ನೀನಾಸಂ ಸತೀಶ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಬ್ರೇಕ್ ಕೊಟ್ಟ ಚಿತ್ರ ಲೂಸಿಯಾ. ಇದೇ ಚಿತ್ರ ಇನ್ನೊಬ್ಬ ಉದಯೋನ್ಮುಖ ಪ್ರತಿಭೆಗೂ ಕೂಡಾ ಗಾಯಕನಾಗಿ ಬ್ರೇಕ್ ಕೊಟ್ಟ ಚಿತ್ರ. ಆರ್ಕೆಸ್ಟ್ರಾ ಗಳಲ್ಲಿ ಗಾಯಕನಾಗಿದ್ದ ನವೀನ್ ಸಜ್ಜು ಅವರು ಹಿನ್ನೆಲೆಗಾಯಕನಾಗಿ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟ ಸಿನಿಮಾ ಕೂಡಾ ಲೂಸಿಯಾ. ಒಂದರ್ಥದಲ್ಲಿ ನವೀನ್ ಸಜ್ಜು ಅವರಿಗೆ ಲೈಫ್ ಕೊಟ್ಟ ಚಿತ್ರ ಇದು ಎಂದೂ ನಾವು ಹೇಳಬಹುದು. ಈ ಚಿತ್ರದ ನಂತರದಲ್ಲಿ ನೀನಾಸಂ ಸತೀಶ್ ಹಾಗೂ ನವೀನ್ ಸಜ್ಜು ಆತ್ಮೀಯರಾದವರು, ತಮ್ಮ ಸ್ನೇಹವನ್ನು ಅದೇ ರೀತಿ ಮುಂದುವರೆಸಿಕೊಂಡು ಬಂದರು. ಆ ಸ್ನೇಹ ಇಬ್ಬರ ನಡುವೆ ಅಂದಿನಿಂದ ಇಂದಿನವರೆಗೂ ಮುಂದವರೆದುಕೊಂಡೇ ಬಂದಿದೆ.

ಇನ್ನು ನವೀನ್ ಸಜ್ಜು ಅವರು ಬಿಗ್ ಬಾಸ್ ಪ್ರಸ್ತುತ ಸೀಸನ್ ನಲ್ಲಿ ಒಬ್ಬ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಲ್ಲಿರುವ ವಿಷಯ ಎಲ್ಲರಿಗೂ ತಿಳಿದಿದೆ. ಸತೀಶ್ ಅವರು ನವೀನ್ ಅವರ ಬಗ್ಗೆ ಮಾತನಾಡುತ್ತಾ ನೂರು ಜನರ ಸ್ನೇಹಕ್ಕಿಂತ, ನಿನ್ನಂಥಹ ಒಬ್ಬ ಸ್ನೇಹಿತ ನೂರು ಜನಕ್ಕೆ ಸಮಾನವೆಂದು ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ನವೀನ್ ಸಜ್ಜು ಅವರು ಬಿಗ್ ಬಾಸ್ ಸೀಸನ್ 6 ರಲ್ಲಿ ಒಬ್ಬ ಉತ್ತಮ ಆಟಗಾರನಾಗಿ ಹೊರಹೊಮ್ಮಿದ್ದಾರೆ ಹಾಗೂ ಅಪಾರ ಜನಾದರಣೆಯನ್ನು ಕೂಡಾ ಪಡೆಯುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲೂ ಕೂಡಾ ತಮ್ಮ ಸಂಗೀತ ಸುಧೆಯನ್ನು ಹರಿಸಿದ್ದಾರೆ.

ತಮ್ಮ ಹಾಡುಗಳು ಹಾಗೂ ಗಾಯನದಿಂದ ಬಿಗ್ ಬಾಸ್ ಮನೆಯ ಸದಸ್ಯರನ್ನು ಮಾತ್ರವಲ್ಲದೆ, ವೀಕ್ಷಕರನ್ನು ಕೂಡಾ ರಂಜಿಸುತ್ತಿದ್ದಾರೆ ನವೀನ್ ಸಜ್ಜು. ಬಿಗ್ ಬಾಸ್ ಮನೆಯಲ್ಲಿರುವ ನವೀನ್ ಸಜ್ಜು ಮೊನ್ನೆ ಸತೀಶ್ ಅವರನ್ನು ನೆನಪಿಸಿಕೊಂಡು ಪ್ರೀತಿಯ ಅಣ್ಣಾ ಸತೀಶ್ ನೀನಾಸಂ ಹೇಗಿದ್ದೀಯಾ? ನೀನು ಚೆನ್ನಾಗಿದ್ದೀಯಾ ಎಂದು ಭಾವಿಸಿದ್ದೇನೆ. ನಿನ್ನನ್ನು ಬಿಗ್ ಬಾಸ್ ಮನೆಯಲ್ಲಿ ಬಹಳ‌ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕನ್ನಡ ಜನತೆಗೆ , ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಚಿತ್ರಗಳನ್ನು ಕೊಡಬೇಕು. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಹೊಸ ವರ್ಷದ ಶುಭಾಶಯ ಕೋರಿ ಇದನ್ನು ಟೀ ಮಗ್ ಮೇಲೆ ಬರೆದು ಓದಿದ್ದರು.

ಈ ವಿಡಿಯೋ ನೋಡಿ ಅದಕ್ಕೆ ಪ್ರತಿಕ್ರಿಯೆ ನೀಡಿದ ಸತೀಶ್ ಅವರು ಈ ಉಡುಗೊರೆ ಸದಾ ನೆನಪಿನಲ್ಲಿರುತ್ತದೆ ಎಂದು ಹೇಳುತ್ತಾ ನೂರು ಜನರ ಸ್ನೇಹಕ್ಕಿಂತ, ನಿನ್ನೊಬ್ಬನ ಸ್ನೇಹ ನೂರು ಜನರ ಸ್ನೇಹಕ್ಕೆ ಸಮಾನ ಎಂದಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಅವರು ಬಿಗ್ ಬಾಸ್ ಮನೆಗೆ ಹೋಗುವಾಗ ಒಂದೇ ಮಾತು ಹೇಳಿದ್ದು, ನೀನು ಜನರ ಮನಸ್ಸನ್ನು ಗೆದ್ದು ಬಾ ಅಂತ ಹಾಗೆ ಮಾಡಿದ್ದೀಯಾ ಎಂದು ಸತೀಶ್ ಅವರು ಟ್ವೀಟ್ ಮಾಡಿದ್ದಾರೆ. ಹೊಸ ವರ್ಷದ ಶುಭಾಶಯಗಳು, ಮಿಸ್ ಯೂ ಎಂದು ಕೂಡಾ ಟ್ವೀಟಲ್ಲಿ ಹೇಳಿದ್ದಾರೆ. ಈ ವೀಡಿಯೋ ನೋಡಿ…

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here