ನವರಾತ್ರಿಯ ಐದನೇ ದಿನ ದೇವಿ ದುರ್ಗೆಯನ್ನು ಸ್ಕಂದ ಮಾತೆಯನ್ನಾಗಿ ಆರಾಧಿಸಲಾಗುತ್ತದೆ. ಇಲ್ಲಿ ಮಾತೆಯು ಸ್ಕಂದನ ತಾಯಿಯಾಗಿ ಮಾತೃ ಸ್ವರೂಪಿಣಿಯಾಗಿ ದರ್ಶನ ನೀಡುವುದರಿಂದ ಈಕೆಯನ್ನು ಸ್ಕಂದ ಮಾತೆ ಎಂದು ಭಕ್ತಿಯಿಂದ ಕರೆಯುತ್ತೇವೆ. ದೇವಿಯು ಈ ರೂಪದಲ್ಲಿ ಸಿಂಹವಾಹಿನಿಯಾಗಿ, ಷಣ್ಮುಖ ನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡಿರುವ ರೂಪವು ಬಹಳ ಮನೋಹರವಾಗಿದ್ದು, ಆಕೆಯ ಮುಖದಲ್ಲಿ ಮಂದಹಾಸವು ತುಂಬಿರುತ್ತದೆ. ಈ ರೂಪದಲ್ಲಿ ಮಾತೆಯನ್ನು ಆರಾಧಿಸಿದರೆ ನಮಗೆ ಮಾತೆಯ ಜೊತೆಗೆ ಸ್ಕಂದನ ಕೃಪೆ ಕೂಡಾ ಸಿಗುತ್ತದೆ.

ಸ್ಕಂದ ಮಾತೆಯು ನವಗ್ರಹಗಳಲ್ಲಿ ಒಂದಾದ ಬುಧನ ಮೇಲೆ ತನ್ನ ಅಧಿಪತ್ಯವನ್ನು ಹೊಂದಿರುವುದರಿಂದ ದೇವಿಯನ್ನು ಈ ರೂಪದಲ್ಲಿ ಆರಾಧಿಸುವುದರಿಂದ, ಆ ದೇವಿಯನ್ನು ಏಕಾಗ್ರತೆಯಿಂದ, ಭಕ್ತಿಯಿಂದ ಆರಾಧನೆ ಮಾಡಿದರೆ, ಆಕೆಯ ಕೃಪೆಯಿಂದ ಸುಖ, ಸಮೃದ್ಧಿಯ ಜೊತೆಗೆ, ಜನ್ಮ ಕುಂಡಲಿಯಲ್ಲಿ ಬುಧನು ಪ್ರತಿಕೂಲ ಸ್ಥಾನದಲ್ಲಿದ್ದು ಉಂಟಾಗುವ ಹಾನಿಯನ್ನು ಸ್ಕಂದ ಮಾತೆಯು ನಿವಾರಿಸುವಳು ಎಂಬುದು ನಂಬಿಕೆ. ಈ ದೇವಿಯ ಸಿಂಹವಾಹಿನಿಯು ಮಾತ್ರವಲ್ಲದೆ ಕಮಲದಲ್ಲೂ ಕೂಡಾ ದೇವಿ ವಿರಾಜಮಾನಳಾಗಿರುವಳು.

ನಾಲ್ಕು ಭುಜಗಳ ದೇವಿಯ ಎರಡು ಕೈಗಳಲ್ಲಿ ಕಮಲ, ಮತ್ತೊಂದು ಕೈ ಯಲ್ಲಿ ತನ್ನ ಕುಮಾರನನ್ನು ಹಿಡಿದಿದ್ದರೆ, ನಾಲ್ಕನೇ ಕೈಯಲ್ಲಿ ಅಭಯ ವನ್ನು ತೋರುವ ಈ ಮಾತೆ ಭಕ್ತರ ರಕ್ಷಣೆಗೆ ಸದಾ ಸಿದ್ಧಳಾಗಿರುತ್ತಾಳೆ. ಮಾತೃ ಸ್ವರೂಪಿಣಿಯಾದ ಈ ದೇವಿಗೆ ಕೆಂಪು ಹೂವಿನಿಂದ ಪೂಜಿಸುವುದು ಶುಭಕರ. ನವರಾತ್ರಿಯ ಐದನೇ ದಿನ ಮಾತೆಯನ್ನು ಆರಾಧನೆ ಮಾಡುವುದು, ಆಕೆಯ ಸ್ತೋತ್ರ ಪಠಣ ಸರ್ವ ಶುಭಕರ ಎನ್ನುವುದು ಪ್ರತೀತಿ. ಜೀವನದಲ್ಲಿ ಸದ್ಗತಿ ಹಾಗೂ ಆತ್ಮ ಸಂತುಷ್ಟಿಗೆ ಈ ಮಾತೆಯ ಆರಾಧನೆ ಸದಾ ಸೂಕ್ತ ಎಂದು ಹೇಳಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here