ಉಡುಪಿಯ ಕಾಪು ಬಳಿಯ ಸಾಯಿರಾಧಾ ರೆಸಾರ್ಟ್​ ಸೇರಿಕೊಂಡಿದ್ದ ಸಿಎಂ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ವಿವಿಧೆಡೆ ಪ್ರಚಾರ ಮಾಡಿದ್ದರು ಈ ಸಮಯದಲ್ಲಿ ಸಾಕಷ್ಟು ಬಳಲಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಂಚಮಟ್ಟಿಗೆ ವಿಶ್ರಾಂತಿ ಪಡೆಯಲು ಹಾಗೂ ದೇಹಕ್ಕೆ ಅಗತ್ಯವಿರುವ ಆಯುರ್ವೇದ ಚಿಕಿತ್ಸೆ ಮೊರೆ ಹೋಗಿದ್ದರು . ರೆಸಾರ್ಟ್ ನಲ್ಲಿ‌ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದ ವೈದ್ಯರು ಊಟದ ವಿಷಯದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಲು ಕುಮಾರಸ್ವಾಮಿ ಅವರಿಗೆ ಸೂಚನೆ ನೀಡಿದ್ದರು .ಅದರಂತೆ ಕಳೆದ ಕೆಲ ದಿನಗಳಿಂದ ಮಾಂಸಹಾರಿ ಆಹಾರವನ್ನು ಕುಮಾರಸ್ವಾಮಿ ಅವರು ತ್ಯಜಿಸಿ ಸಸ್ಯಹಾರಿ‌ ಆಹಾರ ಸೇವನೆ ಆರಂಭಿಸಿದ್ದಾರೆ.

ಉಡುಪಿಯಲ್ಲಿ ಪ್ರಕೃತಿ ಮತ್ತು ಆಯುರ್ವೇದ ಚಿಕಿತ್ಸೆ ಪಡೆದಿರುವ ಸಿಎಂ ಕುಮಾರಸ್ವಾಮಿ ಈಗಾಗಲೇ 3 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ವೈದ್ಯರ ಸಲಹೆಯಂತೆ ಮಾಂಸಾಹಾರವನ್ನು ತ್ಯಜಿಸಿ ಸಂಪೂರ್ಣ ಸಸ್ಯಾಹಾರಿಯಾಗಿದ್ದಾರೆ. ಚುನಾವಣಾ ಪ್ರಚಾರದ ವೇಳೆಯೂ 2 ಕೆಜಿ ತೂಕ ಇಳಿದಿತ್ತು. ಇದೀಗ ಡಯಟ್​ ಪಾಲಿಸುತ್ತಿರುವ ಸಿಎಂ ಮತ್ತಷ್ಟು ತೂಕ ಇಳಿಸಿಕೊಂಡಿದ್ದಾರೆ. ದೇವೇಗೌಡರಂತೆ ಇನ್ನುಮುಂದೆ ಕುಮಾರಸ್ವಾಮಿ ಕೂಡ ಶಾಖಾಹಾರಿಯಾಗಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.ಈ ನಡುವೆ ಮಂಡ್ಯದ ಫಲಿತಾಂಶದ ಬಗ್ಗೆ ಯೋಚನೆಯಲ್ಲಿ ಸಿಎಂ ತೊಡಗಿಸಿಕೊಂಡಿದ್ದಾರೆ ಎಂಬ ಗುಮಾನಿಗಳು ಇದ್ದು

ಇದರ ಬಗ್ಗೆ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ತಂದೆಗೆ ಧೈರ್ಯದ ಮಾತುಗಳನ್ನು ಆಡಿದ್ದಾರೆ ಎಂದು ತಿಳಿದು ಬಂದಿದೆ.ಸಿಎಂ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದ ನಿಖಿಲ್ ರಾಜಕೀಯ ಚಿಂತೆ ಬೇಡವೆಂದು ತಂದೆಗೆ ಸೂಚನೆ ನೀಡಿದ್ದಾರೆ. ಮಂಡ್ಯ ಕ್ಷೇತ್ರದ ಬಗ್ಗೆ ಚಿಂತಿಸಬೇಡಿ. ಅಲ್ಲಿಯ ಚುನಾವಣೆ ಫಲಿತಾಂಶ ಏನೇ ಬಂದರೂ ಚಿಂತೆ ಇಲ್ಲ. ನಿಮ್ಮ ಆರೋಗ್ಯ ನನಗೆ ಮುಖ್ಯ. ಯಾವಾಗ ಬೇಕಿದ್ದರೂ ರಾಜಕೀಯ ಮಾಡಬಹುದು. ಚಿಂತೆ ಬಿಟ್ಟು ಆರೋಗ್ಯದ ಕಡೆ ಹೆಚ್ಚು ಗಮನ ನೀಡಿ ಎಂದು ಅಪ್ಪನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ಮೊಮ್ಮಗನ ಮಾತಿಗೆ ದೇವೇಗೌಡರೂ ಧ್ವನಿಗೂಡಿಸಿದ್ದು, ಮೊದಲು ಆರೋಗ್ಯದ ಕಡೆ ಗಮನ ನೀಡುವಂತೆ ಸಲಹೆ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here