ನವರಾತ್ರಿ ನವದುರ್ಗೆಯರ ಆರಾಧನೆಯ ಪರ್ವಕಾಲ. ಭಕ್ತಿ ಶ್ರದ್ಧೆ ಗಳು ಮನೆ ,‌ಮನ ಹಾಗೂ ಪರಿಸರದಲ್ಲಿ ಪಸರಿಸಿರುವ ಪರ್ವ ಕಾಲ. ಇಂತಹ ಧಾರ್ಮಿಕ ಮಹತ್ವದ ದಿನಗಳಲ್ಲಿ ಸೆಕ್ಸ್ ಅಥವಾ ಲೈಂಗಿಕ ಕ್ರಿಯಯಲ್ಲಿ ತೊಡಗಬಹುದೇ? ಇದೊಂದು ಬಹಳ ಸೂಕ್ಷ್ಮವಾದ ವಿಚಾರ. ಏಕೆಂದರೆ ಧಾರ್ಮಿಕ ವಿಧಿ ವಿಧಾನಗಳ ಆಚರಣೆಗಳ ವಿಷಯ ಬಂದಾಗಲೆಲ್ಲಾ ಹಿಂದೂ ಸಂಪ್ರದಾಯದಲ್ಲಿ ಸೆಕ್ಸ್ ಗೆ ಸಂಬಂಧಿಸಿದ ವಿಚಾರಗಳನ್ನು ಮಡಿವಂತಿಕೆಯ ಜನರು ಕೇಳುವುದು ಕೂಡಾ ಅಪವಿತ್ರವೆಂದೇ ಹೇಳಲಾಗಿದೆ. ಹಾಗಿದ್ದರೆ ಈ ಒಂಬತ್ತು ದಿನಗಳಲ್ಲಿ ಪುರುಷ ಹಾಗೂ ಸ್ತ್ರೀ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದು ಎಷ್ಟು ಸಮಂಜಸ, ಯಾವ ಮಟ್ಟಕ್ಕೆ ಅದು ಅಪವಿತ್ರ ಅಥವಾ ಈ ವಿಷಯಕ್ಕೆ ಸಂಬಂಧಿಸಿದಂತೆ ಈ ರೀತಿಯ ಯಾವುದೇ ಕಟ್ಟಳೆಗಳಿಲ್ಲವೇ ಎಂಬುದನ್ನು ತಿಳಿಯೋಣ.

 

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಪಾಲಿಸಬೇಕಾದ ಅಷ್ಟ ನಿಯಮಗಳಲ್ಲಿ ಒಂದು, ಅಂದರೆ ಐದನೇ ನಿಯಮದಲ್ಲಿ ಹಸ್ತ ಮೈಥುನವಾಗಲೀ ಅಥವಾ ಯಾವುದೇ ರೀತಿಯ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಬಾರದೆಂದು ತಿಳಿಸಲಾಗಿದೆ. ಮಾತೆ ದುರ್ಗೆಯ ಆರಾಧನೆಯನ್ನು ಬಹಳ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುವ ಮೂಲಕ ನಡೆಸಬೇಕೆಂಬ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಅದರ ಅನ್ವಯ ಈ ಒಂಬತ್ತು ರಾತ್ರಿಗಳಲ್ಲಿ ತಮ್ಮ ಸಂಗಾತಿಯೊಂದಿಗೆ ಲೈಂಗಿಕ ಚಟುವಟಿಕೆ ನಡೆಸಬಾರದೆಂದು ಹೇಳಲಾಗಿದೆ. ಅಲ್ಲದೆ ಉಪವಾಸವಿದ್ದು ದುರ್ಗಾ ಆರಾಧನೆ ಮಾಡುವ ಸ್ತ್ರೀ ಅಥವಾ ಪುರುಷ ಯಾರೇ ಆಗಲಿ ಈ ಒಂಬತ್ತು ರಾತ್ರಿ ಮಾತೆಯ ಭಕ್ತಿಯನ್ನೇ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕೇ ಹೊರತು ಮತ್ತಾವುದೇ ಲೌಕಿಕ ವಾಂಛೆಗಳು ಮನಸ್ಸಿನೊಳಗೆ ಸುಳಿಯಬಾರದು. ಆದ್ದರಿಂದಲೇ ನವರಾತ್ರಿಯಲ್ಲಿ ಸೆಕ್ಸ್ ಮಾಡಬಾರದು.

ಇದು ಧಾರ್ಮಿಕ ಕಟ್ಟಳೆಗಳಾದರೆ ಇಲ್ಲಿ ವೈಜ್ಞಾನಿಕ ಕಾರಣಗಳು ಕೂಡಾ ಇವೆ. ಉಪವಾಸ ಇರುವುದಿಂದ ದೇಹದಲ್ಲಿ ಶಕ್ತಿಹೀನತೆ ಆಗುವುದರಿಂದ, ಲೈಂಗಿಕ‌ ಕ್ರಿಯೆ ನಡೆಸಿದರೆ, ಮತ್ತಷ್ಟು ಆಯಾಸವಾಗುವುದು. ಅಲ್ಲದೆ ಉಪವಾಸ ಮಾಡುವುದರಿಂದ ದೇಹದೊಳಗಿನ ಅನಗತ್ಯ ಆಮ್ಲಗಳು ಹೊರಬಂದು ದೇಹಕ್ಕೆ ನವಚೇತನ ದೊರೆಯುವುದು. ಪುರಷರಿಗೆ ಹೊಸ ಹುಮ್ಮಸ್ಸು ಮೂಡುವುದು. ವಿಜಯ ದಶಮಿಯ ನಂತರ, ಮತ್ತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ, ಹಿಂದೆಂದಿಗಿಂತಲೂ ಹೆಚ್ಚಿನ ತೃಪ್ತಿ ದೊರೆಯುತ್ತದೆ. ಭಾರತದ ಸಾಂಪ್ರದಾಯಿಕ ವಿಧಿ ವಿಧನಗಳು ಸುಖಾಸುಮ್ಮನೆ ಆಚರಣೆಯಲ್ಲಿ ಇಲ್ಲ. ಪ್ರತಿಯೊಂದು ಆಚರಣೆಯ ಹಿಂದೆಯೊಂದು ವೈಜ್ಞಾನಿಕ ಕಾರಣ ಅಡಗಿದೆ. ಸಂಪ್ರದಾಯ ಹಾಗೂ ಧಾರ್ಮಿಕ ಮನೋಭಾವದವರು ಲೈಂಗಿಕ ವಿಚಾರಗಳಿಂದ ಈ ನವರಾತ್ರಿ ದೂರವಿದ್ದರೆ ಉತ್ತಮ. ಆದರೆ ಇದೆಲ್ಲಾ ಅವರ ವೈಯಕ್ತಿಕ ವಿಷಯವಾದ್ದರಿಂದ ಇಂದಿನ ಯುಗದಲ್ಲಿ ಆಚರಣೆಗಳು ಅರ್ಥ ಕಳೆದುಕೊಳ್ಳುತ್ತಿವೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here