ಸ್ಯಾಂಡಲ್ ವುಡ್ ರಾಷ್ಟ್ರ ಪ್ರಶಸ್ತಿಯಲ್ಲಿ ಈ ಬಾರಿ ದಾಖಲೆಯನ್ನು ಬರೆದಿದೆ. ಕನ್ನಡ ಚಿತ್ರರಂಗದತ್ತ ಎಲ್ಲರೂ ನೋಡುವಂತಿದೆ ಈ ಬಾರಿ ರಾಷ್ಟ್ರ ಪ್ರಶಸ್ತಿಯಲ್ಲಿ ಕನ್ನಡ ಚಿತ್ರಗಳು ಪಡೆದಿರುವ ಪ್ರಶಸ್ತಿಗಳ ಪಟ್ಟಿ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್, ಶೃತಿ ಹರಿಹರನ್ ಅಭಿನಯದ ನಾತಿಚರಾಮಿ ಚಿತ್ರಗಳ ಜೊತೆಗೆ ಕನ್ನಡಕ್ಕೆ ಒಟ್ಟು 11 ರಾಷ್ಟ್ರ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪ್ರಶಸ್ತಿಗಳು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೊರೆತಿರುವುದು ಒಂದು ವಿಶೇಷ‌. ವರ್ಷದಲ್ಲಿ ಇಷ್ಟು ಪ್ರಶಸ್ತಿಗಳು ಬಂದಿರುವುದು ಇದೇ ಮೊದಲು.

ಪ್ರತಿಷ್ಠಿತ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ನವದೆಹಲಿಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾದಂತಹ ಮಾನ್ಯ ಪ್ರಕಾಶ್ ಜಾವಡೇಕರ್ ಅವರು ಪ್ರಕಟಿಸಿದ್ದಾರೆ.

ಪ್ರಶಸ್ತಿ ಪಟ್ಟಿ

ಅತ್ಯುತ್ತಮ ಪ್ರಾದೇಶಿಕ ಚಿತ್ರ – ನಾತಿಚರಾಮಿ

ಅತ್ಯುತ್ತಮ ಮಹಿಳಾ ಗಾಯಕಿ (ಮಾಯಾವಿ ಮಾನವೆ ಹಾಡು) (ಬಿಂಧು ಮಾಲಿನಿ ಗಾಯಕಿ) – ನಾತಿಚರಾಮಿ

ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ – ನಾತಿಚರಾಮಿ

ಅತ್ಯುತ್ತಮ ಸಂಕಲನ – ನಾತಿಚರಾಮಿ

ಅತ್ಯುತ್ತಮ ಸಾಹಸ ಚಿತ್ರ – ಕೆಜಿಎಫ್

ಅತ್ಯುತ್ತಮ ವಿಎಫ್ ಎಕ್ಸ್ ಚಿತ್ರ – ಕೆಜಿಎಫ್

ಅತ್ಯುತ್ತಮ ರಾಷ್ಟ್ರೀಯ ಏಕತಾ ಚಿತ್ರ – ಒಂದಲ್ಲ, ಎರಡಲ್ಲ

ಅತ್ಯುತ್ತಮ ಬಾಲ ಕಲಾವಿದ – ಒಂದಲ್ಲ, ಎರಡಲ್ಲ

ಅತ್ಯುತ್ತಮ ಮಕ್ಕಳ ಚಿತ್ರ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು

ಅತ್ಯುತ್ತಮ ರಾಷ್ಟ್ರೀಯ ಆಕ್ರ್ಸೂಸ್ ಚಿತ್ರ – ಮೂಕಜ್ಜಿಯ ಕನಸುಗಳು

ನಾತಿಚರಾಮಿ ಚಿತ್ರದ ಅಭಿನಯಕ್ಕಾಗಿ ನಟಿ ಶೃತಿ ಹರಿಹರನ್ ಗೆ ವಿಶೇಷ ಪ್ರಶಸ್ತಿಯನ್ನು ನೀಡಲಾಗಿದೆ. ಒಟ್ಟಾರೆ ಈ ಪ್ರಶಸ್ತಿಯ ಪಟ್ಟಿ ನಿಜಕ್ಕೂ ಕನ್ನಡಿಗರಿಗೆ ಒಂದು ಹೆಮ್ಮೆಯನ್ನು ತಂದು ಕೊಟ್ಟಿದೆ. ಕನ್ನಡ ಚಿತ್ರರಂಗದ ಸ್ಥಾನವನ್ನು ಹೆಚ್ಚಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here