ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಆಯುಷ್ ಇಲಾಖೆ ಜನರು ತಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕೆಲವು ಟಿಪ್ಸ್ ಗಳನ್ನು ನೀಡಿದ್ದು, ಅದನ್ನು ಶೇರ್ ಮಾಡುವ ಮೂಲಕ ಆದಷ್ಟು ಇದನ್ನು ಪಾಲಿಸಿ ಎಂದು ಮನವಿಯನ್ನು ಮಾಡಿದ್ದಾರೆ. ಸಲಹೆ ಇರುಗ ಗ್ರಾಫಿಕ್ಸ್ ಪ್ಲೇಟ್ ಗಳನ್ನು ಮೋದಿಯವರು ಶೇರ್ ಮಾಡಿದ್ದಾರೆ. ಹಾಗಾದ್ರೆ ಬನ್ನಿ ಆಯುಷ್ ಇಲಾಖೆ ನೀಡಿರುವ ಈ ಸಲಹೆಗಳು ಏನು ಎಂಬುದನ್ನು ನಾವು ಕೂಡಾ ತಿಳಿಯೋಣ.

ಹೀಗಿವೆ ಆರೋಗ್ಯಕ್ಕಾಗಿ ನೀಡಿರುವ ಟಿಪ್ ಗಳು.

1. ಕುಡಿಯಲು ದಿನವಿಡಿ ಬಿಸಿ ನೀರು ಉಪಯೋಗಿಸುವುದು.
2. ಪ್ರತಿ ದಿನ ಮೂವತ್ತು ನಿಮಿಷ ಯೋಗಾಸನ, ಪ್ರಾಣಾಯಾಮ ಮಾಡುವುದು.
3. ಸೇವಿಸುವ ಆಹಾರದಲ್ಲಿ ಅರಶಿನ, ಧನಿಯಾ, ಬೆಳ್ಳುಳ್ಳಿ ಯನ್ನು ಯಥೇಚ್ಚವಾಗಿ ಬಳಸುವುದು.
4. ಸಾಧ್ಯವಾದರೆ ಚವನಪ್ರಾಶ ನಿತ್ಯ ಒಂದು ಸ್ಪೂನ್ ಸೇವಿಸುವುದು. ಶುಗರ್ ಇರುವವರು ಶುಗರ್ ಫ್ರೀ ಚವನ್ ಪ್ರಾಶ್ ಬಳಸುವುದು.
5. ಪ್ರತಿ ದಿನ ಎರಡು ಬಾರಿ ಶುಂಠಿ, ತುಳಸಿ, ದಾಲ್ಚಿನ್ನಿ, ಯ ಹರ್ಬಲ್ ಟೀ ಅಥವಾ ಕಶಾಯ ಬಳಸುವುದು, ರುಚಿಗೆ ತಕ್ಕಂತೆ ಬೆಲ್ಲ ಅಥವಾ ಲಿಂಬೆ ಬಳಸುವುದು.
6. ಅರಶಿನ ಹಾಕಿರುವ ಹಾಲನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸುವುದು.
7. ನಿತ್ಯವೂ ಬಿಸಿ ನೀರಿನಲ್ಲಿ ಪುದೀನವನ್ನು ಅಥವಾ ಅಜ್ವಾಯಿನ್ ಹಾಕಿ ಅದರ ಆವಿಯನ್ನು ತೆಗೆದುಕೊಳ್ಳುವುದು.
8. ಮೂಗಿಗೆ ತೆಂಗಿನ ಎಣ್ಣೆ ಅಥವಾ ತುಪ್ಪವನ್ನು ಸವರುವುದು.
9. ಅಯಿಲ್ ಪುಲ್ಲಿಂಗ್ ಮಾಡುವುದು. ಅಂದರೆ ಎಳ್ಳು ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಬಾಯೊಳಗೆ ಹಾಕಿಕೊಂಡು ಎರಡರಿಂದ ಮೂರು ನಿಮಿಷ ಬಾಯಿ ಮುಕ್ಕಳಿಸುವ ಕ್ರಮ. ಆದರೆ ಆ ಎಣ್ಣೆಯನ್ನು ನುಂಗಬಾರದು. ಅಲ್ಲದೆ ಆಯಿಲ್ ಪುಲ್ಲಿಂಗ್ ನಂತರ ಬಿಸಿ ನೀರಿನಿಂದ ಬಾಯಿ ತೊಳೆದುಕೊಳ್ಳಬೇಕು.
10. ಕೆಮ್ಮು ಅಥವಾ ಗಂಟಲಲ್ಲಿ ತೊಂದರೆ ಎನಿಸಿದಾಗ ಲವಂಗದ ಚೂರ್ಣಕ್ಕೆ ಜೇನು ಅಥವಾ ಬೆಲ್ಲವನ್ನು ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಬೇಕು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here