ಹಾಸನದಲ್ಲಿ ಒಂದು ಲಕ್ಷ ಮತಗಳ ಬಾರಿ ಮುನ್ನಡೆಯನ್ನು ಸಾಧಿಸಿದ್ದಾರೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ. ಈಗಾಗಲೇ ಹಿನ್ನಡೆ ಅನುಭವಿಸಿದ್ದ ಸೋನಿಯಾ ಗಾಂಧಿ ಅವರು ಈಗ ಮುನ್ನಡೆ ಸಾಧಿಸಿದ್ದಾರೆ. ಆದರೆ ಅಂತರ ಮಾತ್ರ ಬಹಳ ಕಡಿಮೆ ಇದೆ ಎಂದು ಹೇಳಲಾಗಿದೆ. ಇನ್ನು ಅವರ ಮಗ ರಾಹುಲ್ ಗಾಂಧಿ ಅವರಿಗೆ ಅಮೇಥಿಯಲ್ಲಿ ತೀವ್ರ ಹಿನ್ನೆಡೆಯನ್ನು ಅನುಭವಿಸಿದ್ದಾರೆ. ಇನ್ನು ತುಮಕೂರಿನಲ್ಲಿ ದೇವೇಗೌಡರು ಹಿನ್ನಡೆ ಹಾಗೂ ಮುನ್ನಡೆ ಸಾಧಿಸುತ್ತಿದ್ದರೆ, ಅವರ ಹಿಂಬಾಲಕರು ಹಾಗೂ ಜೆಡಿಎಸ್ ನಾಯಕರು ಹೆಚ್.ಎಂ.ಟಿ. ಅಂದರೆ ಹಾಸರ್, ಮಂಡ್ಯ ಹಾಗೂ ತುಮಕೂರು ಖಚಿತವಾಗಿ ಜೆಡಿಎಸ್ ಪಾಲಾಗುವುದು ಎನ್ನುತ್ತಿದ್ದಾರೆ.

ನಿಖಿಲ್ ಅವರು ಈಗ ಎರಡು ಸಾವಿರ ಮತಗಳ ಮುನ್ನಡೆ ಸಾಧಿಸುವ ಮೂಲಕ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತ ಅವರಿಗೆ ತೀವ್ರ ಸ್ಪರ್ಧೆ ಯನ್ನು ನೀಡುತ್ತಾ ಮುಂದೆ ಸಾಗುತ್ತಿದ್ದಾರೆ. ಇನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದಿದ್ದ ವೀರಪ್ಪ ಮೊಯ್ಲಿ ಅವರು ಹಿನ್ನಡೆಯಲ್ಲಿದ್ದು, ಅವರ ಪ್ರತಿಸ್ಪರ್ಧಿ ಬಿಜೆಪಿಯ ಬಚ್ಚೇಗೌಡರು ಅವರನ್ನು ಹಿಂದಿಕ್ಕಿ ಮುನ್ನಡೆ ಸಾಧಿಸುತ್ತಾ ಸಾಗಿರುವುದು ಒಂದು ಅನುಮಾನವನ್ನು ಹಿರಿಯ ನಾಯಕರಲ್ಲಿ ಹುಟ್ಟು ಹಾಕಿದೆ. ಹಿರಿಯ ನಾಯಕರ ಬಗ್ಗೆ ಜನರಿಗೆ ಅಸಮಾಧಾನ ಉಂಟಾಗಿತ್ತೆ ಎನ್ನುವಂತಿದೆ ಪರಿಸ್ಥಿತಿ.

ತುಮಕೂರಿನಲ್ಲಿ ದೇವೇಗೌಡರು ಸುಮಾರು 65 ಮತಗಳ ಅಂತರದಲ್ಲಿ ತಮ್ಮ ಪ್ರತಿಸ್ಪರ್ಧಿ ಯನ್ನು ಹಿಂದಿಕ್ಕಿದ್ದಾರೆ. ಆ ಮೂಲಕ ಕೆಲವೇ ಮತಗಳಿಂದ ಮುನ್ನಡೆಯನ್ನು ಸಾಧಿಸಿದ್ದಾರೆ. ಇನ್ನು ನೆರೆಯ ಆಂದ್ರ ದಲ್ಲಿ ಕುಪ್ಪಂ ನಿಂದ ನಾಮಪತ್ರವನ್ನು ಸಲ್ಲಿಸಿದ್ದ ಚಂದ್ರ ಬಾಬು ನಾಯ್ಡು ಅವರು ಹಿನ್ನಡೆ ಸಾಧಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯ ಮೈತ್ರಿ ಕೂಟ 300 ರ ಗಡಿಯನ್ನು ಮುಟ್ಟಿದ್ದು, ತ್ರಿಶತಕ ಬಾರಿಸಿದೆ ಬಿಜೆಪಿ ಮೈತ್ರಿಕೂಟ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here