ಕನ್ನಡದ ಚಿತ್ರರಂಗದಲ್ಲಿ ಪ್ರತಿಭಾನ್ವಿತ ಗಾಯಕ, ಸಂಗೀತ ನಿರ್ದೇಶಕ ಹಾಗೂ ಹಾಡಿಗೆ ತನ್ನದೇ ಶೈಲಿಯ ಸಾಹಿತ್ಯವನ್ನು ರಚಿಸಿ, ರಂಜಿಸುವ ಕಲೆಗಾರ ಎಂದರೆ ಅವರು ನವೀನ್ ಸಜ್ಜು. ಅಪ್ಪಟ ಗ್ರಾಮೀಣ ಪ್ರತಿಭೆ ಇವರು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯ. ಬಿಗ್ ಬಾಸ್ ನ ಸೀಸನ್ 6 ರ ಫೈನಲಿಸ್ಟ್ ಕೂಡಾ ಆಗಿದ್ದ ನವೀನ್ ಸಜ್ಜು ಅವರೇ ಬಿಗ್ ಬಾಸ್ ಗೆಲ್ಲುತ್ತಾರೆಂಬ ನಿರೀಕ್ಷೆಗಳನ್ನು ಹುಟ್ಟು ಹಾಕಿದವರು. ಒಟ್ಟಾರೆ ಬಿಗ್ ಬಾಸ್ ನಲ್ಲೇ ಆಗಲೀ, ಅಥವಾ ಹೊರಗೆ ಆಗಲಿ ಸಾಕಷ್ಟು ಶ್ರಮವಹಿಸಿ ಕೆಲಸ ಮಾಡುವ ನವೀನ್ ಸಜ್ಜು ಅವರಿಗೆ ಯಶಸ್ಸು ಅನ್ನುವುದು ಬೆನ್ನಟ್ಟಿ ಬರುತ್ತದೆ ಎಂಬುದಕ್ಕೆ ನವೀನ್ ಸಜ್ಜು ಹಾಡುವ ಹಾಡುಗಳೇ ಸಾಕ್ಷಿ.

ಹೊಸ ವರ್ಷಕ್ಕೆ ನವೀನ್ ಸಜ್ಜು ಅವರ ಹೊಸ ಹಾಡೊಂದು ಸಂಗೀತ ಪ್ರಿಯರನ್ನು ಕುಣಿಸಲು ರೆಡಿಯಾಗಿದೆ. ನವೀನ್ ಸಜ್ಜು ಅವರ ಹಾಡುಗಳಿಗೆ ಇರುವ ಕ್ರೇಜ್ ನ ಬಗ್ಗೆ ಹೇಳಬೇಕಾಗಿಲ್ಲ, ಈ ಹಿಂದೆ ಬಂದ ಹಾಡುಗಳು ಕೂಡಾ ಕೇಳುಗರನ್ನು ಕುಣಿಯುವಂತೆ ಮಾಡಿತ್ತು. ಈಗ ಮತ್ತೊಂದು ಹೊಸ ಹಾಡಿನ ಮೂಲಕ ನವೀನ್ ಸಜ್ಜು ಅಭಿಮಾನಿಗಳ ಮುಂದೆ ಬಂದಿದ್ದಾರೆ. ಕಳೆದ ವರ್ಷ ಎಣ್ಣೆ ನಮ್ದು ಊಟ ನಿಮ್ದು ಅಂದಿದ್ದ ನವೀನ್ ಸಜ್ಜು ಇದೀಗ  “ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ” ಎಂಬ ಶೀರ್ಷಿಕೆಯೊಂದಿಗೆ ಬಂದಿರುವ ಈ ಹಾಡು ಹೊಸ ವರ್ಷಕ್ಕೆ ಕಿಕ್ ನೀಡುವಂತೆ ಇದೆ. ಹಾಡಿಗೆ ತಕ್ಕಂತೆ ಸಂಗೀತ ಕೂಡಾ ಭರ್ಜರಿಯಾಗಿದ್ದು ಕೇಳಿದವರನ್ನು ಕುಣಿಸುವಂತಹ ಜೋಷ್ ತುಂಬಿದ ಸಂಗೀತ ಈ ಹಾಡಿನ ವಿಶೇಷವಾಗಿದೆ.

ನವೀನ್ ಸಜ್ಜು ಅವರೇ ಬರೆದು, ಕಂಪೋಸ್ ಮಾಡಿ, ಹಾಡಿ ನಿರ್ಮಾಣ ಮಾಡಿರುವ ಈ ಹಾಡು ಭರ್ಜರಿ ಮನರಂಜನೆಯನ್ನು ನೀಡುತ್ತಿದೆ. ಹಾಡಿನೊಂದಿಗೆ ನವೀನ್ ಸಜ್ಜು ಹಾಕಿರುವ ಸ್ಟೆಪ್ಪುಗಳು ಕೂಡಾ ಗಮನ ಸೆಳೆಯುತ್ತಿದೆ. ನಾಳೆಯಿಂದ ಎಣ್ಣೆ ಬುಟ್ ಬಿಡ್ತೀನಿ ಎನ್ನುವ ಈ ಹಾಡನ್ನು ಈಗಾಗಲೇ ಸಾವಿರಾರು ಜನರು ಹಾಡನ್ನು ವೀಕ್ಷಣೆ‌ ಮಾಡಿದ್ದಾರೆ.‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವೈರಲ್ ಆಗುತ್ತಿದೆ ಹಾಡು. ಬಹಳಷ್ಟು ಜನ ಕಾಮೆಂಟ್ ಗಳಲ್ಲಿ ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ನವೀನ್ ಸಜ್ಜು ಅವರ ಹೊಸ ಹಾಡು ಈಗಾಗಲೇ ತನ್ನ ಜಾದೂ ಆರಂಭಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here