ಇಂದು ಬಿ.ಎಸ್.ಯಡಿಯೂರಪ್ಪ ನವರ ಸಚಿವ ಸಂಪುಟಕ್ಕೆ ಸೇರಿದ ಹದಿನೇಳು ಮಂದಿ ನೂತನ ಸಚಿವರು ಪ್ರಮಾಣ ವಚನವನ್ನು ಸ್ವೀಕರಿಸಿದ್ದು, ಆ ಸಚಿವರ ಒಂದು ಕಿರು ಪರಿಚಯ ಇಲ್ಲಿದೆ.
ಶಶಿಕಲಾ ಅಣ್ಣಾಸಾಹೇಬ್​ ಜೊಲ್ಲೆ: ನಿಪ್ಪಾಣಿ ವಿಧಾನಸಭಾ ಕ್ಷೇತ್ರದವರಾದ ಅವರ ಮೇಲೆ ಒಂದು ಅಪರಾಧ ಪ್ರಕರಣ ಇದೆ. ಎಸ್​ಎಸ್​ಎಲ್​ಸಿ ಇವರ ವಿದ್ಯಾರ್ಹತೆ ಆಗಿದ್ದು, ಜಾತಿಯಲ್ಲಿ ಲಿಂಗಾಯತರಾಗಿದ್ದಾರೆ. ಇವರ ಒಟ್ಟು ಆಸ್ತಿ ₹34,48,76,993 ಆಗಿದೆ.

ಗೋವಿಂದ ಕಾರಜೋಳ: ಮುಧೋಳ ವಿಧಾನಸಭಾ ಕ್ಷೇತ್ರದವರಾಗಿದ್ದಾರೆ. ಅವರ ವಿದ್ಯಾರ್ಹತೆ ಎಸ್​ಎಸ್​ಎಲ್​ಸಿ. ದಲಿತ ಸಮುದಾಯಕ್ಕೆ ಸೇರಿದ ಇವರ ಒಟ್ಟು ಆಸ್ತಿ ₹2,08,35,222 ಆಗಿದೆ.

ಪ್ರಭು ಔಹ್ಹಾಣ್​​: ಔರಾದ್​ ವಿಧಾನಸಭಾ ಕ್ಷೇತ್ರದವರಾಗಿದ್ದು, ಇವರ ವಿದ್ಯಾರ್ಹತೆ ದ್ವಿತೀಯ ಪಿಯುಸಿ. ಲಂಬಾಣಿ ಸಮುದಾಯಕ್ಕೆ ಸೇರಿದ ಇವರ ಆಸ್ತಿಯ ಮೊತ್ತ ₹10,08, 00,396 ಆಗಿದೆ.

ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ ಅವರು ನರಗುಂದ ವಿಧಾನಸಭಾ ಕ್ಷೇತ್ರದವರಾಗಿದ್ದು, ವಿದ್ಯಾರ್ಹತೆಯಲ್ಲಿ ಅವರು ಎಸ್​​.ಎಸ್​.ಎಲ್.ಸಿ ಮುಗಿಸಿದ್ದು, ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಒಟ್ಟು ಆಸ್ತಿ ₹7,38,05,833 ಆಗಿದೆ.

ಜಗದೀಶ್​ ಶೆಟ್ಟರ್​. ಇವರು ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕೇಂದ್ರ ವಿಧಾನ ಸಭಾ ಕ್ಷೇತ್ರದವರಾಗಿದ್ದು , ಪದವಿ ಶಿಕ್ಷಣವನ್ನು ಪಡೆದಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಇವರ ಒಟ್ಟು ಆಸ್ತಿ ₹12,26,35,305 ಆಗಿದೆ.

ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವ್ ವಿಧಾನ ಸಭಾ ಕ್ಷೇತ್ರದವರು. ಇವರು ಕೂಡಾ ಪದವಿಧರರಾಗಿದ್ದು ,ಲಿಂಗಾಯತ ಜಾತಿಗೆ ಸೇರಿದ್ದಾರೆ. ಇವರ ಒಟ್ಟು ಆಸ್ತಿ ಮೊತ್ತ ₹8,92,22,462 ಆಗಿದೆ.

ಬಿ.ಶ್ರೀರಾಮುಲು. ಇವರು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದವರಾಗಿದ್ದಾರೆ. ಇವರ ಮೇಲೆ 04 ಅಪರಾಧದ ಕೇಸ್ ಗಳಿವೆ. ಶಿಕ್ಷಣದಲ್ಲಿ ಇವರು ಪದವಿಹನ್ನು ಮುಗಿಸಿದ್ದಾರೆ. ದಲಿತ ಸಮುದಾಯವನ್ನು ಪ್ರತಿನಿಧಿಸುವ ಇವರ ಒಟ್ಟು ಆಸ್ತಿಯ ಮೊತ್ತ ₹18,52,11,180 ಆಗಿದೆ.

ಕೆ.ಎಸ್.ಈಶ್ವರಪ್ಪನವರು ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದವರಾಗಿದ್ದು, ಇವರ ಮೇಲೆ 05ಅಪರಾಧ ಪ್ರಕರಣಗಳಿವೆ‌. ಇವರು ಪದವೀಧರರಾಗಿದ್ದು, ಕುರುಬ ಜನಾಂಗಕ್ಕೆ ಸೇರಿದ್ದಾರೆ. ಇವರ ಒಟ್ಟು ಆಸ್ತಿಯ ಮೊತ್ತ ₹10,31,48,136 ಆಗಿದೆ.

