ಹೊಸಾವರ್ಷಾಚರಣೆಯಲ್ಲಿ ಸನ್ನದ್ಧವಾಗಿರುವ ಸಿಲಿಕಾನ್ ಸಿಟಿ ಬೆಂಗಳೂರು ಜನತೆಗೆ ಬಿಬಿಎಂಪಿ ಸಿಹಿ ಸುದ್ದಿ ನೀಡಿದೆ. ಇಂದು ಮಧ್ಯರಾತ್ರಿ 12 ಗಂಟೆಯಿಂದ ಮಾರ್ಚ್ ವರೆಗೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳಲ್ಲಿ ಜನಿಸುವ ಪ್ರತಿ ಹೆಣ್ಣು ಮಗುವಿಗೆ ಒಂದು ಲಕ್ಷ ರೂ. ಬಾಂಡ್ ನೀಡಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಬಿಬಿಎಂಪಿ, ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಇಲ್ಲದೆ ಜನಿಸಿದ ಹೆಣ್ಣು ಮಗುವಿಗೆ ಒಂದು ಲಕ್ಷ ಬಾಂಡ್ ಸಿಗಲಿದೆ. ಇದುವರೆಗೆ ಬಿಪಿಎಲ್ ಕಾರ್ಡ್ ಇದ್ದ ಮಹಿಳೆಗೆ ಈ ಸೌಲಭ್ಯ ಇತ್ತು. ಈ ಬಾರಿಯಿಂದ ಎಪಿಎಲ್ ಸೇರಿ ಎಲ್ಲ ವರ್ಗದವರಿಗೂ ಸೌಲಭ್ಯ ಸಿಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪಿಂಕ್ ಬೇಬಿ ಎಂಬ ಹೆಸರಿನಲ್ಲಿ ಬಾಂಡ್ ನೀಡಲಾಗುತ್ತಿತ್ತು. ಇದೀಗ ಅದನ್ನು ಮಹಾಲಕ್ಷ್ಮಿ ಯೋಜನೆ ಎಂದು ಬದಲಾಯಿಸಲಾಗಿದೆ ಎಂದು ಹೇಳಿದರು. ಕಳೆದ ಬಜೆಟ್ ನಲ್ಲೇ ಈ ಯೋಜನೆಗಾಗಿ ಹಣ ಮೀಸಲಿಡಲಾಗಿದೆ. ಒಟ್ಟು 60 ಕೋಟಿ ರೂ. ಅನುದಾನ ಇಡಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here