ಬಿಜೆಪಿ ಸರ್ಕಾರ ಬೀಳುವುದು ಬಹಳ ಸ್ಪಷ್ಟವಾಗಿದೆಯೆಂದು ಹೇಳಿದ್ದಾರೆ ಉತ್ತರ ಪ್ರದೇಶ ಪೂರ್ವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿರುವ ಪ್ರಿಯಾಂಕ ಗಾಂಧಿಯವರು. ಅವರ ಪತಿ ರಾಬರ್ಟ್ ವಾದ್ರಾ ಜೊತೆಯಲ್ಲಿ ದೆಹಲಿಯ ಲೋಧಿ ಎಸ್ಟೇಟ್ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ ಪ್ರಿಯಾಂಕ ಗಾಂಧಿಯವರು. ಮತದಾನ ಮಾಡಿ ಬಂದ ನಂತರ ಮಾದ್ಯಮಗಳೊಡನೆ ಮಾತನಾಡಿದ ಅವರು ಬಿಜೆಪಿ ಸರ್ಕಾರದಿಂದಾಗಿ ಜನರು ಅನೇಕ ತೊಂದರೆ ಅನುಭವಿಸಿದರು. ಅದಕ್ಕೆ ಜನರು ಮತದಾನದ ಮೂಲಕ ಅದಕ್ಕೆ ಉತ್ತರವನ್ನು ನೀಡಲಿದ್ದಾರೆ ಎಂದಿರುವ ಅವರು ಬಿಜೆಪಿ ಸೋಲು ಖಚಿತ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.

ಅವರು ಮಾತನಾಡುತ್ತಾಣ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣಗಳಲ್ಲಿ ನೈಜ ಹಾಗೂ ವಾಸ್ತವಕ್ಕೆ ಸಂಬಂಧಿಸಿದ ವಿಷಯಗಳನ್ನು ಕುರಿತು ಮಾತನಾಡುತ್ತಿಲ್ಲ. ಆದರೆ ಬದಲಾಗಿ ಅವರು ತಮ್ಮ ಭಾಷಣಗಳಲ್ಲಿ ಗೊತ್ತುಗುರಿಯಿಲ್ಲದ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಲೋಕಸಭೆಗೆ ಈಗ ನಡೆಯುತ್ತಿರುವ ಚುನಾವಣೆ ಹಾಗೂ ಮತದಾನ ಪ್ರಮುಖವಾಗಿದ್ದು, ಈ ಚುನಾವಣೆಯು ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟ ಎಂದು ಬಣ್ಣಿಸಿದ್ದಾರೆ.

ಇಂದು ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನವು ಪಶ್ಚಿಮ ಬಂಗಾಳ, ದೆಹಲಿ, ಹರ್ಯಾಣ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಹಾಗೂ ಮಧ್ಯಪ್ರದೇಶಸಲ್ಲಿ ನಡೆದಿದೆ. ಇನ್ನು ಕೊನೆಯ ಹಂತದ ಮತದಾನವದು ನಡೆದರೆ ಅಲ್ಲಿಗೆ ಈ ಬಾರಿಯ ಲೋಕಸಭಾ ಸಾರ್ವತ್ರಿಕ ಚುನಾವಣೆಗಳು ಮುಗಿದಂತೆ. ಕೊನೆಯ ಹಂತ ಇದೇ ಮೇ 19ರಂದು ನಡೆಯಲಿದ್ದು, ಮೇ 23ರಂದು ಎಲ್ಲರ ನಿರೀಕ್ಷೆಯಾದ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here