ಮಾನ್ಯ ಮುಖ್ಯಮಂತ್ರಿ ಅವರು ಇಂದು ಮಂಡ್ಯ ಜಿಲ್ಲೆಯಲ್ಲಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅವರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಮಂಡ್ಯ ಜಿಲ್ಲೆಯ ಪಾಲಹಳ್ಳಿಯಲ್ಲಿ ಮಾತನಾಡುವ ಸಂದರ್ಭದಲ್ಲಿ ಅವರು ಈ ಜಿಲ್ಲೆಯ ಸ್ವಾಭಿಮಾನ ಎತ್ತಿ ಹಿಡಿದಿರೋ ಮಗ ಅಂದ್ರೆ ಅದು ಈ ಕುಮಾರಸ್ವಾಮಿ ಎಂದು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾ, ನಿಮ್ಮ ಮುಗ್ದತೆಯನ್ನ ದುರಪಯೋಗ ಪಡಿಸಿಕೊಳ್ತಿರೋರಿಗೆ ನಿಮ್ಮ ಮತ ಹಾಕುವಿರಾ? ಎಂದು ಜನರನ್ನು ಪ್ರಶ್ನಿಸುತ್ತಟ, ನಾನು ನಿಮಗೆ ಏನು ಅನ್ಯಾಯ ಮಾಡಿದ್ದೀನಿ ಹೇಳಿ ಎಂದು ಜನರ ಮುಂದೆ ಬಹಳ ಭಾವನಾತ್ಮಕವಾಗಿ ಮಾತುಗಳನ್ನು ಆಡಿದ್ದಾರೆ.
ಇನ್ನು ರಾಜಕೀಯದಲ್ಲಿ ಅಂಬೆಗಾಲು ಕೂಡಾ ಇಟ್ಟಿಲ್ಲ ಅಂತಹ ಮಕ್ಕಳು ನನ್ನನ್ನು ಕಣ್ಣೀರು ಹಾಕ್ತಿನಿ ಅಂತ ಮಾತನಾಡುತ್ತಾ ಇವೆ ಎನ್ನುವ ಮೂಲಕ ಅವರು ಪರೋಕ್ಷವಾಗಿ ಅಭಿಷೇಕ್ ಅಂಬರೀಶ್​ಗೆ ಟಾಂಗ್ ಕೊಟ್ಟಿದ್ದಾರೆ.

ಮಂಡ್ಯದಲ್ಲಿ ನನ್ನ ಪರವಾಗಿ ಮೂಲ ಕಾಂಗ್ರೆಸ್​ನವರು ಇದ್ದಾರೆ. ಆದರೆ ನಮ್ಮ ಜೊತೆ ಇದ್ದವರೇ ನಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಂಬರೀಶ್ ಅವರು ಬದುಕಿದ್ದಾಗ ಅವರ ವಿರೋಧಿಗಳಾಗಿದ್ದವರು ಈಗ ಸುಮಲತಾ ಪರ ನಿಂತಿದ್ದಾರೆನ್ನುವ ಮೂಲಕ ಸುಮಲತ ಅವರ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಮುಖಂಡರಾದ ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ವಿರುದ್ದ ಸಿಎಂ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಅದು ಸಾಲದೆಂಬಂತೆ ಬಿಜೆಪಿ ಕೂಡಾ ಸುಮಲತಾ ಬೆಂಬಲಕ್ಕೆ ನಿಂತಿದೆ. ಈಗ ಮಂಡ್ಯದಲ್ಲಿ ನಡೆಯುತ್ತಿರುವ ಕುತಂತ್ರ ರಾಜಕೀಯಕ್ಕೆ ನಾನು ತಲೆ ಬಾಗುವುದಿಲ್ಲವೆಂದು ಕುಮಾರಸ್ವಾಮಿ ಅವರು ವಿರೋಚಿತವಾಗಿ ಮಾತನಾಡಿದ್ದಾರೆ.

ಮೇ. 23ರಂದು ಕುಮಾರಸ್ವಾಮಿ ಸರ್ಕಾರ ಹೋಗುತ್ತೆಂದು ಬಿಜೆಪಿ ಅವರು ಹೇಳುತ್ತಾರೆ. ಆದರೆ ಅವರು ಹೇಳಿದಷ್ಟು ಸುಲಭವಾಗಿ ನಮ್ಮ ಸರ್ಕಾರ ಬೀಳುವುದಿಲ್ಲ ಎಂಬ ಭರವಸೆಯ ಮಾತನ್ನು ಅವರು ಆಡಿದರು. ಇನ್ನು ನನ್ನ ಮಗ ಚುನಾವಣೆಗೆ ನಿಂತಿರುವುದು ತಪ್ಪಾ ಎಂದು ಜನರನ್ನು ಪ್ರಶ್ನಿಸಿದ್ದಾರೆ.
ಕೆಲವು ಉದಾಹರಣೆಗಳನ್ನು ಕೊಡುತ್ತಾ ಮಂಗಳೂರಿನವರಾದ ವೀರಪ್ಪ ಮೊಯಿಲಿ ಚಿಕ್ಕಬಳ್ಳಾಪುರದಲ್ಲಿ ಗೆದ್ದಿದ್ದರು, ಬಿಜೆಪಿಯ ಶೋಭಾ ಕರಂದ್ಲಾಜೆ ಯಶವಂತಪುರ ಹಾಗೂ ಚಿಕ್ಕಮಗಳೂರಿನಿಂದ ಚುನಾವಣೆ ಗೆದ್ದಿದ್ದರು ಎಂದು ಹೇಳಿದರು.

ಹೀಗೆ ಅವರೆಲ್ಲಾ ಬೇರೆ ಬೇರೆ ಕ್ಷೇತ್ರಗಳಲ್ಲಿ ಚುನಾವಣೆಗೆ ನಿಂತು ಗೆದ್ದಿರುವಾಗ ನನ್ನ ಮಗ ಮಂಡ್ಯದಲ್ಲಿ ಬಂದು ಸ್ಪರ್ಧೆ ಮಾಡಿದರೆ ಏನು ತಪ್ಪೆಂಬ ಅರ್ಥದಲ್ಲಿ ಅವರು ಜನರ ಮುಂದೆ ಪ್ರಶ್ನೆಗಳನ್ನು ಇಟ್ಟಿದ್ದಾರೆ. ಮುಂದುವರೆಸಿದ ಅವರು ನಿಖಿಲ್ ಗೆ ಒಂದು ಅವಕಾಶ ಕೊಟ್ಟು ನೋಡಿ, ಅವನು ಇಲ್ಲೇ ಮಣ್ಣಾಗ್ತಾನೆ ಎಂದು ಸಿಎಂ ಕುಮಾರಸ್ವಾಮಿ ಅವರು ಭಾವನಾತ್ಮಕವಾಗಿ ಭಾಷಣ ಮಾಡಿ ಜನರ ಮನ ಗೆಲ್ಲುವ ಪ್ರಯತ್ನವನ್ನು ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here