ಇಂದು ಬೆಳಿಗ್ಗೆ ನಿಖಿಲ್ ಕುಮಾರಸ್ವಾಮಿ ಮಾತನಾಡುತ್ತಾ ‘ಎ.ಸಿಯಲ್ಲಿ ಕುಳಿತು ಛತ್ರಿ ಹಿಡಿದು ಓಡಾಡುವವರಿಗೆ ಬಿಸಿಲಲ್ಲಿ ಕಷ್ಟವಾಗುತ್ತಿರಬಹುದು ಎಂದು ಹೇಳಿಕೆ ನೀಡಿದ್ದಾರೆ. ಕುಮಾರಣ್ಣನ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿದ್ದಾರಂತೆ. ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿರಿ ಮಗನೋ, ಕಿರಿ ಮಗನೋ ಮಗನೋ ಎಂಬುದನ್ನು ಸ್ಪಷ್ಟಪಡಿಸಬೇಕು. ನನ್ನ ಯೋಗ್ಯತೆ ಬಗ್ಗೆ ಪ್ರಶ್ನೆ ಮಾಡಲು ಅವರಾರು’ ಎಂದು ಪ್ರಶ್ನಿಸಿದರು .‘ನಮ್ಮ ತಾತ ದೇಶದ ಪ್ರಧಾನಮಂತ್ರಿಯಾಗಿದ್ದಾಗ ನಾವು ಬಾಡಿಗೆ ಮನೆಯಲ್ಲಿ ಇದ್ದೆವು. ಪ್ರತಿ ತಿಂಗಳು ₹ 5 ಸಾವಿರ ಬಾಡಿಗೆ ಕಟ್ಟುತ್ತಿದ್ದೆವು. ಆದರೆ ಕತ್ರಿಗುಪ್ಪೆಯಕಲ್ಲಿ ಬಾಡಿಗೆ ಮನೆಯಲ್ಲಿದ್ದ ಈ ಮನೋಭಾವ ( ಯಶ್ )  ಮನೆ ಬಾಡಿಗೆ ಕಟ್ಟಲು ಸಾಧ್ಯವಾಗಿಲ್ಲ. ಆದರೆ ಈಗ ಇಷ್ಟೆಲ್ಲಾ ಮಾತನಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದರು.

ಇದೀಗ ನಿಖಿಲ್ ಅವರ ಹೇಳಿಕೆಗೆ ರಾಕಿಂಗ್ ಸ್ಟಾರ್ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ‌. ಪಕ್ಷೇತರ ಅಭ್ಯರ್ಥಿ ನಟಿ ಸುಮಲತಾ ಅಂಬರೀಷ್​ ಪರ ಚುನಾವಣಾ ಪ್ರಚಾರಕ್ಕೆ ಧುಮುಕಿ ಹಲವರ ಕೆಂಗಣ್ಣಿಗೆ ಗುರಿಯಾಗಿರುವ ನಟ ಯಶ್​ ಅವರು ತಮ್ಮ ವಿರುದ್ಧ ಮಾತನಾಡುವವರಿಗೆ ಖಡಕ್​ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ.ಮಳವಳ್ಳಿ ತಾಲೂಕಿನ ಪೂರಿಗಾಲಿ ಗ್ರಾಮದಲ್ಲಿ ಬಿರುಸಿನ ಪ್ರಚಾರದ ನಡುವೆ ಮಾತನಾಡಿದ ಯಶ್​, ನಾವು ಚುನಾವಣಾ ಪ್ರಚಾರಕ್ಕೆ ಯಾಕೆ ಬಂದಿದ್ದೀವಿ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಚುನಾವಣೆಗೆ ಬಂದಿರುವುದಕ್ಕೆ ನಾವು ಕೆಟ್ಟವರಾಗಿದ್ದೀವಿ. ಆದರೆ, ಮನುಷ್ಯನಿಗೆ ನಿಯತ್ತು ಬಹಳ ಮುಖ್ಯ. ನಾನು ಬೆಳೆಯುವ ಸಂದರ್ಭದಲ್ಲಿ ಅಂಬರೀಷ್ ಅವರು ಬೆನ್ನಿಗೆ ನಿಂತು ಆಶೀರ್ವಾದ ಮಾಡಿದ್ದರು.

ಅವರ ಕುಟುಂಬಕ್ಕೆ ನಾವು ಮಕ್ಕಳ್ಳೇ, ಅದನ್ನು ಯಾರಾದರೂ ಟೀಕೆ ಮಾಡಿದರೆ, ಯಾವನಾದರೂ ಪ್ರಶ್ನೆ ಮಾಡಿದರೆ ಅದು ಸರಿಯಲ್ಲ ಎಂದು ನಿಖಿಲ್​ಗೆ ಟಾಂಗ್​ ನೀಡಿದರು.ಈ ಚುನಾವಣೆ ಮಂಡ್ಯದ ಸ್ವಾಭಿಮಾನದ ಪ್ರಶ್ನೆಯಾಗಿದೆ. ಅಂಬರೀಷ್ ಅಣ್ಣನ ಹೆಂಡತಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಅವರು ಚುನಾವಣೆಗೆ ಸ್ಪರ್ಧೆ ಮಾಡಿದ ತಕ್ಷಣವೇ ಕೆಟ್ಟವರಾಗೋದ್ರಾ? ನೀವು ಕೆಲಸ ಮಾಡಿದ್ದರೆ ಜನರು ಆಶೀರ್ವಾದ ಮಾಡುತ್ತಾರೆ. ಅದನ್ನು ಬಿಟ್ಟು ಗಂಡ ಸತ್ತವರು ಮನೆ ಸೇರಿಕೊಳ್ಳಬೇಕು. ಮನೆಯಿಂದ ಆಚೆ ಬರಬಾರದು. ಯಾವುದೋ ಊರಿಗೆ ಸೇರಿದವರು.

 

ಜಾತಿಗೆ ಸಂಬಂಧ ಪಟ್ಪವರಲ್ಲ ಎನ್ನುವುದು ಯಾವ ನ್ಯಾಯ ಸ್ವಾಮಿ, ಸುಮಲತಾ ಅವರಿಗೆ ಸಹಾಯ ಮಾಡುವುದಕ್ಕೆ ಬರುತ್ತೇವೆ ಅಂದರೆ ನಾವು ಕಳ್ಳೆತ್ತು ಆಗಿಬಿಡ್ತೀವಾ? ಎಂದು ಟೀಕಾ ಪ್ರಹಾರ ನಡೆಸಿದರು.ರೈತರ ಬಗ್ಗೆ ಅಭಿಮಾನ ನಮಗೂ ಇದೆ. ನನ್ನನ್ನು ಎಷ್ಟು ಹೀಯಾಳಿಸುತ್ತಾರೊ ನಾನು ಅಷ್ಟೇ ಮೆರಿತೀನಿ ಎಂದು ಜೆಡಿಎಸ್ ನಾಯಕರಿಗೆ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ ಯಶ್​, ಒಳ್ಳೆಯ ಸುವರ್ಣವಕಾಶ ಸಿಕ್ಕಿದೆ. ಸುಮಲತಾ ಅಕ್ಕ ಅವರು ಕೆಲಸ ಮಾಡುತ್ತಾರೆ. ಅವರ ಜತೆ ನಾವು ಇರುತ್ತೇವೆ. ಒಂದೇ ಒಂದು ಅವಕಾಶ ಮಾಡಿಕೊಡಿ ಎಂದು ಯಶ್​ ಕೈಮುಗಿದು ಮನವಿ ಮಾಡಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here