ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಇಂದು ವಿಜಯಪುರ ನಗರದಲ್ಲಿ ನಡೆದ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡುತ್ತಾ ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ. ಅವರು ಮಾತನಾಡುತ್ತಾ ಕಳೆದ ಚುನಾವಣೆಯಲ್ಲಿ ನಾವು ಸ್ಥಾನಗಳ ಲೆಕ್ಕಾಚಾರದಷ್ಟೇ ಸೋತಿದ್ದೇವೆಯಾದರೂ ಶೇಕಡವಾರು ಮತಗಳ ಲೆಕ್ಕಾಚಾರದಲ್ಲಿ ಗೆದ್ದಿದ್ದೇವೆ ಎಂದು ಹೇಳುತ್ತಾ, ಬಿಜೆಪಿಯವರು 104 ಸ್ಥಾನಗಳಲ್ಲಿ ಗೆದ್ದು ಜನಾಶೀರ್ವಾದವಿದೆ ಅಂತಾ ಹೇಳುತ್ತಿದ್ದಾರೆ ಆದರೆ ಯಡಿಯೂರಪ್ಪಗೆ ಜನರ ಆಶೀರ್ವಾದ ಎಲ್ಲಿದೆ? ಎಂದು ಪ್ರಶ್ನೆ ಮಾಡಿದ್ದಾರೆ.

ರಾಜ್ಯಾದ್ಯಂತ ತಾನು ಪ್ರವಾಸ ಮಾಡುವಾಗ ಜನರು ನೀವು ಮತ್ತೆ ಅಧಿಕಾರಕ್ಕೆ ಬರಬೇಕು, ಬರುವಿರಿ ಎಂಬ ಆಶಾ ಭಾವ ವ್ಯಕ್ತಪಡಿಸಿದ್ದಾರೆ. ಹಳ್ಳಿಗಳಿಗೆ ಹೋದಾಗ ಜನರು ಅಕ್ಕಿ, ಹಾಲು, ವಿದ್ಯಾಸಿರಿ, ಮಾತೃಪೂರ್ಣ, ಶೂಭಾಗ್ಯ ಕೊಟ್ಟವರು ನೀವೆಂದು ಸ್ಮರಿಸುತ್ತಾರೆ ಎನ್ನುತ್ತಾ ನೀವೇನು ಕೊಟ್ಟಿರಿ ಎಂದು ಯಡಿಯೂರಪ್ಪ ಅವರನ್ನು ಪ್ರಶ್ನೆ ಮಾಡಿದ್ದಾರೆ. ನೂರು ದಿನ ತುಂಬಿದ‌ ಮೇಲೆ ಕರ್ನಾಟಕದ ಚಿತ್ರಣ ಬದಲು ಮಾಡುತ್ತೇನೆ ಎಂದ ಯಡಿಯೂರಪ್ಪ ನವರೇ ಮೂರು ವರ್ಷ ಸಿಎಂ ಆಗಿದ್ದಾಗ ಏನು ಮಾಡಿದಿರೆಂದು ಮತ್ತೊಂದು ಪ್ರಶ್ನೆ ಹಾಕಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ಬಿಜೆಪಿಗೆ ಸುಳ್ಳು ಹೇಳುವುದು ಬಿಟ್ಟರೆ ಇನ್ನೇನು ಗೊತ್ತಿಲ್ಲ. 22 ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿದಾಗ ಮೋದಿ ಏನೂ ಮಾಡಲಿಲ್ಲ. ರಾಜ್ಯದಲ್ಲಿ ಪ್ರವಾಹದಿಂದ ಉಂಟಾದ ನಷ್ಟ ಒಂದುವರೆ ಲಕ್ಷ ಕೋಟಿ ರೂ. ಆದರೆ ಕೇಂದ್ರ ಸರ್ಕಾರ ಮೂರು ತಿಂಗಳ ಬಳಿಕ 1200 ಕೋಟಿ ರೂ ಕೊಟ್ಟು ಕೈತೊಳೆದುಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯದ ಬಡವರ ಮತ್ತು ರೈತರ ಬಗ್ಗೆ ಕಾಳಜಿ ಇಲ್ಲವೆಂದು ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here