ಇತ್ತೀಚಿಗಷ್ಟೇ ದೇಶ ಬಿಟ್ಟು ಹೋದ, ಅತ್ಯಾಚಾರ ಆರೋಪಿ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮಿ ಈಗೊಂದು ಹೊಸ ವಿಷಯಕ್ಕೆ ಸುದ್ದಿಯಾಗಿದ್ದು, ಈಗ ಆತನ ಈ ಹೊಸ ಪ್ರಯತ್ನವು ಬಾರೀ ಸದ್ದು ಮಾಡಿದೆ. ನಿತ್ಯಾನಂದ ಅಮೆರಿಕದಲ್ಲಿ ಒಂದು ಖಾಸಗಿ ದ್ವೀಪವೊಂದನ್ನು ಖರೀದಿಸಿ ಅಲ್ಲಿ ತನ್ನದೇ ಆದ ಒಂದಿ ಹೊಸ ದೇಶವನ್ನೇ ಕಟ್ಟಲು ಹೊರಟಿದ್ದಾನೆ‌. ದೊರೆತಿರುವ ಮಾಹಿತಿಗಳ ಪ್ರಕಾರ ನಾಪತ್ತೆಯಾಗಿರುವ ನಿತ್ಯಾನಂದ ಈಗ ದಕ್ಷಿಣ ಅಮೆರಿಕ ಖಂಡದ ಈಕ್ವೆಡಾರ್ ನಲ್ಲಿ ಖಾಸಗಿ ದ್ವೀಪವೊಂದನ್ನು ಖರೀದಿಸಿದ್ದಾನೆ ಎನ್ನಲಾಗಿದೆ.

ಆ ದ್ವೀಪವನ್ನು ಈಗ ತನ್ನದೇ ದೇಶ ಎಂಬಂತೆ ನಿತ್ಯಾನಂದ ಬಿಂಬಿಸುತ್ತಿದ್ದಾನೆ. ಅದು ಮಾತ್ರವೇ ಅಲ್ಲದೆ ತನ್ನ ಈ ಹೊಸ ದೇಶಕ್ಕಾಗಿ ಅದರದೇ ಆದಂತಹ ಧ್ವಜ, ಲಾಂಛನ ಮತ್ತು ಪಾಸ್‌ಪೋರ್ಟ್‌‌ಗಳನ್ನು ಸಹ ಸಿದ್ಧಪಡಿಸಿದ್ದನೆ. ಇನ್ನು ತನ್ನ ಈ ಹೊಸ ದೇಶಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದಾನೆ. ಟ್ರಿನಿಡಾಡ್ ಅಂಡ್ ಟೊಬಾಗೋ ದ್ವೀಪಗಳ ಸಮೀಪ ಇರುವ ಇವರ ಕೈಲಾಸ ದ್ವೀಪವನ್ನು ಹಿಂದೂ ಸಾರ್ವಭೌಮ ದೇಶ ಎಂದು ನಿತ್ಯಾನಂದ ತಾನೇ ಘೋಷಣೆ ಮಾಡಿದ್ದಾನೆ.

ಈ ದೇಶಕ್ಕೆ ವಿಶ್ವದ ಯಾವುದೇ ಭಾಗದಿಂದ ಬೇಕಾದರೂ ಹಿಂದುಗಳು ಬಂದು ನೆಲೆಸಬಹುದು ಎಂದು ಕೂಡಾ ಹೇಳಿದ್ದು, ಈ ದೇಶದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಒಂದು ವೆಬ್ಸೈಟ್ ಕೂಡಾ ಲಭ್ಯವಾಗಿದೆ ಎನ್ನಲಾಗಿದೆ. ಇಲ್ಲಿ ಈಗಾಗಲೇ ಹಲವು ಆರೋಪಗಳನ್ನು ಎದುರಿಸುತ್ತಿರುವ ನಿತ್ಯಾನಂದ ದೇಶ ತೊರೆದು ನಾಪತ್ತೆಯಾಗಿರುವುದು ಕೂಡಾ ನಮ್ಮ ದೇಶದಲ್ಲಿ ಸ್ವಯಂ ಘೋಷಿತ ದೇವ ಮಾನವರು ಹೇಗೆ ಆರೋಪಗಳಿಂದ ತಪ್ಪಿಸಿಕೊಂಡು ವಿದೇಶಗಳಿಗೆ ಹೋಗಲು ಸಾಧ್ಯವಾಗಿದೆ ಎಂಬುದು ದೊಡ್ಡ ಪ್ರಶ್ನೆ.ಇದರ ಜೊತೆಗೆ ನಿತ್ಯಾನಂದನಿಗೆ ಭಾರತದ ಖ್ಯಾತ ಬೌಲರ್ ಆರ್. ಅಸ್ವಿನ್ ಟ್ವೀಟ್ ಮೂಲಕ ಪ್ರಶ್ನೆ ಒಂದನ್ನು ಎಸೆದಿದ್ದಾರೆ..

 

ನಿಮ್ಮದೇ ಆದ ದೇಶಕ್ಕೆ ಬರುವುದಾದರೆ ವೀಸಾ ಪಡೆಯುವ ಪ್ರಕ್ರಿಯೆ ಹೇಗೆ ಎಂದು ಅಶ್ವಿನ್​ ಪ್ರಶ್ನಿಸುವ ಮೂಲಕ ನಗೆ ಚಟಾಕಿ ಹಾರಿಸಿದ್ದಾರೆ. ಜಾಲತಾಣದಲ್ಲಿ ಅಶ್ವಿನ್​ ಟ್ವೀಟ್​ ವೈರಲ್​ ಆಗಿದೆ. 1000ಕ್ಕೂ ಹೆಚ್ಚು ಮಂದಿ ರೀಟ್ವೀಟ್​ ಮಾಡಿದ್ದು, 16 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್​ ಮಾಡಿದ್ದಾರೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here