ಕೊರೊನಾ ವೈರಸ್ ಭೀತಿ ಎಲ್ಲೆಡೆ. ಜನರು ಸದ್ಯಕ್ಕೆ ಬಯಸುತ್ತಿರುವುದು ಇದರಿಂದ ಮುಕ್ತಿ. ಏಕೆಂದರೆ ಕಳೆದ ಕೆಲವು ದಿನಗಳಿಂದ ಎಲ್ಲೆಲ್ಲೂ ಕೊರೊನಾ ಸುದ್ದಿಗಳು ತುಂಬಿ, ಜನರ ಮನಸ್ಸಿನಲ್ಲೊಂದು ಆತಂಕದ ಸ್ಥಿತಿ ಮನೆ ಮಾಡಿದೆ. ಅಲ್ಲದೆ ಹೊರಗೆ ಮುಕ್ತವಾಗಿ, ಪ್ರಶಾಂತವಾಗಿ ಓಡಾಡಲೂ ಕೂಡಾ ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾದ ಹಾಗೆ ಇದೆ. ಜನರ ಈ ಭಯ ಓಡಿಸಿ, ಅವರಿಗೆ ಧೈರ್ಯ ನೀಡುವ ಕೆಲಸವನ್ನು ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೂಡಾ ತಿಳಿಸಿ ಕೊಡುತ್ತಿದ್ದಾರೆ.

ಇಂತಹ ಒಂದು ಕ್ಷಿಷ್ಟ ಪರಿಸ್ಥಿತಿಯಿಂದ ಜನರಿಗೆ ಮುಕ್ತಿ ಸಿಕ್ಕು, ಮತ್ತೆ ಎಲ್ಲವೂ ಮಾಮೂಲಿನಂತಾಗಲೀ ಎಂದು ಸ್ಯಾಂಡಲ್ ವುಡ್ ನಟರೊಬ್ಬರು ದೇವರ ಸನ್ನಿಧಾನದಲ್ಲಿ ಉರುಳು ಸೇವೆಯನ್ನು ಮಾಡಿರುವ ಅಪರೂಪದ ಘಟನೆಯೊಂದು ವರದಿಯಾಗಿದೆ.‌ ಸ್ಯಾಂಡಲ್ ವುಡ್ ನಟ ಪ್ರೇಮ್ ಅವರು ಶ್ರೀ ಕ್ಷೇತ್ರ, ಗುರುರಾಘವೇಂದ್ರ ಸ್ವಾಮಿಗಳ ಸನ್ನಿದಾನವಾದ ಮಂತ್ರಾಲಯಕ್ಕೆ ಹೋಗಿದ್ದು, ಅಲ್ಲಿ ಅವರು ರಾಯರ ಸನ್ನಿಧಾನದಲ್ಲಿ ಸರ್ವರಿಗೂ ಎಲ್ಲರ ಕ್ಷೇಮ ಹಾಗೂ ಎಲ್ಲರಿಗೂ ಶುಭವಾಗಲೀ ಎಂದು ಹಾರೈಸುತ್ತಾ ಅದಕ್ಕಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪೆ ಕೋರಿ ಉರುಳು ಸೇವೆಯನ್ನು ಮಾಡಿದ್ದಾರೆ.

 

ನಟ ಪ್ರೇಮ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ವಿಷಯವನ್ನು ವಿಡಿಯೋ ಸಹಿತ ಹಂಚಿಕೊಂಡಿದ್ದು, ತಮ್ಮ ಪೋಸ್ಟ್ ‌ನಲ್ಲಿ “ಸ್ನೇಹಿತರಿಗೆ ಬಂದುಗಳಿಗೆ ನನ್ನ ಅಭಿಮಾನಿಗಳಿಗೆ ಮತ್ತು ಕನ್ನಡ ಚಿತ್ರ ರಂಗಕ್ಕೆ ಒಳ್ಳೆಯದಾಗಲಿ ಹಾಗು ಕರೋನ ಹಾವಳಿಯಿಂದ ಪ್ರಪಂಚವನ್ನು ಪಾರು ಮಾಡು ಎಂದು ಮಂತ್ರಾಲಯದಲ್ಲಿ ಗುರು ಸಾರ್ವಭೌಮನ ಮುಂದೆ ಉರುಳು ಸೇವೆ” ಎಂದು ಬರೆದುಕೊಂಡಿದ್ದಾರೆ‌. ಪ್ರೇಮ್ ಅವರ ಈ ಕಾಳಜಿ ನೋಡಿ ಅನೇಕರು ಮೆಚ್ಚುಗೆ ಸೂಚಿಸುತ್ತಾ ಅವರಿಗೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here