ಇಂದು ಸಂಜೆ 4 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನರನ್ನು ಉದ್ದೇಶಿಸಿ ಭಾಷಣವನ್ನು ಮಾಡಲಿದ್ದಾರೆ. ಅವರ ಈ ಬಾರಿಯ ಭಾಷಣದ ಕುರಿತಾಗಿ ಕೂಡಾ ತೀವ್ರವಾದ ಆಸಕ್ತಿ ಜನರಲ್ಲಿ ಇದೆ. ಇದಕ್ಕೆ ಕಾರಣಗಳು ಕೂಡಾ ಇದೆ. ಒಂದು ಕಡೆ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ನಡೆಸಿದ ಕುತಂತ್ರ, ಅದಕ್ಕೆ ಭಾರತ ಸರ್ಕಾರ ನೀಡಿದ ತಿರುಗೇಟು, ನಿನ್ನೆ ತಾನೇ ಚೀನಾ ಮೂಲದ 59 ಆ್ಯಪ್ ಗಳನ್ನು ಬ್ಯಾನ್ ಮಾಡಿರುವ ಕೇಂದ್ರ ಸರ್ಕಾರದ ನಿರ್ಣಯ ಕೂಡಾ ಗಮನ ಸೆಳೆದಿದ್ದು ಈ ವಿಚಾರವಾಗಿ ಪ್ರಧಾನಿಯವರು ಮಾತನಾಡಲಿದ್ದಾರೆಯೇ? ಎಂಬ ಪ್ರಶ್ನೆಗಳು ಇವೆ.‌

ಇದೆಲ್ಲದಕ್ಕಿಂತ ಮುಖ್ಯವಾಗಿ ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಇಂದಿನ ತಮ್ಮ ಭಾಷಣದಲ್ಲಿ ಈ ಕುರಿತಾಗಿ ಏನನ್ನು ಮಾತನಾಡಲಿದ್ದಾರೆ ಎಂಬುದು ಕೂಡಾ ಮಹತ್ವ ಪಡೆದುಕೊಂಡಿದೆ. ನಿನ್ನೆ ರಾತ್ರಿ ಕೇಂದ್ರವು ಲಾಕ್ ಡೌನ್ ನಿಯಮವನ್ನು ಸಡಿಲಿಕೆ ಮಾಡಿದ್ದು, ಹೊಸ ಮಾರ್ಗಸೂಚಿಗಳನ್ನು ಕೂಡಾ ಬಿಡುಗಡೆ ಮಾಡಿದೆ. ಅದರ ಬಗ್ಗೆ ಕೂಡ ಪ್ರಧಾ‌ನಿ ಮಾತನಾಡಲಿದ್ದಾರೆಯೇ? ಎಂಬ ‌ನಿರೀಕ್ಷೆ ಕೂಡಾ ಇದೆ ಎಂಬುದು ಕೂಡಾ ವಾಸ್ತವ.

ಪ್ರಧಾ‌ನಿ ಮೋದಿಯವರು ಕೊರೊನಾ ಕಾಣಿಸಿಕೊಂಡ ಮೇಲೆ ದೇಶದ ಜನರನ್ನು ಉದ್ದೇಶಿಸಿ ಮಾಡುತ್ತಿರುವ ಆರನೇ ಭಾಷಣ ಇದಾಗಿದ್ದು, ಅವರು ಮೇ 12 ರಂದು ಭಾಷಣವನ್ನು ಮಾಡಿದ ನಂತರ ಇಂದು ಮತ್ತೊಮ್ಮೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲು ಹೊರಟಿದ್ದಾರೆ. ಕಳೆದ ಬಾರಿಯ ತಮ್ಮ ಭಾಷಣದಲ್ಲಿ ಅವರು ದೇಶದ ಆರ್ಥಿಕತೆಯನ್ನು ಮೇಲೆತ್ತಲು ಹಾಗೂ ಕೊರೊನಾ ಸಂಕಷ್ಟವನ್ನ ನಿವಾರಿಸಲು 20 ಲಕ್ಷ ಕೋಟಿ ರೂಪಾಯಿ ಮೊತ್ತದ ಪ್ಯಾಕೇಜ್​ ಘೋಷಣೆ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here