ತೀವ್ರ ಕುತೂಹಲ ಕೆರಳಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಮುಗಿದಿದೆ. ಇಂದು ಮೋದಿಯವರು ದೇಶವಾಸಿಗಳನ್ನು ಉದ್ದೇಶಿಸಿ ಏನು ಮಾತನಾಡಲಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಜನರಿಗೆ ಸಾಮಾಜಿಕ ಅಂತರ,ಆಗಾಗ ಕೈ ತೊಳೆಯುವ ಹಾಗೂ ಮಾಸ್ಕ್ ಧರಿಸುವ ವಿಷಯವಾಗಿ ಮೊದಲಿಗೆ ಹೇಳುತ್ತಾ ಲಾಕ್ ಡೌನ್ ಅವಧಿಯಲ್ಲಿ ಇದನ್ನು ಸಮರ್ಪಕವಾಗಿ ಪಾಲನೆ ಮಾಡುತ್ತಿದ್ದ ಜನರು ಇದೀಗ ಇನ್ನೂ ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ ಸಮಯದಲ್ಲಿ ಅದನ್ನು ಏಕೆ ಪಾಲನೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ವಿಶೇಷವಾಗಿ ಕಂಟೈನ್ಮೆಂಟ್ ವಲಯಗಳಲ್ಲಿ ಜನರು ಮತ್ತಷ್ಟು ಎಚ್ಚರಿಕೆಯಿಂದ ಇರಬೇಕು, ನಿಗಮಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದ್ದಾರೆ. ಯಾರು ನಿಯಮಗಳನ್ನು ಪಾಲನೆ ಮಾಡುವುದಿಲ್ಲವೋ ಅವರಿಗೆ ತಿಳಿ ಹೇಳಿ ಎಂದು ಮನವಿಯನ್ನು ಮಾಡಿದ್ದಾರೆ. ಸ್ಥಳೀಯ ಸರ್ಕಾರಗಳು ನಿಯಮಪಾಲನೆಗೆ ಒತ್ತು ನೀಡಬೇಕು ಎಂದಿರುವ ಅವರು ನಿಯಮಪಾಲನೆ ವಿಷಯದಲ್ಲಿ ಗ್ರಾಮದ ಮುಖ್ಯಸ್ಥ ನಿಂದ ಹಿಡಿದು ದೇಶದ ಪ್ರಧಾನಿಯವರೆಗೆ ಯಾರೂ ನಿಯಮಗಳಿಗಿಂತ ಹೆಚ್ಚಲ್ಲ ಎಂದು ತಿಳಿಸಿದ್ದಾರೆ. ಲಾಕ್ ಡೌನ್ ವೇಳೆ ಬಡವರು ಹಸಿವಿನಿಂದ ಕಂಗಾಲಾಗಬಾರದು ಎಂದು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಸಮಯಕ್ಕೆ ತಕ್ಕಂತಹ ಹಾಗೂ ಸಂವೇದನಾಶೀಲ ನಿರ್ಣಯಗಳಿಂದ ಎಂತಹ ಪರಿಸ್ಥಿತಿಯನ್ನೂ ಕೂಡಾ ಎದುರಿಸಬಹುದು ಎಂದಿರುವ ಅವರು ಲಾಕ್ ಡೌನ್ ನಂತರ ಬಡವರಿಗಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಜಾರಿಗೆ ತಂದಿದ್ದು, 20 ಕೋಟಿ ಬಡವರಿಗೆ ಜನ ಧನ ಖಾತೆಗಳ ಮೂಲಕ ನೇರವಾಗಿ ಹಣವನ್ನು ವರ್ಗಾಯಿಸಲಾಯಿತು ಎಂದಿದ್ದಾರೆ. ಅಲ್ಲದೇ ಎಂಬತ್ತು ಕೋಟಿ ಕುಟುಂಬಗಳಿಗೆ ಉಚಿತ ಪಡಿತರ ಒದಗಿಸಲಾಗಿದೆ ಎಂದು ಕೂಡಾ ಅವರು ತಿಳಿಸಿದ್ದಾರೆ.

ಭಾರತದಲ್ಲಿ ಈಗ ಮಳೆಗಾಲ, ನಂತರದಲ್ಲಿ ಕೃಷಿ ಚಟುವಟಿಕೆಗಳು ಹಾಗೂ ಹಬ್ಬಗಳು ಬರುವುದರಿಂದ ಜನರಿಗೆ ತೊಂದರೆಯಾಗದಿರಲಿ ಎಂದು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ನವೆಂಬರ್ ಬರೆಗೂ ವಿಸ್ತರಣೆ ಮಾಡಿದ್ದು, ಜನರಿಗೆ ಪಡಿತರ ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದಕ್ಕಾಗಿ 90,000 ಕೋಟಿ ವೆಚ್ಚವಾಗಲಿದೆ ಎಂದು ಕೂಡಾ ಅವರು ತಿಳಿಸಿದ್ದಾರೆ.‌
ಈ ಹಿಂದಿನ ಮೂರು ತಿಂಗಳ ಲೆಕ್ಕವನ್ನೂ ತೆಗೆದುಕೊಂಡರೆ ಒಂದೂವರೆ ಲಕ್ಷ ಕೋಟಿ ರೂಪಾಯಿಗಳಷ್ಟಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ.

ಪ್ರತಿ ತಿಂಗಳು ಪಡಿತರದಲ್ಲಿ 5 ಕೆ.ಜಿ. ಅಕ್ಕಿ, 5 ಕೆ.ಜಿ ಗೋಧಿ, ಒಂದು ಕೆ.ಜಿ. ಬೆಳೆಕಾಳು ವಿತರಣೆ ಮಾಡಲಾಗುತ್ತದೆ ಎಂದ ಅವರು ಮತ್ತೊಮ್ಮೆ ಕಂಟೈನ್​ಮೆಂಟ್​ ಜೋನ್​ಗಳ ಬಗ್ಗೆ ನಾವು ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜನರಿಗೆ ಅವರು ಕೊರೊನಾ ತಡೆಯುವ ಮುನ್ನೆಚ್ಚರಿಕೆಯ ಕ್ರಮಗಳನ್ನು ಸರಿಯಾಗಿ ಪಾಲಿಸಿ ಎಂದು ಸಲಹೆಯನ್ನು ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here