City Big News Desk.
ಭಾರತದಲ್ಲಿ ಹೆಚ್ಚಿನ ಜನರು ಚಹಾ ಕುಡಿಯುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಚಹಾ ಇಲ್ಲದ ಬೆಳಗನ್ನು ಊಹಿಸಿಕೊಳ್ಳುವುದು ಅವರಿಗೆ ಕಷ್ಟ. ಬೆಳಗ್ಗೆ ಎದ್ದ ತಕ್ಷಣ ಬೆಡ್ ಟೀ ಕುಡಿಯುವವರು ಅನೇಕರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಕೂಡ ಚಹಾ ಕುಡಿಯುವ ಅಭ್ಯಾಸ ಮಾಡಿಕೊಳ್ತಿರೋದು ಆತಂಕಕಾರಿ ಸಂಗತಿ. ದೊಡ್ಡವರಂತೆ ಅವರಿಗೂ ದಿನಕ್ಕೆ ಎರಡರಿಂದ ಮೂರು ಬಾರಿ ಚಹಾ ಬೇಕು.
ಎಷ್ಟೋ ಸಲ ತಾಯಂದಿರೂ ಕೂಡ ಮಕ್ಕಳಿಗೆ ಟೀ ಬಿಸ್ಕತ್ ತಿನ್ನಿಸಿ ಹೊಟ್ಟೆ ತುಂಬಿಸ್ತಾರೆ. ಆದರೆ ಚಿಕ್ಕವಯಸ್ಸಿನಲ್ಲಿ ಮಕ್ಕಳಿಗೆ ಟೀ ಕೊಡುವುದು ಎಷ್ಟು ಅಪಾಯಕಾರಿ ಎಂಬ ಅರಿವು ಅವರಿಗಿಲ್ಲ. ಮಗುವಿಗೆ ಚಹಾ ಕುಡಿಸುವ ಮೂಲಕ ಮಗುವಿನ ಆರೋಗ್ಯದೊಂದಿಗೆ ಆಟವಾಡುತ್ತಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳಿ. ಅದು ಚಹಾ ಆಗಿರಲಿ ಅಥವಾ ಕಾಫಿಯಾಗಿರಲಿ, ಈ ಬಿಸಿ ಪಾನೀಯಗಳಲ್ಲಿ ಬಹಳಷ್ಟು ಕೆಫೀನ್ ಮತ್ತು ಸಕ್ಕರೆ ಇರುತ್ತದೆ.
ಕೆಫೀನ್ ಮತ್ತು ಸಕ್ಕರೆ ಎರಡೂ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದು ಕೇವಲ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ, ಮಗುವಿನ ಮಾನಸಿಕ ಸ್ಥಿತಿಗೂ ಮಾರಕವಾಗಬಹುದು. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಚಹಾ ನೀಡಬಾರದು. ಕೆಫೀನ್ ಹೊಂದಿರುವ ಸಿಹಿ ಪದಾರ್ಥಗಳ ಸೇವನೆಯಿಂದ ಮಕ್ಕಳ ಹಲ್ಲುಗಳು ಹುಳುಕಾಗುತ್ತವೆ.
ಅಷ್ಟೇ ಅಲ್ಲ ಇವುಗಳನ್ನು ಹೆಚ್ಚು ಸೇವಿಸುವುದರಿಂದ ಪದೇ ಪದೇ ಮೂತ್ರ ವಿಸರ್ಜನೆ ಸಮಸ್ಯೆ ಎದುರಾಗುತ್ತದೆ. ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಾರ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕೆಫೀನ್ ಹೊಂದಿರುವ ವಸ್ತುಗಳನ್ನು ಸೇವಿಸಲು ಅನುಮತಿಸಬಾರದು. ಅವರಿಗೆ ಚಹಾ, ಕಾಫಿ ಕೊಡಬಾರದು.12-18 ವರ್ಷ ವಯಸ್ಸಿನ ಜನರು ದಿನಕ್ಕೆ 100 ಮಿಲಿ ಗ್ರಾಂಗಿಂತ ಹೆಚ್ಚು ಕೆಫೀನ್ ಅನ್ನು ಸೇವಿಸಬಾರದು.
ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಚಹಾ ಅಥವಾ ಕಾಫಿಯನ್ನು ನೀಡುವುದನ್ನು ಮುಂದುವರಿಸಿದರೆ ಅನೇಕ ಆರೋಗ್ಯ ಸಮಸ್ಯೆಗಳು ಅವರನ್ನು ಸುತ್ತುವರಿಯುತ್ತವೆ. ಅವರ ಮೂಳೆಗಳು ದುರ್ಬಲವಾಗಬಹುದು. ನಿದ್ರೆಯ ಕೊರತೆ ಎದುರಾಗುತ್ತದೆ, ಕಿರಿಕಿರಿ, ಮಧುಮೇಹ, ನಿರ್ಜಲೀಕರಣ ಮತ್ತು ಹಲ್ಲಿನ ಕುಹರದ ಸಮಸ್ಯೆಗಳಿಗೂ ಇದು ಕಾರಣವಾಗುತ್ತದೆ.
City Big News.
Disclaimer: This Story is auto-aggregated by a Syndicated Feed and has not been Created or Edited By City Big News Staff.