ನವರಾತ್ರಿಯ ಒಂಬತ್ತನೇ ದಿನ ಎಂದರೆ ಅದು ದೇವಿ ಸಿದ್ಧಿಧಾತ್ರಿಯ ದಿನ. ದುರ್ಗಾದೇವಿಯ ನವದುರ್ಗಾ ರೂಪದಲ್ಲಿ ಒಂಬತ್ತನೇ ರೂಪವೇ ಈ ಸಿದ್ಧಿಧಾತ್ರಿ ದೇವಿಯ ಸ್ವರೂಪ. ಸಿದ್ಧಿಧಾತ್ರಿ ದೇವಿಯು ಕಮಲದ ಮೇಲೆ ಆಸೀನಳಾಗಿದ್ದು, ಚತುರ್ಭುಜ ಹೊಂದಿರುವ ದೇವಿಯ ಕೈಗಳಲ್ಲಿ ಶಂಖ, ಚಕ್ರ, ಗದೆ ಹಾಗೂ ಕಮಲವನ್ನು ಹಿಡಿದಿರುತ್ತಾಳೆ. ಸಿದ್ಧಿಧಾತ್ರಿ ದೇವಿಯು ತ್ರಿಮೂರ್ತಿಗಳಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಆಧ್ಯಾತ್ಮಿಕ ವೈಭವ ಹಾಗೂ ಪರಿಪೂರ್ಣತೆಯನ್ನು ನೀಡುವರು. ಆಕೆ ಅಷ್ಟ ಮಹಾಸಿದ್ಧಿಯನ್ನು ನಿರ್ಮಿಸಿ ಅದನ್ನು ತ್ರಿಮೂರ್ತಿಗಳಿಗೆ ನೀಡಿದ ಮಹಾ ಮಾತೆ ಆಕೆ. ಅಷ್ಟ ಸಿದ್ಧಿಗಳ ಮೇಲೆ ಒಡೆತನವನ್ನು ಹೊಂದಿರುವ ಮಹಾ ಶಕ್ತಿ, ಮಹಾ ಮಾಯೆ ಈ ಸಿದ್ಧಿ ಧಾತ್ರಿ ದೇವಿ.

 

ತಾಯಿ ಸಿದ್ಧಿಧಾತ್ರಿಯು ಕೇತುವಿನ ಮೇಲೆ ಅಧಿಪತ್ಯವನ್ನು ಹೊಂದಿದ್ದು, ಆಕೆ ಜನರ ಮನಸ್ಸಿನ ಮೇಲೆ ಆಡಳಿತ ನಡೆಸುವರು ಮತ್ತು ಆಕೆ ಶಿಸ್ತುಬದ್ಧ ಹಾಗೂ ಆಧ್ಯಾತ್ಮಿಕ ಜೀವನದಲ್ಲಿ ಮುಂದುವರಿಯಲು ಪ್ರೇರಣೆಯನ್ನು ನೀಡುವಳು. ಸಿದ್ಧಿಧಾತ್ರಿ ದೇವಿಯ ಪೂಜೆ , ಆರಾಧನೆಗಳಿಂದ ಭಕ್ತರಿಗೆ ಹೆಚ್ಚಿನ ಆಧ್ಯಾತ್ಮಿಕ ಜ್ಞಾನ ಮತ್ತು ಸ್ವಯಂ ಅನ್ನು ಅರಿಯಲು ಸಾಧ್ಯವಾಗುವುದು. ಈಕೆಯ ಆರಾಧನೆಯಿಂದ ಜನ್ಮಕುಂಡಲಿಯಲ್ಲಿ ಕೇತುವಿನಿಂದ ಆಗಿರುವಂತಹ ಯಾವುದೇ ಕೆಡುಕನ್ನೇ ಆಗಲಿ, ಈ ಮಹಾಮಾತೆ ಸಿದ್ಧಿಧಾತ್ರಿ ದೇವಿಯು ಪರಿಹರಿಸಿ, ಸುಖ ಶಾಂತಿಯ ಕರುಣಿಸುವಳು.

ಸಿದ್ಧಿಧಾತ್ರಿ ದೇವಿಯ ಆರಾಧನೆಗೆ ಸುಗಂಧ ಬೀರುವ ಮಲ್ಲಿಗೆ ಹೂವನ್ನು ಬಳಸಬೇಕು. ಸುಗಂಧ ಭರಿತ ಮಲ್ಲಿಗೆ ಹೂವನ್ನು ಆಕೆಗೆ ಸಮರ್ಪಿಸಿದ ತರುವಾಯ ಏಕಾಗ್ರತೆ ಹಾಗೂ ಭಕ್ತಿಯಿಂದ ಪೂಜೆ ನಡೆಸಬೇಕು. ಆಕೆಗೆ ಶೋಡಶೋಪಚಾರ, ಪೂಜೆ ಮಾಡಿದ ಬಳಿಕ ಆರತಿಯೊಂದಿಗೆ ಮಾಡಿ ಪೂಜೆ ಸಂಪನ್ನಗೊಳಿಸಿ, ಕುಟುಂಬದ ಸಮೃದ್ಧಿ ಹಾಗೂ ಯಶಸ್ಸಿಗಾಗಿ ನಾವು ಪ್ರಾರ್ಥಿಸಬೇಕು. ಇದು ನವರಾತ್ರಿಯ ಅಂತಿಮ ದಿನವಾಗಿರುವ ಕಾರಣದಿಂದಾಗಿ ದೇವಿಯನ್ನು ಸ್ಮರಿಸಿ ಆಕೆಯ ಕೃಪಾಕಟಾಕ್ಷವನ್ನು ಪಡೆದು ಧನ್ಯರಾಗಬೇಕು.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here