ದೇಶ ಲಾಕ್‌ಡೌನ್‌ ಆದ ನಂತರ ಕೇರಳದಲ್ಲಿ ಅಲ್ಲಿನ ಸರ್ಕಾರವು ಅಗತ್ಯ ಇರುವವರಿಗೆ ಮನೆ ಬಾಗಿಲಿಗೆ ಉಚಿತ ಅಕ್ಕಿ ನೀಡುವುದಾಗಿ ಆಶ್ವಾಸನೆ ನೀಡಿತ್ತು. ಆ ಆಶ್ವಾಸನೆ ನಂಬಿ ಕುಳಿತ ಅದೆಷ್ಟೋ ಜನರ ನಡುವೆ ಕೇರಳದ ಜಿಲ್ಲೆಯ ಮಣಿಯೂರು ಗ್ರಾಮದ ಯುವಕ ವೇಣುಗೋಪಾಲ ಕೂಡಾ ಒಬ್ಬ. ಆದರೆ ಸರ್ಕಾರದ ಆಶ್ವಾಸನೆ ಗೆ ಕಾಯುತ್ತಾ ಕುಳಿತವರ ಮನೆಯಲ್ಲಿ ಇದ್ದ ಅಕ್ಕಿ ಖಾಲಿಯಾಯಿತೇ ವಿನಃ ಸರ್ಕಾರದ ಭರವಸೆ ಬಾಗಿಲಿಗೆ ಬರಲೇ ಇಲ್ಲ. ಕಡೆಗೆ ಹಸಿವಿನಿಂದ ಕಂಗೆಟ್ಟ, ಒಂಟಿಯಾಗಿ ವಾಸ ಮಾಡುತ್ತಿರುವ ವೇಣುಗೋಪಾಲ್ ಪ್ರಧಾನಿ ಕಛೇರಿಯ ಮೊರ ಹೋಗಿದ್ದಾರೆ. ಅದಾದ ಮೇಲೆ ನಡೆದಿದ್ದು ನಿಜಕ್ಕೂ ಅವರಿಗೆ ನಂಬಲು ಸಾಧ್ಯವಾಗಿಲ್ಲ.

ಲಾಕ್ ಡೌನ್ ನಿಂದ ಮನೆಯ ಹೊರಗೆ ಬರಲಾಗದೆ ಕುಳಿತ ವೇಣುಗೋಪಾಲ್ ಸರ್ಕಾರದ ನೆರವು ಬರಲಿಲ್ಲ ಎಂದು, ಸಂಬಂಧಿಸಿದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿದ್ದಾರೆ. ಆದರೆ ಸೂಕ್ತ ಪ್ರತಿಕ್ರಿಯೆ ದಕ್ಕಿಲ್ಲ. ಅದಾದ ನಂತರ ಆತ ರಾಜ್ಯ ಮುಖ್ಯಮಂತ್ರಿ ಅವರ ಕಚೇರಿಯನ್ನು ಕೂಡಾ ಸಂಪರ್ಕ ಮಾಡಿದರೂ ಅಲ್ಲಿಂದಲೂ ಕೂಡಾ ಯಾವುದೇ ನಿರೀಕ್ಷಿತ ನೆರವು ಸಿಗದೇ ಹೋದಾಗ ಬೇರಾವ ದಾರಿಯೂ ಕಾಣದೆ ಕಡೆಗೆ ಪ್ರಧಾನಿ ಕಛೇರಿಗೆ ಕರೆ ಮಾಡಿದಾಗ, ಅಲ್ಲಿನ ಅಧಿಕಾರಿಗಳು ಸಮಸ್ಯೆಯನ್ನು ಆಲಿಸಿ, ಒಂದು ಇ ಮೇಲ್ ಮಾಡುವಂತೆ ಸೂಚನೆ ನೀಡಿದ್ದಾರೆ.

ಆಶ್ಚರ್ಯ ಎಂಬಂತೆ ವೇಣುಗೋಪಾಲ್ ಇ ಮೇಲ್ ಮಾಡಿದ ಎರಡೇ ಗಂಟೆಗಳ ಅವಧಿಯಲ್ಲಿ ಕೇರಳ ರಾಜ್ಯಪಾಲರಿಂದ ವೇಣುಗೋಪಾಲ್ ಅವರಿಗೆ ಕರೆ ಬಂದು ಶೀಘ್ರದಲ್ಲೇ ಅಕ್ಕಿ ಪೂರೈಸುವುದಾಗಿ ತಿಳಿಸಿದ್ದಾರೆ. ನಂತರ ವೇಣುಗೋಪಾಲ ಹಾಗೂ ಅದೆಷ್ಟೋ ಜನರ ಮನೆ ಬಾಗಿಲಿಗೆ ಅಕ್ಕಿ ತಲುಪಿಸುವ ವ್ಯವಸ್ಥೆ ನಡೆದಿದೆ. ವೇಣಗೋಪಾಲ್ ಗೆ ತನ್ನ ಇ ಮೇಲ್ ಗೆ ಅಷ್ಟು ಬೇಗ ಪ್ರತಿಕ್ರಿಯೆ ಬಂದಿದ್ದು ಆಶ್ಚರ್ಯ ಹಾಗೂ ಸಂತಸ ಎರಡನ್ನೂ ನೀಡಿದೆ. ಈ ಘಟನೆ ಕಳೆದ ಶನಿವಾರ ನಡೆದಿದೆ. ಇದಾದ ಮೇಲೆ ವೇಣುಗೋಪಾಲ್ ಮತ್ತೊಂದು ಮೇಲ್ ಮಾಡಿ ಪ್ರಧಾನಿಯವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here