ಮದುವೆಯೆಂಬುದು ಜೀವನದಲ್ಲಿ ಅಪರೂಪದ ಅನುಭವ, ಅದನ್ನು ಸದಾ ಕಾಲ ನೆನಪಿನಲ್ಲಿ ಇಟ್ಟುಕೊಳ್ಳಲು ಹಲವರು ಹಲವು ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಮದುವೆಗಾಗಿ ವಿಶೇಷ ತಯಾರಿಗಳನ್ನು ಮಾಡಿಕೊಳ್ಳುತ್ತಾರೆ. ಮದುವೆಗಾಗಿ ನೆಚ್ಚಿನ ಆಭರಣಗಳು, ನೆಚ್ಚಿನ ಬಟ್ಟೆಗಳು, ಇಷ್ಟವಾದ ಸ್ಥಳ ಹೀಗೆ ಅದೆಷ್ಟೋ ಯೋಚನೆ, ಯೋಜನೆ ಹಾಗೂ ಸಿದ್ಧತೆ ಮಾಡಿಕೊಳ್ಳುತ್ತಾರೆ ವಧು ಹಾಗೂ ವರ. ಆದರೆ ಇವೆಲ್ಲಕ್ಕಿಂತ ಭಿನ್ನವಾಗಿ ಯಾವುದೇ ವಸ್ತ್ರ ಗಳ ಬಗ್ಗೆ ತಲೆ ಕೆಡಿಸಿಕೊಳ್ಳದ, ಮದುವೆ ವಸ್ತ್ರದ ಗೋಜಿಗೆ ಬಿದ್ದು ತಲೆ ಕೆಡಿಸಿಕೊಳ್ಳುವ ಬದಲು, ವಧು ಓರ್ವಳು ಮಾಡಿದ ಉಪಾಯ ಎಲ್ಲರನ್ನೂ ದಂಗು ಬಡಿಸಿದೆ.

ಇಟಲಿಯ ದ್ವೀಪವಾದ ಸಾರ್ಡೇನಿಯಾದ ಟರ್ಕೋಯಿಸ್ ಸಾಗರ ತೀರದಲ್ಲಿ ವೃತ್ತಿಯಲ್ಲಿ ದಂತ ವೈದ್ಯೆಯಾದ ಅಂಕ ಅರ್ಸೆನೆ , ಅವರು ಸಾಫ್ಟ್‌ವೇರ್ ಡೆವಲಪರ್ ಆದ ವ್ಯಾಲೆಟೇನ್ ಅವರನ್ನು ಹುಟ್ಟುಡುಗೆಯಲ್ಲಿ ಅಂದರೆ ನಗ್ನವಾಗಿ ಸ್ನೇಹಿತರು ಹಾಗೂ ಸಂಬಂಧಿಕರ ಮುಂದೆ ವಿವಾಹವಾಗಿ ಒಂದು ವಿಶಿಷ್ಟವಾದ ಮದುವೆಗೆ ಸಾಕಾರ ಹಾಡಿದ್ದಾರೆ. ಮದುವೆಗಾಗಿ ಹೆಣ್ಣು ಕೇವಲ ಪ್ಲೋಯಿಂಗ್ ವೇಲ್ ಧರಿಸಿದ್ದರೆ, ಮದುವೆಯ ಗಂಡು ಡಾಪರ್ ಟೈ ಯನ್ನು ಮಾತ್ರವೇ ಧರಿಸಿದ್ದರು. ಕಳೆದ ಹದಿನೆಂಟರೆಂದು ಈ ನೂತನ ವಧು ವರರು, ಎಲ್ಲರ ಸಮ್ಮುಖದಲ್ಲಿ ದಂಪತಿಗಳೆಂದು ತಮ್ಮ ವಿವಾಹವನ್ನು ಸಂಪನ್ನಗೊಳಿಸಿದ್ದಾರೆ. ಈ ವಿವಾಹ ನಿಜವಾಗಿಯೂ ಹಿಂದೆಂದೂ ನಡೆದಿರುವ ವಿವಾಹಗಳಿಗಿಂತ ಅಪರೂಪದ್ದಾಗಿದೆ.

ಅಂಕ ಅವರು ಈ ವಿವಾಹದ ಬಗ್ಗೆ ಮಾತನಾಡುತ್ತಾ ತಮ್ಮ ಈ ವಿವಾಹ ನಿಜವಾದ ವಿವಾಹವೆಂದು, ನಾವಿಬ್ಬರೂ ಆತ್ಮ ಪೂರ್ವಕವಾಗಿ, ನಾವು ಏನಾಗಿದ್ದೇವೋ ಹಾಗೆ ಒಬ್ಬರನ್ನೊಬ್ಬರು ಸ್ವೀಕರಿಸಿದ ಆ ಸಂದರ್ಭ ಮರೆಯಲಾಗದ್ದು ಎಂದೂ, ಸ್ವಾಭಾವಿಕವಾಗಿ ಅಥವಾ ನೈಸರ್ಗಿಕವಾಗಿ ನನ್ನ ವಿವಾಹ ನಡೆದಿರುವುದು ಬಹಳ ಸಂತಸವನ್ನು ತಂದಿದೆಯೆಂದು ಹೇಳಿದ್ದಾರೆ. ಮೊದಲಿಗೆ ನಗ್ನವಾಗಿ ಮದುವೆ ಯೋಚನೆ ಎಂದಾಗ ಸ್ವಲ್ಪ ಹಿಂಜರಿಕೆ ಎನಿಸಿದರೂ, ಅನಂತರ ಅದು ಇಷ್ಟವಾಯಿತೆಂದೂ, ಹೇಳಿದ್ದಾರೆ. ವಿಷಯ ಏನೇ ಆದರೂ ಅವರ ಈ ವಿವಾಹ ಈಗ ವಿಶ್ವವ್ಯಾಪಿಯಾಗಿ ಎಲ್ಲರ ಗಮನವನ್ನು ಸೆಳೆದಿರುವಂತೂ ನಿಜವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here