ಝೀರೋ ಟ್ರಾಫಿಕ್ ಈ ಪದವು ಮೈತ್ರಿ ಸರ್ಕಾರದಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು‌. ಉಪಮುಖ್ಯಮಂತ್ರಿಯಾಗಿದ್ದ ಪರಮೇಶ್ವರ್ ಅವರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದರಿಂದ ಜನರಿಗಾದ ತೊಂದರೆ, ಮತ್ತೊಮ್ಮೆ ಅನರ್ಹ ಶಾಸಕರು ಬಂದಾಗ ಝೀರೋ ಟ್ರಾಫಿಕ್ ವ್ಯವಸ್ಥೆ ನೀಡಿದ್ದರ ಬಗ್ಗೆ ಚರ್ಚೆಗಳು ನಡೆದಿದ್ದವು. ಉಪ ಮುಖ್ಯಮಂತ್ರಿಯಾದವರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಪಡೆಯುವ ಅಧಿಕಾರವಿದೆ. ಆದರೆ ಈಗ ಇದೇ ವಿಷಯದಲ್ಲಿ ಬಿಜೆಪಿ ಹೈ ಕಮಾಂಡ್ ರಾಜ್ಯದ ಸಚಿವ ಸಂಪುಟದಲ್ಲಿ ಮೂರು ಜನ ಡಿಸಿಎಂ‌ ಗಳಿಗೆ ಖಡಕ್ ಸೂಚನೆಯೊಂದನ್ನು ನೀಡಿದೆ‌.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮೂರು ಜನ ಡಿಸಿಎಂ ಗಳಿದ್ದು, ಮೂವರು ಉಪ ಮುಖ್ಯಮಂತ್ರಿಗಳು ಕೂಡಾ ತಮಗಾಗಿ ಝೀರೋ ಟ್ರಾಫಿಕ್ ವ್ಯವಸ್ಥೆ ಪಡೆದುಕೊಳ್ಳಬಾರದು ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟವಾದ ಸಂದೇಶವೊಂದನ್ನು ನೀಡಿದೆ. ಸಾಮಾನ್ಯವಾಗಿ ಉಪ ಮುಖ್ಯಮಂತ್ರಿಗಳು ಸಂಚಾರ ನಡೆಸುವಾಗ , ಅವರಿಗೆ ಒದಗಿಸುವ ಸೌಲಭ್ಯದಿಂದ ಆಗುವ ಸಂಚಾರ ದಟ್ಟಣೆಗೆ ಇದರಿಂದಾಗಿ ತಡೆಯಾಗಿದೆ. ‘ಝೀರೋ ಟ್ರಾಫಿಕ್‌ನಲ್ಲಿ ಸಂಚರಿಸುವ ನಾಯಕರ ಕನಸಿಗೆ ಬ್ರೇಕ್ ಹಾಕಲಾಗಿದೆ.

ಗೋವಿಂದ ಕಾರಜೋಳ, ಡಾ. ಅಶ್ವತ್ಥ್ ನಾರಾಯಣ್ ಮತ್ತು ಲಕ್ಷ್ಮಣ ಸವದಿ ಕರ್ನಾಟಕದ ಉಪ ಮುಖ್ಯಮಂತ್ರಿಗಳಾಗಿ ನೇಮಕವಾಗಿದ್ದು, ಬೆಂಗಳೂರು ನಗರದಲ್ಲಿ ಇವರಿಗೆ ಝೀರೋ ಟ್ರಾಫಿಕ್ ಒದಗಿಸಿದರೆ ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗಲಿದೆ ಎಂದು ಈ ತೀರ್ಮಾನ ಮಾಡಲಾಗಿದೆ‌. ಕಾನೂನಿನ ಪ್ರಕಾರ ಹೇಳುವುದಾದರೆ ರಾಜ್ಯದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು (ಅಗತ್ಯ ಸಂದರ್ಭದಲ್ಲಿ) ಝೀರೋ ಟ್ರಾಫಿಕ್ ವ್ಯವಸ್ಥೆ ಇದ್ದು, ಅದೇ ರೀತಿಯಲ್ಲಿ ಉಪ ಮುಖ್ಯಮಂತ್ರಿಗಳು ಸಹಾ ಝೀರೋ ಟ್ರಾಫಿಕ್ ವ್ಯವಸ್ಥೆ ಪಡೆದುಕೊಳ್ಳಲು ಅವಕಾಶವಿದೆ. ಆದರೆ ಈಗ ಆ ಅವಕಾಶವನ್ನು ಹೈಕಮಾಂಡ್ ರದ್ದು ಮಾಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here