ಸಿಂಗಾಪುರ ಮತ್ತು ನ್ಯೂಯಾರ್ಕ್ ಎಂದ ಕೂಡಲೇ ನೆನಪಾಗೋದು ದೊಡ್ಡ ದೊಡ್ಡ ಬಿಲ್ಡಿಂಗ್ ಮತ್ತು ಸ್ವಚ್ಚವಾದ ರಸ್ತೆಗಳು ಬೃಹತ್ತಾದ ಕಟ್ಟಡಗಳಿಗೆ ಝಗಮಗಿದುವ ಬಗೆಬಗೆಯ ಲೈಟುಗಳು ಥಟ್ಟನೆ ಫಾರಿನ್ ಎಂಬ ಮಾಯೆ ಆದರೆ ನಮ್ಮ ಭಾರತದಲ್ಲೂ ಅದರಲ್ಲೂ ಕರ್ನಾಟಕದಲ್ಲಿಯೂ ಕೂಡ ಸಿಂಗಾಪುರ್ ಮತ್ತು ನ್ಯೂಯಾರ್ಕ್ ಎಂಬ ಹೆಸರಿನ ಊರುಗಳಿವೆ ಅರೆ ಇದೇನಪ್ಪ ಅಂತೀರ ನೀವೆ ಓದಿ.
ಸಿಂಗಾಪುರ ಅಥವಾ ನ್ಯೂಯಾರ್ಕ್ ನೋಡಲು ಎಲ್ಲೋ ದೂರು ವಿದೇಶಕ್ಕೆ ಹೋಗಬೇಕಿಲ್ಲ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಸಿಂಗಾಪುರ ಮತ್ತು ನ್ಯೂಯಾರ್ಕ್ ಹೆಸರಿನ ಗ್ರಾಮಗಳಿವೆ. ಕೆ.ಆರ್.ಪೇಟೆ ತಾಲೂಕಿನಲ್ಲಿ ಸಿಂಗಾಪುರ ಎನ್ನುವ ಕುಗ್ರಾಮವಿದೆ. ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ತನ್ನ ಹೆಸರಿನಿಂದಲೇ ಈಗ ಎಲ್ಲರ ಗಮನ ಸೆಳೀತಿದೆ. ಈ ಊರಿನ ಪ್ರಕೃತಿ ಸೊಬಗನ್ನ ನೋಡಿದ್ರೆ ದೂರದ ಸಿಂಗಾಪುರವನ್ನೂ ಕೂಡ ಸಾಚಿಸುವಂತಿದೆ.ಇಷ್ಟೇ ಅಲ್ಲ ನ್ಯೂಯಾರ್ಕ್ ನಗರದ ಹೆಸ್ರು ಮಂಡ್ಯ ಜಿಲ್ಲೆಯಲ್ಲಿದೆ. ಮದ್ದೂರು ತಾಲೂಕಿನ ಹುಣ್ಣನದೊಡ್ಡಿ ಗ್ರಾಮಕ್ಕೆ ಇಲ್ಲಿನ ಗ್ರಾಮಸ್ಥರೇ 20 ವರ್ಷದ ಹಿಂದೆ ನ್ಯೂಯಾರ್ಕ್ ಅಂತ ನಾಮಕರಣ ಮಾಡಿದ್ದಾರೆ. ಇದು ಕೂಡ ಗ್ರಾಮೀಣ ಪ್ರದೇಶವಾಗಿದ್ದು ಕೃಷಿ, ಹೈನುಗಾರಿಕೆ ಇಲ್ಲಿನ ಮುಖ್ಯ ಕಸುಬು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರೋ ಕಾರಣಕ್ಕೆ ಸಣ್ಣಪುಟ್ಟ ಕ್ಯಾಂಟೀನ್ ಮತ್ತು ಅಂಗಡಿಯವ್ರು ದಿನಪೂರ್ತಿ ವ್ಯಾಪಾರ ನಡೆಸ್ತಾರೆ. ಒಟ್ನಲ್ಲಿ ಈ ಎರಡೂ ಹಳ್ಳಿಗಳು ಕೂಡ ಹೈಟೆಕ್ ಸಿಟಿಯಲ್ಲದಿದ್ರೂ, ತಮ್ಮ ಹೆಸರಿನಿಂದಲೇ ಭಾರೀ ಫೇಮಸ್ ಆಗಿವೆlook

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here