ಸಿಎಎ ಹಾಗೂ ಎನ್.ಆರ್.ಸಿ. ವಿರುದ್ಧ ಇಡೀ ದೇಶದಲ್ಲಿ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಕೆಲವೆಡೆ ಈ ಪ್ರತಿಭಟನೆಗಳು ಹಿಂಸಾಚಾರಕ್ಕೆ ಕೂಡಾ ತಿರುಗಿತ್ತು. ಸಿಎಎ ವಿರುದ್ಧ ಕೇರಳದಲ್ಲಿ ಮದುವೆಗೆ ಸಿದ್ಧತೆ ನಡೆಸಿದ್ದ ಗಂಡು ಹೆಣ್ಣು ತಮ್ಮ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿದ್ದರು. ಆದರೆ ಈಗ ಇದಕ್ಕೆ ಪ್ರತಿಯಾಗಿ ಉತ್ತರ ಪ್ರದೇಶದಲ್ಲಿ ಒಂದು ಕಡೆ ವಿವಾಹವೊಂದರ ಆಹ್ವಾನ ಪತ್ರಿಕೆಯಲ್ಲಿ ಸಿಎಎ ಮತ್ತು ಎನ್.ಸಿ.ಆರ್.ಗೆ ನಮ್ಮ ಬೆಂಬಲ ಇದೆ ಎನ್ನುವ ವಿಭಿನ್ನ ಮಾರ್ಗವನ್ನು ಅನುಸರಿಸಿ, ಎಲ್ಲರ ಗಮನವನ್ನು ಸೆಳೆದು, ಈಗ ಸುದ್ದಿಯಾಗಿದ್ದಾರೆ.

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಮೋಹಿತ್ ಮಿಶ್ರಾ ಮತ್ತು ಸೋನಂ ಪಾಠಕ್ ಎಂಬ ವಧು ವರರು ತಮ್ಮ ವಿವಾಹ ಆಹ್ವಾನ ಪತ್ರಿಕೆ ಅಥವಾ ಲಘ್ನ ಪತ್ರಿಕೆಯಲ್ಲಿ ಸಿಎಎ ಮತ್ತು ಎನ್.ಸಿ.ಆರ್. ಎರಡಕ್ಕೂ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಫೆಬ್ರವರಿ ಮೂರರಂದು ವಿವಾಹ ಬಂಧನದ ಮೂಲಕ ಹೊಸ ಜೀವನಕ್ಕೆ ಸಿದ್ಧತೆ ನಡೆಸಿರುವ ಈ ಯುವ ಜೋಡಿ ತಮ್ಮ ವಿವಾಹದ ಕರೆಯೋಲೆಯಲ್ಲಿ ಹಿಂದಿ ಭಾಷೆಯಲ್ಲಿ ನಾವು ಸಿಎಎ ಮತ್ತು ಎನ್.ಸಿ.ಆರ್. ಅನ್ನು ಬೆಂಬಲಿಸುತ್ತೇವೆ ಎಂಬ ಸಾಲನ್ನು ಹಾಕಿಸಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಒಂದೆಡೆ ಸಿಎಎ ಮತ್ತು ಎನ್.ಸಿ.ಆರ್ ವಿರುದ್ಧ ಪ್ರತಿಭಟನೆಗಳು ನಡೆಸುವಾಗಲೇ, ಈ ಜೋಡಿ ತಮ್ಮ ಬೆಂಬಲವನ್ನು ಘೋಷಣೆ ಮಾಡಲು ಅನುಸರಿಸಿರುವ ಈ ವಿಭಿನ್ನವಾದ ಪ್ರಯತ್ನ ಈಗ ಸುದ್ದಿಯಾಗಿದ್ದು, ಅವರ ವಿವಾಹದ ಆಹ್ವಾನ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಟ್ಟಾರೆ ಅವರ ಈ ವಿಶಿಷ್ಟ ಆಲೋಚನೆ ಎಲ್ಲರ ಗಮನವನ್ನು ಸೆಳೆಯುವುದರಲ್ಲಿ ಯಶಸ್ವಿ ಆಗಿದೆ ಎಂದು ನಾವು ಹೇಳಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here