1. ಕಳೆದ ಎರಡು ದಿನಗಳ ಸುರಿದ ಭಾರೀ ಮಳೆಗೆ ಕರಾವಳಿಯಲ್ಲಿ ಬಲಿಯಾಗಿದ್ದ ಮುಗ್ಧ ಜೀವದ ದೇಹ ಪತ್ತೆಯಾಗಿದ್ದು ಕುಟುಂಬದ ಹಾಗೂ ಸಂಬಂಧಿಕರ ಆಕ್ರಂಧನ ಮುಗಿಲುಮುಟ್ಟಿದೆ. ಮಂಗಳವಾರ ಸುರಿದ ಭಯಂಕರ ಮಳೆಗೆ ಉಡುಪಿಯ ಕಾಪು ತಾಲ್ಲೂಕಿನ ಪಡುಬಿದ್ರೆಯಲ್ಲಿ ಬಾಲಕಿ ನಿಧಿ ಆಚಾರ್ಯಳ ಮೃತ ದೇಹ ದೊರೆತಿದ್ದು ಹೃದಯ ವಿದ್ರಾವಕ ವಾತಾವರಣ ಪಡುಬಿದಿರೆಯಲ್ಲಿ ಸೃಷ್ಠಿಯಾಗಿದೆ.!


ನಿನ್ನೆ ಬೆಂಗಳೂರಿನಿಂದ ಆಗಮಿಸಿದ ಎನ್ ಡಿ.ಆರ್.ಎಫ್ ಸಿಬ್ಬಂದಿ ಇಂದು ಬೆಳಗಿನ ಜಾವದಲ್ಲಿ ನಡೆಸಿದ ಬಿರುಸಿನ ಕಾರ್ಯಾಚರಣೆಯಲ್ಲಿ ನಿಧಿ ಆಚಾರ್ಯ ದೇಹ ಪತ್ತೆಯಾಗಿದ್ದು ಇದೇ ವೇಳೆ ಶಾಲಾ ಧರಿಸು , ಊಟದ ಬ್ಯಾಗ್ ಮತ್ತು ಜಾಕೆಟ್ ಸಿಕ್ಕಿವೆ ನಿನ್ನೆ ಶಾಲೆ ಮುಗಿಸಿ ಮನೆಗೆ ವಾಪಸ್ಸಾಗುವ ಸಮಯದಲ್ಲಿ ಸೈಕಲ್ ನಿಂದ ಬರುತ್ತಿದ್ದ ಬಾಲಕಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಳು‌. ಪಡುಬಿದಿರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು ನಂತರ ದೇಹವನ್ನು ಬಾಲಕಿಯ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here