ಬಾಲಿವುಡ್ ಮಂದಿ ಎಂದರೆ ಅವರ ಐಶಾರಾಮೀ ಜೀವನ, ಅವರ ದುಬಾರಿ ಹವ್ಯಾಸಗಳನ್ನು ನೋಡಲು ಸಿಗುತ್ತವೆ. ‌ಅಲ್ಲದೆ ಬಾಲಿವುಡ್ ಸೆಲೆಬ್ರಿಟಿಗಳ ಮಕ್ಕಳು ಕೂಡಾ ಇಂತಹುದೇ ಒಂದು ಜೀವನವನ್ನು ತಮ್ಮದಾಗಿಸಿಕೊಂಡು, ತಮ್ಮ ಜೀವನವನ್ನು ನಡೆಸುವುದನ್ನು ‌ನೋಡುತ್ತೇವೆ. ಆದರೆ ಕೆಲವು ಸೆಲೆಬ್ರಿಟಿಗಳು ಮಾತ್ರ ತಮ್ಮ ಸ್ವಸಾಮರ್ಥ್ಯ ಹಾಗೂ ಸಾಧನೆಯನ್ನು ಮೆರೆಯುವ ಮೂಲಕ ಹೆಸರು, ಹಣ ಮಾಡುತ್ತಾರೆ. ಅಂತಹವರ ಸಾಲಿನಲ್ಲಿ ಬರುತ್ತಾರೆ ಬಾಲಿವುಡ್ ನ ಪ್ರಖ್ಯಾತ ಗಾಯಕಿ ನೇಹಾ ಕಕ್ಕಡ್ ಅವರು ಕೂಡಾ. ಇತ್ತೀಚಿಗೆ ನೇಹಾ ಅವರು ಹೊಸ ಬಂಗಲೆಯೊಂದನ್ನು ಖರೀದಿಸಿ, ಅದರ ಫೋಟೋ ಹಂಚಿಕೊಂಡು, ತನ್ನ ಜೀವನದ ಸ್ಮರಣೆಯನ್ನು ಕೂಡಾ ಅಲ್ಲಿ ಬರೆದಿದ್ದಾರೆ.

ನೇಹಾ ಕಕ್ಕಡ್ ಅವರು ಕಳೆದ ಕೆಲವು ದಿನಗಳ ಹಿಂದೆ ಒಂದು ಹೊಸ ಬಂಗಲೆ ಯನ್ನು ತಮ್ಮ ಮೂಲ ಸ್ಥಳವಾದ ಉತ್ತರಾಖಂಡ್ ನ ಋಷಿಕೇಶ್ ನಲ್ಲಿ ಒಂದು ಹೊಸ ಬಂಗಲೆಯನ್ನು ಖರೀದಿಸಿದ್ದಾರೆ. ಆ ಬಂಗಲೆಯ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಾಕಿ, ಅದರ ಜೊತೆಯಲ್ಲಿ ತಾನು ಹುಟ್ಟಿ ಬೆಳದ ಮನೆಯ ಫೋಟೋ ಕೂಡಾ ಹಂಚಿಕೊಂಡಿದ್ದು, ತಾನು ವಾಸಿಸುತ್ತಿದ್ದ ಒಂದು ಕೋಣೆಯಿದ್ದ ಮನೆ ಇದು, ಇದರೊಳಗೆ ನನ್ನ ತಾಯಿ ಒಂದು ಟೇಬಲ್ ಇಟ್ಟು ಆ ಸಣ್ಣ ಕೋಣೆಯಲ್ಲೇ ಒಂದು ಅಡುಗೆ ಮನೆ ಮಾಡಿಕೊಂಡಿದ್ದರು. ಆದರೆ ಆ ಕೋಣೆ ಕೂಡಾ ನಮ್ಮದಾಗಿರಲಿಲ್ಲ, ಅದು ನಮ್ಮ ಬಾಡಿಗೆ ಮನೆ.

ಆದರೆ ಇದು ಅದೇ ನಗರದಲ್ಲಿ ನನ್ನದೇ ಆದ ಸ್ವಂತ ಮನೆಯನ್ನು ನೋಡಿದಾಗ ಖುಷಿಯಾಗುವುದು ಮಾತ್ರವೇ ಅಲ್ಲದೇ, ಈ ಮನೆಯು ಭಾವನಾತ್ಮಕ ನೆನಪುಗಳನ್ನು ಕೂಡಾ ತಂದು ಕೊಡುತ್ತದೆ ಎಂದು ನೇಹಾ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ನೇಹಾ ಕಕ್ಕಡ್ ಅವರ ಈ ಪೋಸ್ಟ್ ನೋಡಿ ಅನೇಕರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ನೇಹ ಅವರ ಸಾಧನೆಯ ಬಗ್ಗೆ ಮೆಚ್ಚುಗೆಯನ್ನು ಕೂಡಾ ವ್ಯಕ್ತಪಡಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here