಂದ ಅನಿವಾರ್ಯ ಕೂಡಾ ಆಗಿದೆ. ಅದಕ್ಕೆ ವಿದೇಶಗಳಿಗೆ ಹೋಗಿ ಬಂದವರ ನ್ನು ಗುರುತಿಸಿ ಅವರನ್ನು ಹೋಂ ಕ್ವಾರಂಟೈನ್ ನಲ್ಲಿ ಕೂಡಾ ಇಡಲಾಗುತ್ತಿದೆ. ಇನ್ನು ಇವೆಲ್ಲವುಗಳ ಮಧ್ಯೆ ದೆಹಲಿಯಲ್ಲಿ ನಿಜಾಮುದ್ದೀನ್ ಮರ್ಕಜ್ ಜಮಾತ್ ಗೆ ಹೋಗಿ ಬಂದಿರುವವರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲಿಗೆ ಹೋಗಿ ಬಂದವರನ್ನು ಪತ್ತೆ ಹಚ್ಚಿ ಅವರನ್ನು ಪರೀಕ್ಷೆ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ಚರ್ಚೆ, ವಾದ, ವಿವಾದಗಳು ನಡೆಯುತ್ತಿದೆ.

ಈಗ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವೈರಲ್ ಆದ ವಿಡಿಯೋದಲ್ಲಿ ಮಾತನಾಡುತ್ತಿರುವ ವ್ಯಕ್ತಿ ಕೂಡಾ ದೆಹಲಿಗೆ ಹೋಗಿ ನಿಜಾಮುದ್ದೀನ್ ಮರ್ಕಜ್ ನ ತಬ್ಲೀಗಿ ಜಮಾತ್ ನಲ್ಲಿ ಭಾಗವಹಿಸಿ ಬಂದವರು ಎನ್ನಲಾಗಿದ್ದು, ಅವರನ್ನು ಕೊರೊನಾ ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳುವ ಬಗ್ಗೆ ಕೇಳಿದಾಗ, ಅವರು ನೀಡಿರುವ ಪ್ರತಿಕ್ರಿಯೆ ಹಾಗೂ ಸಿಟ್ಟಿನ ಮಾತುಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ. ಅವರು ತಮ್ಮ ಮಾತಿನಲ್ಲಿ ತಾನು ಕೊರೊನಾ ಪರೀಕ್ಷೆಗೆ ತಮ್ಮ ಅಸಮಾಧಾನ ಹೊರಹಾಕುತ್ತಿರುವುದು ಅರ್ಥವಾಗುತ್ತಿದೆ.

ವ್ಯಕ್ತಿಯನ್ನು ಪ್ರಶ್ನಿಸುತ್ತಿರುವವರಿಗೆ ಅವರು ಮೋದಿ ಈಗಾಗಲೇ ನೂರಾರು ದೇಶಗಳನ್ನು ಸುತ್ತಿ ಬಂದಿದ್ದು ಅವರಿಗೆ ಇರಬೇಕು ಕೊರೊನಾ ಮೊದಲು ಅವರಿಗೆ ಪರೀಕ್ಷೆ ಮಾಡಿಸಿ ಎಂದು ಹೇಳುತ್ತಾ, ಸುಮ್ಮನೆ ನಮಗೆ ಕೊರೊನಾ ಕೊರೊನಾ ಎಂದು ಏಕೆ ಹೇಳಲಾಗುತ್ತಿದೆ ಎಂದಿದ್ದಾರೆ. ಒಟ್ಟಾರೆ ಕೊರೊನಾ ಎಂಬುದು ಇದೀಗ ಭಾರತದಲ್ಲಿ ಜನರಿಗೆ ಸೋಕಿರುವುದು ಮಾತ್ರವೇ ಅಲ್ಲದೇ ಧಾರ್ಮಿಕ ವಿಚಾರವಾಗಿಯೂ ತೀವ್ರ ಚರ್ಚೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟು ಹಾಕಿದೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here