ಇಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
ಮಾತನಾಡಿದರು ಎನ್ನುವುದಕ್ಕಿಂತ ಅವರು ಕೊರೊನಾ ಸೋಂಕು ಹರಡದಂತೆ, ಅದನ್ನು ನಿಯಂತ್ರಣಕ್ಕೆ ತರಲು ಜನರು ಏನು ಮಾಡಬೇಕು? ಯಾವ ರೀತಿ ಸಂಯಮವನ್ನು ಕಾಪಾಡಿಕೊಳ್ಳಬೇಕು? ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದೇ ಮೊದಲ ಮಾರ್ಗ ಎಂದು ಹತ್ತು ಹಲವು ವಿಷಯಗಳನ್ನು ಹೇಳುತ್ತಾ, ಜನರಲ್ಲಿ ಜಾಗೃತಿ ಮೂಡಿಸುತ್ತಲೇ ಭಾನುವಾರದಂದು ಜನರು ಸ್ವಯಂಪ್ರೇರಿತರಾಗಿ ಜನತಾ ಕರ್ಫ್ಯೂ ಅನುಸರಿಸಬೇಕೆಂದು ಹೇಳಿದರು. ಏಕೆ ಈ ಜನತಾ ಕರ್ಫ್ಯೂ ಏನಿದರ ಉದ್ದೇಶ ಎನ್ನುವುದಕ್ಕೆ ಕಾರಣವನ್ನು ವಿವರಿಸಲಾಗುತ್ತಿದೆ.

ಕೊರೊನಾ ವೈರಸ್ ನ ಆಯುಷ್ಯ ಯಾವುದೇ ವಸ್ತು, ಮೆಟಲ್ ಪದಾರ್ಥಗಳ ಮೇಲೆ ಸುಮಾರು ಎಂಟು ಗಂಟೆಗಳು ಎನ್ನಲಾಗಿದೆ. ಕೊರೊನಾ ಸೋಂಕಿತ ವ್ಯಕ್ತಿ ಮುಟ್ಟಿದ , ಅವರ ದೇಹದ ಯಾವುದೇ ಒಂದು ದ್ರವ ಸೋಕಿದ ವಸ್ತುವಿನ ಮೇಲೆ ಕೊರೊನಾ ವೈರಸ್ ಸುಮಾರು ಎಂಟರಿಂದ ಹತ್ತು ಗಂಟೆಗಳ ಕಾಲ ಇದ್ದು, ಅದನ್ನು ಇತರರು ಮುಟ್ಟಿದರೆ ಸೋಂಕು ಹರಡುವ ಸಂಭವ ಇರುತ್ತದೆ. ಇದನ್ನು ತಡೆಯುವ ಉದ್ದೇಶದಿಂದಲೇ ಜನತಾ ಕರ್ಫ್ಯೂ ಎನ್ನಲಾಗಿದೆ. ಒಂದು ದಿನದ ಕರ್ಫ್ಯೂ ಇಂದ ಅದೆಷ್ಟೋ ಪ್ರಮಾಣದಲ್ಲಿ ಸೋಂಕು ಹರಡುವಿಕೆಯನ್ನು ತಡೆಯಬಹುದು ಎಂಬುದು ಮೋದಿಯವರ ಯೋಜನೆಯ ಉದ್ದೇಶ ಎನ್ನಲಾಗಿದೆ.‌

ಕೊರೊನಾ ತಡೆಗಟ್ಟಲು ಈ ಒಂದು ಉತ್ತಮ ಧ್ಯೇಯ ಹಾಗೂ ಜನರ ಕ್ಷೇಮದ ದೃಷ್ಟಿಯಿಂದ ಜನತಾ ಕರ್ಫ್ಯೂ ಎಂಬ ಒಂದು ಜನ ಹಿತಕ್ಕಾಗಿ ಇದನ್ನು ತಿಳಿಸಲಾಗಿದೆ. ಇದನ್ನು ಅರಿತು ಜನರು ಶಿಸ್ತಿನಿಂದ ಸಾಧ್ಯವಾದಷ್ಟು ಇದನ್ನು ಪಾಲಿಸಿದರೆ ಅದರಿಂದ ಕೊರೊನಾ ಸೋಂಕು ಹರಡದಂತೆ ತಡೆಯಬಹುದು ಎಂಬ ಒಂದು ಪ್ರಯತ್ನವನ್ನು ಜನರೆಲ್ಲರೂ ಕೂಡಾ ಕಟ್ಟು ನಿಟ್ಟಾಗಿ ಪಾಲಿಸುವ ಅಗತ್ಯ ಹಾಗೂ ಅನಿವಾರ್ಯತೆ ಎರಡೂ ಇದೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here