ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲಡಾಖ್​ನ ಲೇಹ್​ಗೆ ಭೇಟಿ ನೀಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಕಳೆದ ಜೂನ್ 15 ರ ರಾತ್ರಿ ಭಾರತ ಮತ್ತು ಚೀನಾ ನಡುವೆ ನಡೆದಂತಹ ಸಂಘರ್ಷದ ಬಳಿಕ ಭಾರತ-ಚೀನಾ ನಡುವಿನ ಗಡಿ ವಿಚಾರದಲ್ಲಿ ಸಾಕಷ್ಟು ಆತಂಕಕಾರಿ ಬೆಳವಣಿಗೆಗಳು ಕಂಡು ಬಂದಿದ್ದವು‌‌. ಇದಾದ ನಂತರ ಭಾರತ ಮತ್ತು ಚೀನಾ ನಡುವಿನ ಪರಿಸ್ಥಿತಿಗಳು ಕೂಡಾ ಅಷ್ಟೇನೂ ಚೆನ್ನಾಗಿಲ್ಲ.‌ ಈಗಾಗಲೇ ಭಾರತ ಚೀನೀ ಆ್ಯಪ್ ಗಳನ್ನು ಬ್ಯಾನ್ ಮಾಡಿದೆ‌.‌ ಚೀನಾ ವಸ್ತುಗಳ ಬಳಕೆಗೆ ಜನ ಬಹಿಷ್ಕಾರ ಹಾಕಲು ಮುಂದಾಗಿದ್ದಾರೆ.‌

ಇಂತಹ ಸಂದರ್ಭದಲ್ಲಿ ಮೋದಿ ಅವರು ಲಡಾಖ್​ನ ಲೇಹ್ ಗೆ ಭೇಟಿ ನೀಡಿರುವುದು ಒಂದು ಕುತೂಹಲವನ್ನು ಉಂಟು ಮಾಡಿದೆ‌. ಪ್ರಧಾನಿ ಮೋದಿಯವರು ಇಂದು ಬೆಳಗ್ಗೆಯೇ ಲಡಾಖ್​ಗೆ ತಲುಪಿದ್ದು, ಗಡಿಯಲ್ಲಿ ಭಾರತೀಯ ಸೇನಾ ನಾಯಕರ ಜೊತೆ ಮಾತುಕತೆಯನ್ನು ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಸೇನಾ ಅಧಿಕಾರಿಗಳ ಜೊತೆಗೆ ಗಡಿಯಲ್ಲಿನ ಭದ್ರತೆಯ ಕುರಿತಾಗಿ ಕೂಡಾ ಹಲವು ಮಾಹಿತಿಗಳನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಗಡಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತಾಗಿ ಈಗಾಗಲೇ ಚೀನಾ-ಭಾರತ ನಡುವೆ ಮೂರು ಸುತ್ತಿನ ಸೇನಾ ಮುಖಂಡರ ಸಭೆ ನಡೆದಿದೆ.

ಮಾತುಕತೆಯ ನಂತರವೂ ಕೂಡಾ ಗಡಿಯಲ್ಲಿ ಇನ್ನೂ ವಿಷಮ ಪರಿಸ್ಥಿತಿ ತಿಳಿಗೊಂಡಿಲ್ಲ. ಅದು ಇನ್ನೂ ಮುಂದುವರೆಯುತ್ತಿದೆ‌. ಅಲ್ಲದೇ ಗಡಿ ವಿಷಯವಾಗಿ ಇಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಬಿಪಿನ್ ರಾವತ್ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಡಾಖ್​ಗೆ ಭೇಟಿ ನೀಡುವವರಿದ್ದಾರೆ. ಆದರೆ ಇದರ ನಡುವೆಯೇ ಪ್ರಧಾನಿ ಅವರು ಗಡಿಗೆ ಭೇಟಿ ನೀಡಿರುವುದು ಆಶ್ಚರ್ಯವನ್ನು ಉಂಟು ಮಾಡಿರುವುದು ಕೂಡಾ ನಿಜ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here