ಈಗ ಭಾರತದಲ್ಲಿ ದುಷ್ಟ ಪಾಕಿಸ್ತಾನದಲ್ಲಿ ಇದ್ದ ಉಗ್ರರ ಎಡೆಮುರಿ ಕಟ್ಟಿದ ಭಾರತೀಯ ಸೇನೆಯ ಬಗ್ಗೆ ಎಲ್ಲೆಲ್ಲೂ ಮೆಚ್ಚಿನ ಮಾತುಗಳು ಕೇಳಿ ಬರುತ್ತಿವೆ‌. ಈಗ ಉಗ್ರರ ಭೇಟೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಿರಾಜ್ ಯುದ್ದ ವಿಮಾನದ ಬಗ್ಗೆ ಎಲ್ಲಿಲ್ಲದ ಗೌರವ ಕೇಳಿ ಬರುತ್ತಿದೆ. ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್​ನ ಬಾಳಾಕೋಟ್​ನಲ್ಲಿದ್ದ ಉಗ್ರರ ಅಡುಗುತಾಣಗಳನ್ನು ಹೊಡೆದುರುಳಿಸಲು ನೆರವಾದ ವಾಯು ಸೇನೆಯ ‘ಮಿರಾಜ್’ ಜೆಟ್​ ವಿಮಾನದ ಸಾಮರ್ಥ್ಯಕ್ಕೆ ಮಾರುಹೋಗಿರುವ ರಾಜಸ್ಥಾನದ ಪೋಷಕರು ತಮ್ಮ ಮಗುವಿಗೆ ಮಿರಾಜ್ ಎಂದು ಹೆಸರಿಟ್ಟು ಗೌರವ ಸೂಚಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಗುವಿನ ತಂದೆ ಎಸ್​.ಎಸ್​.ರಾಥೋಡ್​, ಪಾಕ್​ ಮೇಲೆ ದಾಳಿ ಮಾಡಿದ ಮೀರಜ್​ ಜೆಟ್ ವಿಮಾನದ ಸ್ಮರಣಾರ್ಥವಾಗಿ​ ನಮ್ಮ ಮಗುವಿಗೆ ನಾವು ಮಿರಾಜ್ ರಾಥೋಡ್​ ಎಂದು ನಾಮಕರಣ ಮಾಡಿದ್ದೇವೆ. ಅವನು ಬೆಳೆದು ದೊಡ್ಡವನಾದ ಮೇಲೆ ಸೇನೆಗೆ ಸೇರುತ್ತಾನೆ ಎಂದು ಬಯಸಿದ್ದೇವೆ ಎಂದು ತಿಳಿಸಿದ್ದಾರೆ.

ಫೆ.14 ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರಿದ್ದ ವಾಹನವನ್ನು ಗುರಿಯಾಗಿರಿಸಿಕೊಂಡು ಜೈಷ್​ ಎ ಮಹಮ್ಮದ್​ ಉಗ್ರ ಸಂಘಟನೆ ದಾಳಿ ನಡೆಸಿತ್ತು. ದಾಳಿಯಲ್ಲಿ ನಮ್ಮ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಪಾಕ್​ ಬಾಳಾಕೋಟ್​ನಲ್ಲಿದ್ದ ಉಗ್ರರ ಅಡಗುತಾಣಗಳನ್ನು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಸೇನೆ ಹೊಡೆದುರುಳಿಸಿದೆ.

Photos credit :- ANI

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here