ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಭರ್ಜರಿ ಚಿತ್ರ ನಟ ಸಾರ್ವಭೌಮ ಬಿಡುಗಡೆಯಾಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಲವರು ಚಿತ್ರದ ಬಗ್ಗೆ ಉತ್ತಮವಾದ ರಿವ್ಯೂ ಗಳನ್ನು ನೀಡುತ್ತಿದ್ದಾರೆ. ಇದೇ ಚಿತ್ರವನ್ನು ಬಿಡುಗಡೆಯಾದ ದಿನವೇ ನೋಡಿ ಆನಂದಿಸಿದ ಭಾರತೀಯ ಕ್ರಿಕೆಟ್ ತಂಡದ ಆಟಗಾರ್ತಿ ವೇದ ಕೃಷ್ಣ ಮೂರ್ತಿ ಅವರು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಬಗೆಗಿನ ತಮ್ಮ ಪ್ರತಿಕ್ರಿಯೆ ನೀಡಿದ್ದು ಪುನೀತ್ ರಾಜ್‍ಕುಮಾರ್ ಅವರು ಕೂಡಾ ಆಕೆಯ ಟ್ವೀಟ್ ಗೆ ಉತ್ತರವನ್ನು ಕೂಡಾ ನೀಡಿದ್ದಾರೆ‌.

ವೇದ ಕೃಷ್ಣ ಮೂರ್ತಿಯವರು ತಮ್ಮ ಟ್ವಿಟರ್ ಖಾತೆಯಲ್ಲಿ ಇದೊಂದು ಅದ್ಭುತವಾದ ಸಿನಿಮಾ. ಪ್ರತಿಯೊಬ್ಬರೂ ನೋಡಬೇಕಾದ ಸಿನಿಮಾ ಎಂದು ಹೇಳುತ್ತಾ, ತಮಗೆ ಕ್ಲೈಮಾಕ್ಸ್ ಬಹಳ ಇಷ್ಟವಾಯಿತು ಎಂದ ಅವರು, ಪುನೀತ್ ರಾಜ್‍ಕುಮಾರ್ ಅವರಿಗೆ ಆಲ್ ದಿ ಬೆಸ್ಟ್ ಹೇಳಿ, ಅವರ ಚಿತ್ರ ಹೊಸ ದಾಖಲೆಗಳನ್ನು ಮಾಡಲಿ ಎಂದು ಟ್ವೀಟ್ ಮೂಲಕ ಹಾರೈಸಿದ್ದಾರೆ. ಇದನ್ನು ನೋಡಿ ಪುನೀತ್ ರಾಜ್‍ಕುಮಾರ್ ಅವರು ಆ ಕ್ರೀಡಾಪಟುವಿಗೆ ಪ್ರತಿಕ್ರಿಯೆಯನ್ನು ನೀಡುವ ಮೂಲಕ ಆಕೆಗೆ ಧನ್ಯವಾದಗಳನ್ನು ಹೇಳಿದ್ದಾರೆ‌.

ಪುನೀತ್ ರಾಜ್‍ಕುಮಾರ್ ಅವರು ವೇದ ಮೂರ್ತಿಯವರಿಗೆ ನಟ ಸಾರ್ವಭೌಮ ಚಿತ್ರವನ್ನು ನೋಡಿದ್ದಕ್ಕೆ ಧನ್ಯವಾದಗಳು ಎಂದು ಹೇಳುತ್ತಾ ಅವರು ಚಿತ್ರವನ್ನು ನೋಡಿ ಮೆಚ್ಚಿರುವುದು ನಮಗೆ ಖುಷಿ ತಂದಿದೆ ಎಂದು ಹೇಳಿದ್ದಾರೆ. ಈ ಚಿತ್ರದ ನಿರ್ದೇಶಕರಾದ ಪವನ್ ಒಡೆಯರ್ ಅವರು ವೇದ ಕೃಷ್ಣ ಮೂರ್ತಿ ಅವರು ನಟ ಸಾರ್ವಭೌಮ ಚಿತ್ರವನ್ನು ನೋಡುತ್ತಿರುವ ವಿಷಯವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಪುನೀತ್ ರಾಜ್‍ಕುಮಾರ್ ಅವರು ಈ ಚಿತ್ರ ಎಲ್ಲೆಡೆ ಅಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here