ಮಂಡ್ಯ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಕೆಲವು ದಿನಗಳು ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದ ನಿಖಿಲ್ ಕುಮಾರಸ್ವಾಮಿ ಅವರು ಇತ್ತೀಚಿಗೆ ಸೋಲಿನ ಜವಾಬ್ದಾರಿಯನ್ನು ತನ್ನ ಮೇಲೆ ಹೊರೆಸಿಕೊಂಡಿದ್ದು ಗೊತ್ತಿರೋ ವಿಷಯ. ಅದರ ಜೊತಗೆ ಅವರು ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರ ಚೊಚ್ಚಲ ಸಿನಿಮಾ ಬಿಡುಗಡೆಗೆ ಮುನ್ನ ಅವರಿಗೆ ಶುಭಾಶಯಗಳನ್ನು ಕೋರುತ್ತಾ ಒಂದು ಸಂದೇಶವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಸಹಿತವಾಗಿ ಹಾಕಿದ್ದರು. ನಿಖಿಲ್ ಅವರು ರಾಜಕೀಯದ ವಿಷಯಗಳನ್ನು ಬದಿಗಿಟ್ಟು ಅಭಿಷೇಕ್ ಅವರಿಗೆ ಶುಭಾಶಯ ನೀಡಿದ್ದನ್ನು ಮೆಚ್ಚಿ ಕೊಂಡ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನಿಖಿಲ್ ಅವರನ್ನು ಅಭಿನಂದಿಸಿದ್ದಾರೆ.

ಎಸ್.ಎಂ.ಕೃಷ್ಣ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ನಿಖಿಲ್ ಅವರನ್ನು ಹೊಗಳುತ್ತಾ ಟ್ವೀಟ್ ಮಾಡಿದ್ದು, ಅಭಿಷೇಕ್ ಅವರಿಗೆ ಅಭಿನಂದನೆ ಸಲ್ಲಿಸಿರುವ ನಿಮ್ಮ ನಡೆ ನನ್ನನ್ನು ಪ್ರಭಾವಿತಗೊಳಿಸಿದೆ ಎಂದಿದ್ದಾರೆ ಎಸ್.ಎಂ.‌ಕೃಷ್ಣ. ಇದೇ ನಿಜವಾದ ಕ್ರೀಡಾ ಮನೋಭಾವ ಹಾಗೂ ಒಬ್ಬ ಸ್ಪರ್ಧಾಳುವಿನ ಗುಣ ಎಂದು ಹೊಗಳಿರುವ ಅವರು ರಾಜಕೀಯ ಹಾಗೂ ಚುನಾವಣೆಗಳು ಅನೇಕ ಹಂತಗಳಲ್ಲಿ ಸಾಗುತ್ತಾ ಹೋಗುತ್ತವೆ ಆದರೆ ಜೀವನ ರಾಜಕೀಯಕ್ಕಿಂತ ಹೊರತಾಗಿದ್ದು, ನೀನು ನಿಜವಾಗಿಯೂ ಗೆಲುವು ಸಾಧಿಸುವೆ ಎಂದು ನಿಖಿಲ್ ಅವರಿಗೆ ‌ಒಳ್ಳೆಯ ಭವಿಷ್ಯದ ಹಾರೈಕೆ ಮಾಡಿದ್ದಾರೆ ಎಸ್.ಎಂ.ಕೃಷ್ಣ ಅವರು.

ಇನ್ನು ನಿಖಿಲ್ ಅವರು ಕೂಡಾ ಎಸ್.ಎಂ.ಕೃಷ್ಣ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದು, ಅಭಿಷೇಕ್ ಗೆ ನಾನು ಅಭಿನಂದಿಸಿದ್ದನ್ನು ನೋಡಿ, ಸಮಯ ಹೊಂದಿಸಿ ನನಗೆ ಪ್ರತಿಕ್ರಿಯೆ ನೀಡಿರುವ ನಿಮಗೆ ಧನ್ಯವಾದಗಳು ಎಂದು ಎಸ್.ಎಂ.ಕೃಷ್ಣ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ ನಿಖಿಲ್ ಅವರು. ನನಗೆ ಬಹಳ ಕೃತಜ್ಞನಾಗಿದ್ದು, ನಿಮ್ಮ ಒಳ್ಳೆಯ ನುಡಿಗಳ ಮನಸ್ಸನ್ನು ಮುಟ್ಟಿವೆ ಎಂದು, ನಿಮ್ಮಂತಹ ಹಿರಿಯ ನಾಯಕರಿಂದ ಹೊಗಳಿಕೆ ದೊರೆತಿರುವುದು ಬಹಳ ಸಂತೋಷ ಎಂದು ನಿಖಿಲ್ ಅವರು ಎಸ್.ಎಂ.ಕೃಷ್ಣ ಅವರ ಮೆಚ್ಚುಗೆಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

Thank you very much Shri SM Krishnaa sir @sm_krishnaa for noticing my message to Abhishek and taking time to respond to…

Nikhil Gowda यांनी वर पोस्ट केले शनिवार, १ जून, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here