ಇಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅಲ್ಲಾ ಮುಖ್ಯಮಂತ್ರಿ ಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದರು. ಕೊರೊನಾ ವೈರಸ್ ಹರಡದೇ ಇರಲಿ ಎಂದು ದೇಶ ಲಾಕ್ ಡೌನ್ ಆದ ಮೇಲೆ ಮೋದಿಯವರು ಇಂದು ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಆಯಾ ರಾಜ್ಯಗಳಲ್ಲಿ ಲಾಕ್ ಡೌನ್ ಪರಿಸ್ಥಿತಿಯ ಅವಲೋಕನವನ್ನು ಮಾಡಿದರು. ಅಲ್ಲದೆ ಲಾಕ್ ಡೌನ್ ನಿಂದ ಸುರಕ್ಷಿತವಾಗಿ ಹೇಗೆ ಹೊರಬಹುದು ಎಂಬ ವಿಷಯದ ಕುರಿತಾಗಿ ಸಲಹೆಯನ್ನು ನೀಡುವಂತೆ ಅವರು ಎಲ್ಲಾ ಮುಖ್ಯಮಂತ್ರಿಗಳನ್ನು ಕೂಡಾ ಕೇಳಿದ್ದಾರೆ.

ಇನ್ನು ಇದರ ನಡುವೆಯೇ ಪ್ರಧಾ‌ನಿ ನರೇಂದ್ರ ಮೋದಿಯವರು ಟ್ಟೀಟ್ ಒಂದನ್ನು ಮಾಡಿದ್ದಾರೆ. ಅವರು ತಮ್ಮ ಟ್ವೀಟ್ ನಲ್ಲಿ ನಾಳೆ ಬೆಳಿಗ್ಗೆ 9 ಗಂಟೆಗೆ ಭಾರತೀಯ ನಾಗರಿಕರೊಂದಿಗೆ ಒಂದು ವಿಡಿಯೋ ಸಂದೇಶವನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.
ಪ್ರಧಾನಿ ಮೋದಿಯವರ ಈ ಟ್ವಿಟ್‌ ಇದೀಗ ಎಲ್ಲರಲ್ಲೂ ಕೂತುಹಲವನ್ನು ಮೂಡಿಸಿದೆ. ದೇಶದ ಪ್ರಸ್ತುತ ಇರುವ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿ ಯಾವ ರೀತಿಯ ವಿಡಿಯೋವನ್ನು ಶೇರ್ ಮಾಡಲಿದ್ದಾರೆ ಎಂಬುದು ಜನರ ಕುತೂಹಲಕ್ಕೆ ಕಾರಣವಾಗಿದೆ.

ದೇಶದಲ್ಲಿ ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರ ಹೊರತಾಗಿಯೂ ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ 2000 ದ ಗಡಿ ದಾಟಿದೆ ಮತ್ತು ಸಾವಿನ ಸಂಖ್ಯೆ 50 ದಾಟಿದೆ. ಬಹುಶಃ ಪ್ರಧಾನಿಯವರು ಇನ್ನಷ್ಟು ಜಾಗೃತಿ ಮೂಡಿಸುವ ವಿಷಯಗಳನ್ನು ವಿಡಿಯೋ ಮೂಲಕ ತಿಳಸಬಹುದೇ? ಎಂಬ ನಿರೀಕ್ಷೆಗಳು ಕೂಡಾ ಇವೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here