ನಟಸಾರ್ವಭೌಮ‌ ಚಿತ್ರ ನೆನ್ನೆ ದೇಶಾದ್ಯಂತ ತೆರೆಗೆ ಬಂದು ಅದ್ಭುತವಾದ ಓಪನಿಂಗ್ ಪಡೆದುಕೊಂಡಿದೆ.ಸಿನಿಮಾ ನೋಡಿದ ಪ್ರೇಕ್ಷಕರಿಗೆ ಹಲವಾರು ಅಂಶಗಳು ಇಷ್ಟವಾಗಿವೆ. ಮನರಂಜನೆ ಬಯಸುವ ಸಿನಿಮಾ ರಸಿಕರಿಗೆ ನಟಸಾರ್ವಭೌಮ‌ ಹೇಳಿ ಮಾಡಿಸಿದ ಸಿನಿಮಾ ಎನ್ನುತ್ತಿದ್ದಾರೆ ಸಿನಿಮಾ ನೋಡಿ ಬಂದ ಅಭಿಮಾನಿಗಳು. ನಟಸಾರ್ವಭೌಮ‌ ಸಿನಿಮಾದಲ್ಲಿ ಪ್ರಮುಖವಾಗಿ ಇಷ್ಟವಾಗುವ ಅಂಶಗಳೆಂದೆರೆ ಪುನೀತ್ ರಾಜ್‍ಕುಮಾರ್ ಅವರ ನಟನೆ ಹಾಗೂ ಪವರ್ ಫುಲ್ ಡಾನ್ಸ್ ಮತ್ತು ಫೈಟ್ಸ್.ಪುನೀತ್ ರಾಜ್‍ಕುಮಾರ್ ಅಭಿನಯದ ಜೊತೆ ಎಲ್ಲರಿಗೂ ಕಾಡುವ ಮತ್ತೊಂದು ಪಾತ್ರವೇ ಅನುಪಮಾ ಪರಮೇಶ್ವರನ್.

ನಟಸಾರ್ವಭೌಮ‌ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರಿಗೆ ಜೋಡಿಯಾಗಿ ರಚಿತಾರಾಮ್ ಮತ್ತು ಅನುಪಮಾ ಪರಮೇಶ್ವರನ್ ನಟಿಸಿದ್ದಾರೆ.‌ ಪುನೀತ್ ರಾಜ್‍ಕುಮಾರ್ ಅವರ ಫ್ಲಾಸ್ ಬ್ಯಾಕ್ ನಲ್ಲಿ ಬರುವ ಅನುಪಮಾ ಪರಮೇಶ್ವರಮ್ ಅವರು ನಟಸಾರ್ವಭೌಮ‌ ಚಿತ್ರದ ಪ್ರಮುಖ ಆಕರ್ಷಣೆ ಆಗುತ್ತಿದ್ದಾರೆ. ಮುದ್ದಾದ ಅಭಿನಯ ನೋಡುಗರಿಗೆ ಇಷ್ಟವಾಗುತ್ತಿದೆ. ಅದರಲ್ಲೂ ನಟಸಾರ್ವಭೌಮ‌ ನೋಡಿದ ಅಭಿಮಾನಿಗಳಿಗೆ ಒಂದು ಸಂಭಾಷಣೆ  ಸಖತ್ ಕಿಕ್ ಕೊಡುತ್ತಿದೆ.

ಅದು ಯಾವ ಸಂಭಾಷಣೆ ಅಂತೀರಾ ಅದೇ ಬಂಗಾಳಿ‌ ಭಾಷೆಯ ಅಮಿ ತೊಮಕಿ ಭೋಲೊ ಭಾಷಿ  ಎಂಬ ಡೈಲಾಗ್ ನೋಡುಗರಿಗೆ ಸಖತ್ ಕಿಕ್ ಏರಿಸುತ್ತಿದೆ. ಅಂದಹಾಗೆ ಈ ಪದದ ಅರ್ಥ ಕನ್ನಡದಲ್ಲಿ ನಾನು‌ ನಿನ್ನ ಪ್ರೀತಿಸುತ್ತೇನೆ ಎಂಬುದಾಗಿದೆ. ನಟಸಾರ್ವಭೌಮ‌ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರು ನಟಿ ಅನುಪಮಾ ಪರಮೇಶ್ವರನ್ ಅವರಿಗೆ ಈ ಸಂಭಾಷಣೆ ಹೇಳುವ ದೃಶ್ಯ ನೋಡುಗರಿಗೆ ಸಖತ್ ಇಷ್ಟವಾಗುತ್ತಿದೆ. ನಟಸಾರ್ವಭೌಮ‌ ಚಿತ್ರದಲ್ಲಿ ಬರುವ ಪುನೀತ್ ರಾಜ್‍ಕುಮಾರ್ ಮತ್ತು ಅನುಪಮ ಪರಮೇಶ್ವರನ್ ಅವರ ಲವ್ ಸ್ಟೋರಿ ನೋಡುಗರ ಫೇವರೇಟ್ ದೃಶ್ಯವಾಗಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here