ಕನ್ನಡದ ನಂ ೧ ರಿಯಾಲಿಟಿ ಶೋ ಬಿಗ್ ಬಾಸ್ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಇನ್ನು ಕೊನೆಯ ಹಂತಕ್ಕೆ ದಿನಗಳೆದಂತೆ ಹತ್ತಿರುವಾಗುತ್ತಿರುವ ಬಿಗ್ ಬಾಸ್ ಶೋ ನ ವಿಜಯಿ ಯಾರಾಗಬಹುದೆಂಬ ಜಿಜ್ಞಾಸೆ ಹಾಗೂ ಚರ್ಚೆಗಳು ಹೊರಗೆ ಎಲ್ಲೆಡೆ ನಡೆಯುತ್ತಿದ್ದರೆ, ಇದಾವುದರ ಗೋಜಿಲ್ಲದೆ ಒಳಗೆ ಸ್ಪರ್ಧಿಗಳು ತಮ್ಮ ಆಟವನ್ನು ತಾವು ಸಂತೋಷದಿಂದ ಆಡುತ್ತಾ ಮುಂದುವರೆದಿದ್ದಾರೆ. ಅದರಲ್ಲಿ ನವೀನ್ ಸಜ್ಜು ಕೂಡಾ ಆರಂಭದಿಂದ ಇದುವರೆವಿಗೂ ಎಲ್ಲರನ್ನೂ ರಂಜಿಸಿಕೊಂಡು ಬರುತ್ತಾ, ಈಗಾಗಳೆ ಫಿನಾಲೆ ವಾರಕ್ಕೆ ನೇರ ಪ್ರವೇಶವನ್ನು ಪಡೆದಿದ್ದಾರೆ. ಈಗಾಗಲೇ ನವೀನ್ ತಮ್ಮ ಚಟುವಟಿಕೆಗಳಿಂದ ಜನ ಮನಸೂರೆಗೊಂಡಿದ್ದಾರೆ.

ಹಿಂದೊಮ್ಮೆ ನವೀನ್ ಸಜ್ಜು ಅವರು ಹುಡುಗಿ ವೇಷದಲ್ಲಿ ನಾನು ಮಿಂಚಿನ ಬಳ್ಳಿ ಎಂದು ಕುಣಿದು ಕುಪ್ಪಳಿಸಿ ಎಲ್ಲರನ್ನು ರಂಜಿಸಿದ್ದರು. ಈಗ ಬಿಗ್ ಬಾಸ್ ನಲ್ಲಿ ಕಳೆದ ಬಾರಿಯ ಕಂಟೆಸ್ಟಂಟ್ ಗಳು ಮನೆಯೊಳಗೆ ಅತಿಥಿಗಳಾಗಿ ಬಂದಿದ್ದಾರೆ. ಬಂದ ಕೂಡಲೇ ಅವರೆಲ್ಲಾ ಮನೆಯೊಳಗೆ ಅಂದರೆ ಮುಖ್ಯ ಮನೆಯೊಳಗೆ ಪ್ರವೇಶಿಸದೆ ಎಲ್ಲರೂ ಸೀಕ್ರೆಟ್ ಕೋಣೆಯಲ್ಲಿದ್ದರು. ಆ ಸಂದರ್ಭದಲ್ಲಿ ಒಳಗೆ ನವೀನ್ ಸಜ್ಜು ಅವರು ಒಂದು ಒಳ್ಳೆಯ ಹಾಡನ್ನು ಹಾಡುತ್ತಾ ಇತರೆ ಸದಸ್ಯರನ್ನು ರಂಜಿಸುತ್ತಿದ್ದರು.

ಆ ಸಂದರ್ಭದಲ್ಲಿ ನವೀನ್ ಅವರ ಜೋಷ್ ಇಂದ ಕೂಡಿದ್ದ ಹಾಡನ್ನು ಸೀಕ್ರೆಟ್ ಕೋಣೆಯಲ್ಲಿ ಅತಿಥಿಗಳಾಗಿ ಮನೆ ಪ್ರವೇಶಿಸಿದ್ದ ಕೀರ್ತಿ,ಸಂಜನಾ,ಕೃಷಿ ತಾಪಂಡ ಹಾಗೂ ಸಮೀರ್ ಆಚಾರ್ಯ ಎಲ್ಲರೂ ಹಾಡನ್ನು ಕೇಳಿ ಉತ್ತೇಜಿತರಾಗಿ ಕುಣಿದು ಸಂಭ್ರಮ ಪಟ್ಟಿದ್ದಾರೆ. ನವೀನ್ ಸಜ್ಜು ಕೇವಲ ಮನೆಯ ಸದಸ್ಯರನ್ನು ಮಾತ್ರವಲ್ಲದೆ, ಬಂದಿದ್ದ ಅತಿಥಿಗಳನ್ನು ಕೂಡಾ ತನ್ನ ಗಾಯನದಿಂದ ಕುಣಿಸಿ ಸಂಭ್ರಮವನ್ನು ಪಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here