ಪ್ರಧಾನಿ ನರೇಂದ್ರ ಮೋದಿಯವರು ಲಡಾಖ್ ನಲ್ಲಿ ಚೀನಾ ಮತ್ತು ಭಾರತದ ನಡುವಿನ ಬಿಕ್ಕಟ್ಟಿನ ನಂತರ ಇದ್ದಕ್ಕಿದ್ದಂತೆ ಭೇಟಿ ನೀಡಿದ್ದು, ಅವರು ಅಲ್ಲಿ ಸೇನಾಧಿಕಾರಿ ಗಳನ್ನು ಭೇಟಿ ಮಾಡಿ ಹಲವು ವಿಷಯಗಳನ್ನು ಚರ್ಚಿಸಿದ ನಂತರ ದೇಶದ ಗಡಿ ಕಾಯುವ ವೀರ ಯೋಧರನ್ನು ಕುರಿತಾಗಿ ಮಾತನಾಡುತ್ತಾ ಅವರ ತ್ಯಾಗ ಹಾಗೂ ದೇಶಕ್ಕಾಗಿ ಅವರ ಸಮರ್ಪಣಾ ಭಾವದಿಂದ ಕೂಡಿದ ಕರ್ತವ್ಯ ನಿಷ್ಠೆಯನ್ನು ಕುರಿತಾಗಿ ಮಾತನಾಡುತ್ತಾ ಯೋಧರಿಗೆ ಆತ್ಮ ಸ್ಥೈರ್ಯ ತುಂಬುವ ಹಾಗೂ ಯೋಧರ ಸೇವೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಪ್ರಧಾನಿ ಮೋದಿಯವರು ದುರ್ಗಮ ಪ್ರದೇಶವಾದ ‌ನೀಮುವಿನಲ್ಲಿ ನಿಂತು ಭಾರತದ ವೀರ ಯೋಧರ ಶೌರ್ಯವನ್ನು ಹೊಗಳಿದ್ದಾರೆ ಭಾರತ ಇಂದು ಯೋಧರ ತ್ಯಾಗ ಮತ್ತು ಬಲಿದಾನಗಳಿಂದಾಗಿ ಬಲಿಷ್ಠ ವಾಗಿದೆ ಎಂದಿದ್ದು, ಇಡೀ ವಿಶ್ವಕ್ಕೆ ಭಾರತೀಯ ಯೋಧರ ಶೌರ್ಯದ ಪರಿಚಯವನ್ನು ಮಾಡಿಕೊಟ್ಟಿದೆ ಎಂದಿದ್ದಾರೆ. ಗಡಿಯಲ್ಲಿ ನಿಮ್ಮ ಶೌರ್ಯ ಹಾಗೂ ಪರಾಕ್ರಮದಿಂದಾಗಿ ಇಂದು ಎಲ್ಲಾ ಭಾರತೀಯರ ಎದೆಯು ಹೆಮ್ಮೆಯಿಂದ ಉಬ್ಬುವಂತಾಗಿದೆ ಎಂದು ಅವರು ಯೋಧರನ್ನು ಹುರಿದುಂಬಿಸಿದ್ದಾರೆ. ಸೈನಿಕರ ತ್ಯಾಗವು ಹೋಲಿಕೆಗೆ ನಿಲುಕದ್ದು ಎಂದು ಅವರು ಹೇಳಿದ್ದಾರೆ.

ಭಾರತದ ಶತೃಗಳಿಗೆ ನಿಮ್ಮ ಶೌರ್ಯವು ಉತ್ತರವನ್ನು ನೀಡಿದೆ. ಲಡಾಖ್ ನಿಂದ ಕಾರ್ಗಿಲ್ ವರೆಗೂ ನಿಮ್ಮ‌ ಪರಾಕ್ರಮವು ತುಂಬಿದೆ. ಸಿಂಧೂ ನದಿಯ ಆಶೀರ್ವಾದದಿಂದ ಈ ಭೂಮಿ ಪಾವನವಾಗಿದೆ ಎಂದಿರುವ ಅವರು, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ನಾಲ್ಕು ದಿಕ್ಕುಗಳಲ್ಲೂ ಕೂಡಾ ನಿಮ್ಮ ಶೌರ್ಯಕ್ಕೆ ಜೈಕಾರ ಹಾಕಲಾಗುತ್ತಿದೆ. ಈ ಭಾರತ ಭೂಮಿ ವೀರರ ಭೂಮಿ, ನಮ್ಮ‌‌‌ ಸಂಕಲ್ಪ‌ ಹಿಮಾಲಯದಷ್ಟೇ ಎತ್ತರವಾಗಿರಬೇಕು. ಅಂತಹ ಸಂಕಲ್ಪ ಒಂದು ನನಗೆ ನಿಮ್ಮ ಕಣ್ಣಿನಲ್ಲಿ ಕಾಣುತ್ತಿದೆ.

ಭಾರತ ಅನೇಕ ವರ್ಷಗಳಿಂದ ಅದೆಷ್ಟೋ ಜನ ಆಕ್ರಮಣಕಾರಿಗಳನ್ನು ದಿಟ್ಟವಾಗಿ ಎದುರಿಸಿ, ಹಿಮ್ಮೆಟ್ಟಿಸಿ ಶೌರ್ಯವನ್ನು ಮೆರೆದಿರುವ ದೇಶ. ಈ ದೇಶದ ಜನರು,‌ಭಾರತ ಮಾತೆ ಎಂದಿಗೂ ಕೂಡಾ ನಿಮ್ಮ ತ್ಯಾಗವನ್ನು ಮರೆಯುವುದಿಲ್ಲ, ಇಂದು ದೇಶ ಸುಭದ್ರವಾಗಿರುವುದು ನಿಮ್ಮಿಂದ ಎಂದು ಅವರು ಭಾರತದ ಯೋಧರನ್ನು ಹುರಿದುಂಬಿಸಿದ್ದಾರೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here