ಜೆ.ಸಿ.ಮಾಧುಸ್ವಾಮಿಯವರು ಚಿಕ್ಕನಾಯಕಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರಾಗಿದ್ದು, ಇವರ ಮೇಲೆ 01 ಅಪರಾಧ ಪ್ರಕರಣ ಇದೆ. ಶಿಕ್ಷಣದಲ್ಲಿ ಇವರು ಪದವಿ ಶಿಕ್ಷಣ ಮುಗಿಸಿದ್ದು, ಲಿಂಗಾಯತ ಸಮುದಾಯದವರಾಗಿದ್ದಾರೆ. ಇವರ ಒಟ್ಟು ಆಸ್ತಿ ₹4,13,99,473 ಆಗಿದೆ.

ಸಿ.ಟಿ.ರವಿ ಅವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರವರು. ಇವರ ಮೇಲೆ 03 ಅಪರಾಧ ಪ್ರಕರಣಗಳಿದ್ದು, ವಿದ್ಯಾರ್ಹತೆಯ ವಿಷಯದಲ್ಲಿ ಇವರು ಸ್ನಾತಕೋತ್ತರ ಪದವಿಯನ್ನು ಪಡೆದಿರುವರು. ಒಕ್ಕಲಿಗ ಸಮುದಾಯಕ್ಕೆ ಸೇರಿದ ಇವರ ಒಟ್ಟು ಆಸ್ತಿಯ ಮೊತ್ತ ₹5,01,35,079 ಆಗಿದೆ.

ಹೆಚ್​.ನಾಗೇಶ್​​ ರವರುಪಕ್ಷೇತರ ಅಭ್ಯರ್ಥಿಯಾಗಿದ್ದು ಮುಳಬಾಗಿಲು ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಶೈಕ್ಷಣಿಕ ವಿದ್ಯಾರ್ಹತೆ ಇವರದ್ದು ಪದವಿಯಾಗಿದ್ದು, ಇವರು ದಲಿತ ಸಮುದಾಯಕ್ಕೆ ಸೇರಿದ್ದು, ಇವರ ಒಟ್ಟು ಆಸ್ತಿಯ ಮೊತ್ತ ₹11,09,72,198 ಆಗಿದೆ.

ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದವರಾಗಿದ್ದು , ಇವರ ಮೇಲೆ 01 ಅಪರಾಧ ಪ್ರಕರಣವಿದ್ದು, ಶೈಕ್ಷಣಿಕ ವಿದ್ಯಾಭ್ಯಾಸ ಪದವಿಯಾಗಿದೆ. ಒಕ್ಕಲಿಗ ಸಮುದಾಯದ ಇವರ ಒಟ್ಟು ಆಸ್ತಿಯ ಮೊತ್ತ ₹21,50,17,344 ಆಗಿದೆ.

ಎಸ್​.ಸುರೇಶ್​ಕುಮಾರ್​​ ಅವರು ರಾಜಾಜಿನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಇವರ ಶೈಕ್ಷಣಿಕ ವಿದ್ಯಾರ್ಹತೆ ಪದವಿ. ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಇವರ ಒಟ್ಟು ಆಸ್ತಿಯ ಮೊತ್ತ ₹3,58,41,660 ಆಗಿದೆ.

ವಿ.ಸೋಮಣ್ಣ ಇವರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಇವರ ಮೇಲೆ 01 ಅಪರಾಧ ಪ್ರಕರಣವಿದ್ದು, ಶೈಕ್ಷಣಿಕ ವಿದ್ಯಾರ್ಹತೆ ಪದವಿಯಾಗಿದೆ‌ ಲಿಂಗಾಯತ ಸಮುದಾಯದ ಇವರ ಆಸ್ತಿಯ ಮೊತ್ತ ₹52,92,29,341 ಆಗಿದೆ.

ಆರ್.ಅಶೋಕ ಇವರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಶೈಕ್ಷಣಿಕ ವಿದ್ಯಾರ್ಹತೆ ಪದವಿ ಪಡೆದಿದ್ದು ಒಕ್ಕಲಿಗ ಸಮುದಾಯಕ್ಕೆ ಸೇರಿದ ಇವರ ಒಟ್ಟು ಆಸ್ತಿ ಮೊತ್ತ ₹40,62,55,521 ಆಗಿದೆ.

ಕೋಟ ಶ್ರೀನಿವಾಸ್​ ಪೂಜಾರಿ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದು, ಇವರು 7ನೇ ತರಗತಿ ಶಿಕ್ಷಣ. ಈಡಿಗ ಜನಾಂಗಕ್ಕೆ ಸೇರಿದ್ದಾರೆ.

ಲಕ್ಷ್ಮಣ ಎಸ್​.ಸವದಿ ಅವರು ಅಥಣಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದು, ಇವರ ಮೇಲೆ 01 ಅಪರಾಧ ಪ್ರಕರಣವಿದ್ದು, ಶೈಕ್ಷಣಿಕ ವಿದ್ಯಾರ್ಹತೆ ದ್ವಿತೀಯ ಪಿಯುಸಿ. ಲಿಂಗಾಯತ ಸಮುದಾಯದ ಇವರ ಆಸ್ತಿಯ ಮೊತ್ತ ₹15,14,41,598 ಗಳಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here