ಬಿಗ್ ಬಾಸ್ ಸೀಸನ್ 7 ರ ಎಲಿಮಿನೇಷನ್ ಪ್ರಕ್ರಿಯೆ ಶನಿವಾರದ ಎಪಿಸೋಡ್ ನಲ್ಲಿ ಯಶಸ್ವಿಯಾಗಿ ಮುಗಿದಿದೆ. ನಾಮಿನೇಟ್ ಆಗಿದ್ದ ಮನೆಯ ಸದಸ್ಯರಲ್ಲಿ ರಾಜು ತಾಳಿಕೋಟೆ ಅವರು ಎಲಿಮಿನೇಟ್ ಆಗುವ ಮೂಲಕ ಬಿಗ್ ಹೌಸ್ ನಿಂದ ಹೊರ ಬಂದ ಸ್ಪರ್ಧಿಯಾಗಿದ್ದಾರೆ. ಮನೆಯನ್ನು ಪ್ರವೇಶಿಸಿದ್ದ ಹಿರಿಯ ಸದಸ್ಯರಲ್ಲಿ ಕೊನೆಯದಾಗಿ ಹೊರ ಬಂದವರು ರಾಜು ತಾಳಿಕೋಟೆ. ಉಳಿದವರು ಇವರಿಗಿಂತ ಮೊದಲೇ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ರಾಜು ತಾಳಿಕೋಟೆ ಅವರು ಎರಡು ವಾರಗಳ ಹಿಂದೆಯೇ ತಾನು ಹೊರಗೆ ಬರಬೇಕು, ಈ ಮನೆಯಲ್ಲಿರುವ ಇರಲಾಗುತ್ತಿಲ್ಲ ಎಂದು ಬಿಗ್ ಬಾಸ್ ಗೆ ಮನವಿ ಕೂಡಾ ಮಾಡಿದ್ದರು.

ಆದರೆ ಅವರು ಅಂದು ಎಲಿಮಿನೇಟ್ ಆಗಲಿಲ್ಲ. ಅವರ ಪಯಣ ಮತ್ತೊಂದು ವಾರಕ್ಕೆ ಮುನ್ನಡೆಯಿತು. ಮನೆಯ ಕ್ಯಾಪ್ಟನ್ ಕೂಡಾ ಆದರು. ಅವರು ಕ್ಯಾಪ್ಟನ್ ಆದ ವಾರದಲ್ಲಿ ಮನೆಯ ಎಲ್ಲ ಸದಸ್ಯರು ನಾಮಿನೇಟ್ ಆಗಿ, ಕ್ಯಾಪ್ಟನ್ ಮಾತ್ರ ನಾಮಿನೇಷನ್ ಇಂದ ಸೇವ್ ಆಗಿದ್ದರು. ಹೀಗೆ ಮತ್ತೊಂದು ವಾರಕ್ಕೆ ಅವರ ಜರ್ನಿ ಮುಂದೆ ಹೋಯಿತು. ಒಂಬತ್ತನೇ ವಾರಾಂತ್ಯಕ್ಕೆ ರಾಜು ತಾಳಿಕೋಟೆ ಅವರ ಬಿಗ್ ಬಾಸ್ ಪ್ರಯಾಣ ಮುಗಿದು, ಮನೆಯಿಂದ ಹೊರ ಬಂದಿದ್ದಾರೆ. ಮನೆಯ ಸದಸ್ಯರು ಭಾರವಾದ ಮನಸ್ಸುಗಳಿಂದ ಅವರನ್ನು ಬೀಳ್ಕೊಟ್ಟಿದ್ದಾರೆ.

ರಾಜು ತಾಳಿಕೋಟೆ ಅವರ ಸಂಭಾವನೆ ವಿಷಯವನ್ನು ಒಮ್ಮೆ ನೋಡೋಣ. ಈ ಬಾರಿ ಸೀಸನ್ ನಲ್ಲಿ ಬಿಗ್ ಬಾಸ್ ನಿಂದ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸ್ಪರ್ಧಿಗಳಲ್ಲಿ ಇವರು ಕೂಡಾ ಇದ್ದಾರೆ. ವಾರಕ್ಕೆ 50 ಸಾವಿರ ರೂಪಾಯಿಗಳ ಸಂಭಾವನೆ ಇವರಿಗೆ ನಿಗದಿಯಾಗಿತ್ತು. ಇನ್ನು ರಾಜು ತಾಳಿಕೋಟೆ ಅವರು ಒಂಬತ್ತು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಕಾರಣ ಅವರಿಗೆ ಒಟ್ಟು ನಾಲ್ಕೂವರೆ ಲಕ್ಷ ಸಂಭಾವನೆ ಬಿಗ್ ಬಾಸ್ ಮನೆಯಿಂದ ಸಿಗಲಿದೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here